ಪ್ರವಾಸಿಗರು ನೋಡಲೇಬೇಕಾದ ಪ್ರವಾಸಿ ತಾಣವೆಂದರೆ ಅದು ಸಿರಿಮನೆ ಫಾಲ್ಸ್ ,ನೋಡಲು ಸುತ್ತಲೂ ಹಚ್ಚ ಹಸಿರು ಏಕೆಂದರೆ ಇದು ಇರುವುದು ಮಲೆನಾಡಿನಲ್ಲಿ. ಹೌದು ಸಿರಿಮನೆ ಜಲಪಾತವು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಿಗ್ಗ ಎಂಬ ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿದೆ.
ಶ್ರೀ ಕ್ಷೇತ್ರ ಶೃಂಗೇರಿಗೆ ಬರುವ ಭಕ್ತಾದಿಗಳು ಮಲೆನಾಡಿನ ಹಚ್ಚ ಹಸಿರನ್ನು ಸವಿಯಬೇಕಾದರೆ ಸಿರಿಮನೆ ಜಲಪಾತ ವೀಕ್ಷಿಸಲೇ ಬೇಕು,ಈ ಸಿರಿಮನೆ ಜಲಪಾತ ಸುಮಾರು 40 ಅಡಿ ಎತ್ತರವಿದೆ ಮತ್ತು ಸುತ್ತಲೂ ಹಚ್ಚ ಹಸಿರಾಗಿದ್ದು ಪ್ರಶಾಂತವಾಗಿದೆ. ಜಲಪಾತ ಎಂದರೆ ಮಳೆಗಾಲದಲ್ಲಿ ವೀಕ್ಷಿಸಲು ಸುಂದರವಾಗಿರುತ್ತದೆ ಹಾಗೆ ನಾನು ಸಹ ಮಳೆಗಾಲದಂದೆ ಸಿರಿಮನೆ ಜಲಪಾತ ನೋಡೋಣ ಎಂದು ಹೋದೆ. ಮೊದಲೇ ಚಳಿಯ ವಾತಾವರಣವಿದ್ದು ಅಲ್ಲಿಗೆ ತಲುಪುವ ರಸ್ತೆಯು ಹತ್ತಿರವಾಗುತ್ತಿದ್ದಂತೆ ಜಲಪಾತದ ಶಬ್ದ ನಮ್ಮ ಕಿವಿ ಮುಟ್ಟಿತ್ತು ಅಬ್ಬಾ! ಕೊನೆಗೂ ಜಲಪಾತ ಬಂದೇ ಬಿಡ್ತು.
ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿ ಕೂಡ ಸಿರಿಮನೆಯ ಸೌಂದರ್ಯ ಆಸ್ವಾದಿಸಲು ಬಂದಿದ್ದರು. ಸಿರಿಮನೆಯಲ್ಲಿ ಕಡಿಮೆ ಪ್ರವೇಶ ಶುಲ್ಕವನ್ನು ಸಂಗ್ರಹಿಸುತ್ತಾರೆ ಹಾಗೆ ಅದನ್ನು ಕೂಡ ಕಿಗ್ಗ ಮನೆಗಳನ್ನು ಬೆಳಗಿಸುವ ಅದೇ ಜಲಪಾತದ ಪಕ್ಕದಲ್ಲಿ ಇರುವ ಸಣ್ಣ ಹೈಡ್ರಾಲಿಕ್ ವಿದ್ಯುತ್ ಗೆ ಸೇರಿಸುತ್ತಾರೆ. ಆ ಚಳಿಗೆ ಬೇಕಾಗುವಂತಹ ಬಿಸಿ ಬಿಸಿ ತಿಂಡಿಗಳನ್ನು ಮಾರುತ್ತಾ ಇರ್ತಾರೆ. ಸಿರಿಮನೆ ಜಲಪಾತದ ಕೆಳಗೆ ಮಕ್ಕಳಿಗೆ ಕೂಡ ಆಟ ಆಡಲು ತುಂಬಾ ಸುರಕ್ಷಿತ ಸ್ಥಳ ಅಂತಾನೆ ಹೇಳಬಹುದು.
ಬಿ ಶರಣ್ಯ ಜೈನ್, ದ್ವಿತೀಯ ಪತ್ರಿಕೋದ್ಯಮ
ಎಸ್.ಡಿ.ಎಂ ಕಾಲೇಜು ಉಜಿರೆ