ಮುಂಬೈ: 2013ರ ಐಪಿಎಲ್ ನಲ್ಲಿ ನಡೆದ ಫಿಕ್ಸಿಂಗ್ ಪ್ರಕರಣದ ನಂತರ ಭಾರತದಲ್ಲಿ ಕ್ರೀಡಾ ಸಂಬಂಧಿ ಭ್ರಷ್ಟಾಚಾರಗಳಿಗೆ ತಡೆಯೊಡ್ಡಲಾಗಿದೆಯೇ? ಇಲ್ಲ ಎನ್ನುತ್ತಿದ್ದಾರೆ ಭ್ರಷ್ಟಾಚಾರ ವಿರೋಧಿ ಇಲಾಖೆಯ ಅಧಿಕಾರಿಗಳು.
ಅಧಿಕಾರಿಗಳ ಮಾಹಿತಿ ಪ್ರಕಾರ ಇತ್ತೀಚಿನ ದಿನಗಲ್ಲಿ ಫಿಕ್ಸಿಂಗ್ ಭೂತ ಕಾಡುತ್ತಿರುವುದು ರಾಜ್ಯ ಕ್ರಿಕೆಟ್ ಕೂಟಗಳಲ್ಲಿ. ಹೆಚ್ಚು ಜನಪ್ರಿಯವಲ್ಲದ ಸಣ್ಣ ಮಟ್ಟದ ಕೂಟಗಳನ್ನು ಈ ದಂಧೆಕೋರರು ಬಳಸಿಕೊಳ್ಳುತ್ತಿದ್ದಾರೆ. ಮತ್ತು ಇಲ್ಲಿ ಉತ್ತಮ ಹಣ ಸಂಪಾದನೆ ಮಾಡಿಕೊಳ್ಳುತ್ತಾರೆ.
ಐಸಿಸಿ ತನಿಖಾ ಸಂಯೋಜಕ ಸ್ಟೀವ್ ರಿಚರ್ಡ್ ಸನ್ ಈ ಕುರಿತು ಮಾತನಾಡಿ, ನಾವು ನಡೆಸಿದ 50 ಕ್ರೀಡಾ ಭ್ರಷ್ಟಾಚಾರಗಳಲ್ಲಿ ಹೆಚ್ಚಿನವು ಭಾರತದ ಜೊತೆಗೆ ಸಂಪರ್ಕ ಹೊಂದಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಭಾರತೀಯ ಕ್ರಿಕೆಟಿಗರ ಹೆಸರು ಹೊರಬೀಳಬಹುದು. ಆದರೆ ಬುಕ್ಕಿಗಳ ಮತ್ತು ಆಟಗಾರರ ಸಂಪರ್ಕವು ತಡೆರಹಿತವಾಗಿರುತ್ತದೆ. ಯಾಕೆದರೆ ಆಟಗಾರರು ಈ ಜಾಲದ ಅಂತಿಮ ಕೊಂಡಿಗಳು. ಈ ಜಾಲದ ಪ್ರಮುಖರು ಹೊರಗೆ ಇರುತ್ತಾರೆ. ಬೇರೆಯವರ ಮುಖಾಂತರ ಆಟಗಾರರನ್ನು ಆಡಿಸುತ್ತಾರೆ. ಆಟಗಾರರನ್ನು ಸತತವಾಘಿ ಸಂಪರ್ಕಿಸುವ ಎಂಟು ಭಾರತೀಯರ ಹೆಸರುಗಳನ್ನು ನಾನು ಬೇಕಾದರೆ ಭಾರತದ ತನಿಖಾ ಸಂಸ್ಥೆಗಳಿಗೆ ನೀಡಬಲ್ಲೆ ಎಂದು ರಿಚರ್ಡ್ಸ ಸನ್ ಹೇಳಿದ್ದಾರೆ.
ಈ ಭ್ರಷ್ಟಾಚಾರದ ಜಾಲ ಹೇಗೆ ಹಬ್ಬಿದೆ ಎಂದರೆ ಫಿಕ್ಸಿಂಗ್ ಗೆ ಒಳಪಡುವ ( ಆಟಗಾರರು, ಸಹಾಯಕರು, ಅಧಿಕಾರಿಗಳು, ತಂಡದ ಮಾಲೀಕರು) ಗೆ ಕೊಡುವ ಹಣ ಊಹಿಸಲಾಗದ್ದು. 30 ಸಾವಿರದಿಂದ 40 ಸಾವಿರ ಕೋಟಿಯವರೆಗೆ ಇದರಲ್ಲಿ ಹಣ ಬಟವಾಡೆಯಾಗುತ್ತದೆ ಎಂದಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರತೀ ಪಂದ್ಯದಲ್ಲಿ 18 ಕೋಟಿ. ರೂ ನಷ್ಟು ಫಿಕ್ಸಿಂಗ್ ನಡೆಯುತ್ತದೆ ಎನ್ನಲಾಗಿದೆ.