Advertisement

ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ‌ಫಾರ್ಮ್

09:46 AM Jun 05, 2020 | Suhan S |

ಹುಬ್ಬಳ್ಳಿ: ಇಲ್ಲಿನ ರೈಲು ನಿಲ್ದಾಣದ ಇನ್ಸ್‌ಪೆಕ್ಷನ್‌ ಕ್ಯಾರೇಜ್‌ ಲೈನ್‌ ಅನ್ನು ಪ್ಲಾಟ್‌ಫಾರ್ಮ್ ಆಗಿ ಮಾರ್ಪಡಿಸಲಾಗುತ್ತಿದ್ದು, ಇದು ಪೂರ್ಣಗೊಂಡರೆ ವಿಶ್ವದ ಅತಿ ಉದ್ದದ ಪ್ಲಾಟ್‌ ಫಾರ್ಮ್ ಎನಿಸಲಿದೆ.

Advertisement

ಪ್ರಸ್ತುತ ಹುಬ್ಬಳ್ಳಿ ಯಾರ್ಡ್‌ನಲ್ಲಿ 5 ಪ್ಲಾಟ್‌ಫಾರ್ಮ್ಗಳಿದ್ದು, ಅವುಗಳ ಸಂಖ್ಯೆಯನ್ನು 8ಕ್ಕೆ ಹೆಚ್ಚಿಸಲಾಗುವುದು. ಪ್ರಸ್ತುತ ಪ್ಲಾಟ್‌ಫಾರ್ಮ್ 550 ಮೀಟರ್‌ ಉದ್ದವಿದ್ದು, ಇದು 1400 ಮೀಟರ್‌ಗಳಿಗೆ ಹೆಚ್ಚಲಿದೆ. ಗೋರಖ್‌ಪುರದ ಪ್ಲಾಟ್‌ಫಾರ್ಮ್ (1366 ಮೀ.) ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಎಂಬ ಪ್ರಸಿದ್ಧಿ ಪಡೆದಿದ್ದು, ಆ ಶ್ರೇಯವನ್ನು ಹುಬ್ಬಳ್ಳಿಯ ಪ್ಲಾಟ್‌ಫಾರ್ಮ್ ತನ್ನದಾಗಿಸಿಕೊಳ್ಳಲಿದೆ. ರೈಲ್ವೆ ನಿಲ್ದಾಣಕ್ಕೆ ಮುಖ್ಯ ಪ್ರವೇಶದ್ವಾರ ಹಾಗೂ ಗದಗ ರಸ್ತೆಯ ಪ್ರವೇಶ ದ್ವಾರವಿದ್ದು, ಇನ್ನೊಂದು ದ್ವಾರವನ್ನು ನಿರ್ಮಿಸಲಾಗುವುದು. 90 ಕೋಟಿ ರೂ. ವೆಚ್ಚದಲ್ಲಿ ಯಾರ್ಡ್‌ ಪೂರ್ಣಗೊಳ್ಳಲಿದೆ. ಇದರಲ್ಲಿ ಸಿಗ್ನಲಿಂಗ್‌, ಇಲೆಕ್ಟ್ರಿಕಲ್‌ ವೆಚ್ಚ, ಕಟ್ಟಡ ನಿರ್ಮಾಣ ವೆಚ್ಚ ಸೇರಿದೆ. ಕಾಮಗಾರಿ ನವೆಂಬರ್‌ನಲ್ಲಿ ಆರಂಭಗೊಂಡಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಸಿಪಿಆರ್‌ಒ ಇ. ವಿಜಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next