Advertisement

ವಿಶ್ವದ ಹಿರಿಯ ಗೊರಿಲ್ಲಾ ಸಾವು

10:01 AM Jan 28, 2018 | |

ಸ್ಯಾನ್‌ಡಿಯಾಗೋ: ವಿಶ್ವದ ಅತಿ ಹಿರಿಯ ಗೊರಿಲ್ಲಾ ಎಂಬ ಖ್ಯಾತಿಗೆ ಪಾತ್ರವಾಗಿದ್ದ ವಿಲಾ(60) ಸ್ಯಾನ್‌ಡಿಯಾಗೋದ ಝೂ ಸಫಾರಿ ಪಾರ್ಕ್‌ನಲ್ಲಿ ಸಾವಿಗೀಡಾಗಿದೆ. 5 ತಲೆಮಾರು ಕಂಡ ವಿಲಾಗೆ ಕಳೆದ ಅಕ್ಟೋಬರ್‌ನಲ್ಲಿ 60 ವರ್ಷ ತುಂಬಿತ್ತು. 

Advertisement

1957ರಲ್ಲಿ ಆಫ್ರಿಕನ್‌ ಕಾಂಗೋದಲ್ಲಿ ಹುಟ್ಟಿದ್ದ ವಿಲಾ,1959ರಲ್ಲಿ ಪ್ರಾಣಿ ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡಿತ್ತು. 1975ರಲ್ಲಿ ಇದನ್ನು ಸಫಾರಿ ಪಾರ್ಕ್‌ಗೆ ಸ್ಥಳಾಂತರ ಮಾಡಲಾಗಿತ್ತು. ವಿಲಾ  ಹಲವಾರು  ಗೊರಿಲ್ಲಾಗಳ ಬಾಡಿಗೆತಾಯಿಯೂ ಆಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ವಿಲಾ ಇತ್ತೀಚೆಗೆ ಸಾವಿಗೀಡಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಗೊರಿಲ್ಲಾಗಳು 35ರಿಂದ 40 ವರ್ಷ ಬದುಕುತ್ತವೆ. 

Advertisement

Udayavani is now on Telegram. Click here to join our channel and stay updated with the latest news.

Next