ಜೈಪುರ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ನೆನಪಲ್ಲಿ ವಿಶ್ವದ ಅತ್ಯಂತ ಎತ್ತರದ “ಏಕತಾ ಪ್ರತಿಮೆ’ಯನ್ನು ನಿರ್ಮಾಣ ಮಾಡಲಾಗಿದೆ. 182 ಮೀಟರ್ ಎತ್ತರವಿರುವ ಪ್ರತಿಮೆ ಅದಾಗಿದೆ. ಈ ನಡುವೆ ವಿಶ್ವದಲ್ಲಿಯೇ ನಾಲ್ಕನೇ ಅತ್ಯಂತ ದೊಡ್ಡದು ಮತ್ತು ಭಾರತದಲ್ಲಿಯೇ ಅತ್ಯಂತ ಎತ್ತರವಾಗಿರುವ ಶಿವನ ಮೂರ್ತಿ (351 ಮೀಟರ್) ನಿರ್ಮಾಣ ಕಾರ್ಯ ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ನಾಥ್‌ದ್ವಾರದಲ್ಲಿ ನಿರ್ಮಾಣವಾಗುತ್ತಿದೆ. ಜೈಪುರದಿಂದ ಅಲ್ಲಿಗೆ 350 ಕಿಮೀ ದೂರವಿದೆ. ನಾಲ್ಕು ವರ್ಷಗಳಿಂದ 750 ಮಂದಿ ಕೆಲಸಗಾರರು ಅದಕ್ಕಾಗಿ ದುಡಿಯುತ್ತಿದ್ದಾರೆ. 2019ರ ಮಾರ್ಚ್ ವೇಳೆಗೆ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಈಗಾಗಲೇ ಶೇ.85ರಷ್ಟು ಕೆಲಸ ಪೂರ್ತಿಯಾಗಿದೆ.
351 ಮೀಟರ್ ನಿರ್ಮಾಣ ಆಗುತ್ತಿರುವ ಶಿವನ ಮೂರ್ತಿಯ ಎತ್ತರ
750 ಮಂದಿ ಕಾಮಗಾರಿಯಲ್ಲಿ ತೊಡಗಿಸಿ ಕೊಂಡವರು
ಹೆಗ್ಗಳಿಕೆ ಏನು?
ಕಾಮಗಾರಿ ಪೂರ್ತಿಯಾದ ಬಳಿಕ ದೇಶದಲ್ಲಿ ಅತ್ಯಂತ ಎತ್ತರದ ಶಿವನ ಮೂರ್ತಿ
ವಿಶ್ವದಲ್ಲಿಯೇ ನಾಲ್ಕನೇ ಅತ್ಯಂತ ಎತ್ತರದ್ದು