Advertisement
57 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಅಂಶು ಮಲಿಕ್ ಚಿನ್ನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಅವರು 2016ರ ಒಲಿಂಪಿಕ್ಸ್ ಚಾಂಪಿಯನ್, ಅಮೆರಿಕದ ಹೆಲೆನ್ ಲೂಯಿಸ್ ಮರೌಲಿಸ್ ವಿರುದ್ಧ 1-4 ಅಂತರದಿಂದ ಪರಾಭವಗೊಂಡು ಬೆಳ್ಳಿಗೆ ತೃಪ್ತಿಪಡಬೇಕಾಯಿತು.
Related Articles
ಭಾರತದ ಮತೋರ್ವ ಕುಸ್ತಿಪಟು ಸರಿತಾ ಮೋರ್ (59 ಕೆಜಿ) ಸ್ವೀಡನ್‌ನ ಸಾರಾ ಜೋನಾ ಲಿಂಡ್‌ಬೋರ್ಗ್ ವಿರುದ್ದ 8-2 ಅಂತರದಿಂದ ಗೆಲುವು ಸಾಧಿಸಿ ಕಂಚಿನ ಪದಕ ಜಯಿಸಿದರು. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದ ಭಾರತದ 6ನೇ ಮಹಿಳಾ ಕುಸ್ತಿಪಟುವಾಗಿ ಹೊರಹೊಮ್ಮಿದರು.
Advertisement