Advertisement

ವಿಶ್ವದ ಅತಿದೊಡ್ಡ ಉಭಯಚರ ಯುದ್ಧ ವಿಮಾನ ಹಾರಾಟ ಶುರು

11:52 AM Dec 25, 2017 | Team Udayavani |

ಬೀಜಿಂಗ್‌: ಸಮುದ್ರದಿಂದ ಹಾಗೂ ನೆಲದಿಂದಲೂ ಹಾರಾಟ ನಡೆಸಬಹುದಾದ ಬೃಹತ್‌ ಯುದ್ಧವಿಮಾನವನ್ನು ಚೀನಾ ನಿರ್ಮಿಸಿದ್ದು, ಭಾನುವಾರ ಮೊದಲ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಝುಹೈ ವಿಮಾನ ನಿಲ್ದಾಣದಿಂದ ದಕ್ಷಿಣ ಚೀನಾ ಸಮುದ್ರದ ದಂಡೆಗೆ ಮೊದಲ ಹಾರಾಟ ನಡೆಸಲಾಗಿದೆ. ಬೋಯಿಂಗ್‌ 737 ವಿಮಾನದಷ್ಟೇ ದೊಡ್ಡದಾಗಿರುವ ಈ ವಿಮಾನ, ಚೀನಾ ನೌಕಾಪಡೆಗೆ ಅತ್ಯಂತ ಮಹತ್ವದ್ದಾಗಿರಲಿದೆ.

Advertisement

ದಕ್ಷಿಣ ಚೀನಾ ಭಾಗದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಉಭಯಚರ ವಿಮಾನವು ಮಹತ್ವದ ಪಾತ್ರ ವಹಿಸಲಿದೆ. ಮೂಲಗಳ ಪ್ರಕಾರ ಇದನ್ನು ರಕ್ಷಣಾ ಕಾರ್ಯಾಚರಣೆ ಮತ್ತು ಕಾಡ್ಗಿಚ್ಚು ನಿಯಂತ್ರಿಸಲು ಬಳಕೆಯಾಗುವಂತೆಯೂ ವಿನ್ಯಾಸ ಮಾಡಲಾಗಿದೆ ಎಂದು ಚೀನಾ ಹೇಳಿಕೊಂಡಿದೆ.

ಸರ್ಕಾರಿ ಸ್ವಾಮ್ಯದ ಏವಿಯೇಶನ್‌ ಇಂಡಸ್ಟ್ರಿ ಕಾರ್ಪೋರೇಶನ್‌ ಈ ವಿಮಾನವನ್ನು ಕೇವಲ ಎಂಟು ವರ್ಷಗಳಲ್ಲೇ ಸಿದ್ಧಪಡಿಸಿದೆ. ಈ ವರ್ಷದ ಆರಂಭದಲ್ಲೇ ಇದು ಹಾರಾಟಕ್ಕೆ ಸಿದ್ಧವಾಗಲಿದೆ ಎಂದು ಹೇಳಲಾಗಿತ್ತಾದರೂ, ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಿದ ನಂತರ ಮೊದಲ ಹಾರಾಟ
ನಡೆಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಾಗಿದೆ. ಎಜಿ600 ಎಂದು ಹೆಸರಿಸಲಾದ ಈ ವಿಮಾನವು ಒಮ್ಮೆಗೆ 50 ಜನರನ್ನು ಹೊತ್ತೂಯ್ಯಬಹುದು. ಒಂದೇ ಬಾರಿಗೆ 20 ಮೆಟ್ರಿಕ್‌ ಟನ್‌ ನೀರನ್ನು ಸಾಗಿಸಬಹುದು.ಇದರಿಂದ ರಕ್ಷಣೆ ಕಾರ್ಯ ಹಾಗೂ ಕಾಡ್ಗಿಚ್ಚು ನಿವಾರಿಸುವುದಕ್ಕೆ ಅತ್ಯಂತ ಸೂಕ್ತ ವಿಮಾನ ಇದಾಗಿರಲಿದೆ. ಇದು ಟರ್ಬೋಪ್ರಾಪ್‌ ಇಂಜಿನ್‌ಗಳನ್ನು ಹೊಂದಿದೆ.

ಈಗಾಗಲೇ ಚೀನಾದ ಹಲವು ಇಲಾಖೆಗಳು ಮತ್ತು ಕಂಪನಿಗಳು 17 ವಿಮಾನಗಳಿಗೆ ಬೇಡಿಕೆ ಸಲ್ಲಿಸಿವೆ. 4500 ಕಿ.ಮೀವರೆಗೆ ಇದು ಪ್ರಯಾಣಿಸಬಹುದಾಗಿದ್ದು, 53.5 ಟನ್‌ ಭಾರವನ್ನು ಹೊತ್ತೂಯ್ಯಬಹುದು. 

ಎಜಿ 600 ವೈಶಿಷ್ಟ್ಯಗಳು:
*08 ವರ್ಷಗಳು. ವಿಮಾನ ನಿರ್ಮಾಣಕ್ಕೆ ತಗುಲಿದ ಅವಧಿ

Advertisement

*50 ಜನರನ್ನು ಕೊಂಡೊಯ್ಯಬಲ್ಲ ಸಾಮಥ್ಯ

*20 ಮೆಟ್ರಿಕ್‌ ಟನ್‌- ನೀರನ್ನು ಒಂದೇ ಬಾರಿಗೆ ಸಾಗಿಸಬಲ್ಲದು.

53.5;ಟನ್‌- ಭಾರ ಹೊರುವ ಸಾಮರ್ಥ್ಯ

*4ವಿಮಾನದಲ್ಲಿರುವ ಟರ್ಬೋಪ್ರಾಪ್‌ ಎಂಜಿನ್‌ಗಳ ಸಂಖ್ಯೆ

*4,500ಕಿ.ಮೀ.-ಗರಿಷ್ಠ ಪ್ರಯಾಣ ಸಾಮರ್ಥ್ಯ.

Advertisement

Udayavani is now on Telegram. Click here to join our channel and stay updated with the latest news.

Next