Advertisement

ವಿಶ್ವ ಪ್ರವಾಸೋದ್ಯಮ ದಿನ: ಕಣ್ಮನ ಸೆಳೆಯುವ ಕನಕ ದಾಸರ ಅರಮನೆ

03:35 PM Sep 27, 2020 | Karthik A |

ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸ ಎಂದರೆ ಎಲ್ಲರಿಗೂ ಎಲ್ಲೆ ಇಲ್ಲದ ಉತ್ಸಾಹ, ಉನ್ಮಾದ. ಇದಕ್ಕೆ ಕಾರಣವೂ ಇದೆ.

Advertisement

ಇದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ಕಟ್ಟಿಕೊಡುತ್ತದೆ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸದ ಪಾತ್ರವನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ದೇಶ ಸುತ್ತುಕೋಶ ಓದು ಎನ್ನುವ ಮಾತನ್ನು ಈ ದಿನ ಸದಾ ನೆನಪಿಸುತ್ತಲೇ ಇರುತ್ತದೆ. ಏಕೆಂದರೆ ಒಂದು ಪ್ರವಾಸದಲ್ಲಿ ಸಿಗುವ ಅನುಭವ ಪುಸ್ತಕ ಓದುವುದಕ್ಕಿಂತಲು ಹೆಚ್ಚಿನದು ಎಂದರೆ ಅತಿಶಯೋಕ್ತಿಯಲ್ಲ. ಜತೆಗೆ ಮನಸಿಗೆ ಸ್ವಲ್ಪ ಮಟ್ಟಿಗೆ ವಿರಾಮ ಸಿಗುತ್ತದೆ.

ಇಂದು ಭಾರತದಲ್ಲಿ ಪ್ರವಾಸೋದ್ಯಮವು ಲಕ್ಷಾಂತರ ಮಂದಿಗೆ ಉದ್ಯೋಗವನ್ನು ನೀಡಲು ಸಫ‌ಲವಾಗಿದೆ. ಪ್ರವಾಸ ಎಂದರೆ ಅದು ಕೇವಲ ಸುತ್ತಾಟವಲ್ಲ. ಅಲ್ಲಿ ಒಂದು ಕಲಿಕೆ ಇರುತ್ತದೆ. ಕೃಷಿ ಪ್ರವಾಸೋದ್ಯಮ, ಅಡುಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳಿವೆ.

ದಿನದ ಹಿನ್ನೆಲೆ ಏನು?
ಪ್ರವಾಸೋದ್ಯಮ ದಿನದ ಹಿನ್ನಲೆ 1997ರಿಂದ ಆಚರಣೆಯಲ್ಲಿರುವ ಈ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟಂಬರ್‌ 27 ಅನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಲಾಯಿತು. ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್‌ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ.

Advertisement

ಹಾಗೆ ನೋಡುವುದಾದರೆ ಪ್ರವಾಸೋದ್ಯಮ ಅಥವಾ ಯೋಜಿತ ಪ್ರವಾಸವು ಮನರಂಜನೆ ವಿರಾಮ ಅಥವ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಒಂದು ಪ್ರಯಾಣವಾಗಿದೆ. ಪ್ರವಾಸ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ.

ವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ. ಪ್ರವಾಸ ಎಂದರೆ ಅದು ಕೇವಲ ಸುತ್ತಾಟವಲ್ಲ. ಅಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಲಿಕೆಗೆ, ರೈತರಿಗೆ ಕೃಷಿಗೆ ಸಹಕಾರಿಯಾಗುವ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳನ್ನು ಕಾಣಬಹುದು.

ನಾವು ಮನಸ್ಸಿಗೆ ವಿಶ್ರಾಂತಿಯನ್ನು ನೀಡಲು ಪ್ರವಾಸ ಕೈಗೊಂಡಿದ್ದು ಕನಕದಾಸರ ಅರಮನೆಗೆ. ಕನಕ ದಾಸರ ಅರಮನೆಯು ನಮ್ಮ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿದೆ ಈ ಭವ್ಯ ಸ್ಥಳ. ಶಿಗ್ಗಾಂವಿಯಿಂದ 7 ಕೀ.ಮೀ., ಬಂಕಾಪೂರ ಪಟ್ಟಣದಿಂದ 6 ಕಿ.ಮೀ. ಮತ್ತು ಹಾವೇರಿಯಿಂದ 25 ಕೀ.ಮೀ. ಇದೆ.

ಅರಮನೆಯು ಬೃಹತ್ ಗಾತ್ರದ ಬಾಗಿಲುಗಳನ್ನು ಹೊಂದಿದೆ. ಅರಮನೆಯ ಹೊರಗಡೆ ನಿಂತು ನೋಡಿದರೆ ಒಂದು ಕ್ಷಣ ಹಳೆಯ ಕಾಲದ ರಾಜರ ಅರಮನೆಯ ಮುಂದೆ ಇದ್ದೇವೆ ಎಂಬ ಭಾವ ಮೂಡುತ್ತದೆ. ಅರಮನೆಯ ಮುಂದೆ ಸುಂದರವಾಗಿ ನಿರ್ಮಾಣವಾದ ನೀರಿನ ಕಾರಂಜಿ, ಹಸುರಿನಿಂದ ಕೂಡಿದ ಉದ್ಯಾನವನ್ನೂ ಕಾಣಬಹುದು. ಅರಮನೆಯು ಬೃಹತ್ ಆಕಾರದ ಬಾಗಿಲನ್ನು ಹಿಂದಿದ್ದು ಪ್ರವೇಶಿಸುತ್ತಿದಂತೆ ಬಾಗಲಿನ ಎರಡು ಕಡೆಗೆ ಅಂದಿನ ಕಾಲದ ರೀತಿಯಲ್ಲಿ ಆಕಾರದ ದ್ವಾರ ಪಾಲಕರ ಮೂರ್ತಿಯನ್ನು ನಿರ್ಮಿಸಲಾಗಿದೆ.

ಹಾಗೆ ನೊಡುತ್ತ ಒಳಗೆ ಸಾಗಿ ನೇರವಾಗಿ ನಮಗೆ ಕಾಣುವುದು ಕನಕದಾಸರು ಕುಳಿತುಕೊಂಡು ಕೀರ್ತನೆಗಳನ್ನು ಬರೆಯುತ್ತಿರುವ ಮೂರ್ತಿ. ಅರಮನೆಯ ಒಳ ಪ್ರವೇಶ ನೋಡುತ್ತಾ ಹೋದಾಗ ಗೋಡೆಗಳು ಮೇಲೆ ಕನಕದಾಸರು ಬರೆದಂತಹ ಕಿರ್ತನೆಗಳನ್ನು ಶಿಲೆಯಲ್ಲಿ ಕೆತ್ತಲಾಗಿದೆ. ಕನಕದಾಸರು ಪ್ರತಿಯೊಂದು ಕೀರ್ತನೆಗಳನ್ನೂ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಅವರ ಪ್ರತಿಯೊಂದು ಕೀರ್ತನೆಗಳನ್ನು ಜೀವನದಲ್ಲಿ ಅರ್ಥವನ್ನು ನೀಡುತ್ತದೆ. ಅಲ್ಲದೇ ಅವರ ಜೀವನದ ಕುರಿತ ಚಿತ್ರಗಳನ್ನು ಕಾಣಬಹುದು.

ಕನಕದಾಸರಿಗೆ ದೋಣಿಯಲ್ಲಿ ಅವಕಾಶ ಅವಕಾಶ ನಿರಾಕರಿಸಿದಾಗ, ಬಾಳೆ ಎಲೆ ಮೇಲೆ ಕುಳಿತು ನದಿಯನ್ನು ದಾಟುವ ಸನ್ನಿವೇಶ. ಇನ್ನೂ ಹಲವಾರು ಸನ್ನಿವೇಶಗಳನ್ನ ಗೋಡೆಯ ಮೇಲೆ ಚಿತ್ರಿಸಲಾಗಿದೆ. ಅವರ ಪ್ರತಿಯೊಂದು ಕಿರ್ತನೆಗಳು ಜೀವನದಲ್ಲಿ ಅರ್ಥವನ್ನು ನೀಡುತ್ತದೆ. ಹಾಗೆ ಒಳಗೆ ನೋಡುತ್ತಾ ಹೊರಟಾಗ ನಮಗೆ ಆಕಾರ್ಶಣೆ ಆಗುವುದು ದರ್ಬಾರ್ ಹಾಲ್. ಇದನ್ನು ಕಂಡಾಗ ಒಂದು ಹಿಂದಿನ ಕಾಲದ ರಾಜವೈಭವ ಮರುಕಳಿಸಿದ ಅನುಭವವಾಗುತ್ತದೆ. ಅರಮನೆಯ ಮುಂಭಾಗ ನಿಂತು ಮೇಲೆ ನೋಡಿದಾಗ ಹಸುರು, ನೀಲಿ, ಕೆಂಪು ಹೀಗೆ ಕೆಲವು ಬಣ್ಣ ಬಣ್ಣದ ಧ್ವಜಗಳನ್ನ, ದೊಳ್ಳು ಬಾರಿಸುವಂತಹ ಮೂರ್ತಿಗಳನ್ನು ಕಾಣಬಹುದು.

ಅರಮನೆ ವೀಕ್ಷಣೆ ವಿಶ್ರಾಂತಿ ಪಡೆಯಲು ಅರಮನೆಯ ಹೊರಗಡೆ ಮತ್ತು ಒಳಗೆ ಸುಂದರವಾದ ಹಸುರಿನಿಂದ ಕೂಡಿದ ಗಾರ್ಡನ್ ಕಾಣಬಹುದು. ಅಲ್ಲಿಯೇ ಕೆಲವು ಕಾಲ ವಿಶ್ರಾಂತಿ ಪಡೆಯಬಹುದು. ನೀವೂ ಒಂದು ಸಲ ಭೇಟಿ ನೀಡಿ ಕನಕದಾಸರ ಅರಮನೆಯ ವೈಭವವನ್ನು ಕಣ್ತುಂಬಿಕೊಳ್ಳಿ.

 ಮುತ್ತಪ್ಪ ಎಸ್.ಕ್ಯಾಲಕೊಂಡ, ಹಾವೇರಿ 

 ಚಿತ್ರಗಳು: ಶಶಿಧರಸ್ವಾಮಿ.ಆರ್.ಹೀರೆಮಠ 

 

 

Advertisement

Udayavani is now on Telegram. Click here to join our channel and stay updated with the latest news.

Next