Advertisement

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ ಟೇಬಲ್ ; ಟೀಂ ಇಂಡಿಯಾಗೆ ಆಸೀಸ್ ಕ್ಲೋಸ್ ಫೈಟ್

10:02 AM Jan 07, 2020 | Hari Prasad |

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕ ಪಟ್ಟಿಯಲ್ಲಿ ಮಾಜೀ ವಿಶ್ವ ಚಾಂಪಿಯನ್ ಶಿಪ್ ನ ಅಂಕಪಟ್ಟಿಯಲ್ಲಿ ಅಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಜಿಗಿದಿದೆ. ಸದ್ಯ ಮುಕ್ತಾಯಗೊಂಡ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಮಾಜೀ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 296 ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. 360 ಅಂಕಗಳನ್ನು ಹೊಂದಿರುವ ಭಾರತ ತಂಡವು ಸದ್ಯಕ್ಕೆ ಅಗ್ರಸ್ಥಾನದಲ್ಲಿದೆ.

Advertisement

ಸದ್ಯಕ್ಕೆ ಆಸ್ಟ್ರೇಲಿಯಾ ಭಾರತಕ್ಕಿಂತ 66 ಅಂಕಗಳಷ್ಟೇ ಹಿನ್ನಡೆಯನ್ನು ದಾಖಲಿಸಿದೆ. 2019ರಲ್ಲಿ ಭಾರತವು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಟೆಸ್ಟ್ ಸರಣಿ ಜಯವನ್ನು ಸಾಧಿಸಿತ್ತು.

ಇತ್ತ ಆಸ್ಟ್ರೇಲಿಯಾ ತಂಡವು ಪಾಕಿಸ್ಥಾನ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಪೂರ್ತಿ 120 ಅಂಕಗಳನ್ನು ಗಳಿಸಿತ್ತು. ಆ ಬಳಿಕ ಇಂಗ್ಲಂಡ್ ವಿರುದ್ಧ 2-2 ಡ್ರಾ ಸಾಧಿಸುವ ಮೂಲಕ 56 ಅಂಕಗಳನ್ನು ಪಡೆದುಕೊಂಡಿತ್ತು.

ಇನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಂಡ ನ್ಯೂಝಿಲ್ಯಾಂಡ್ 60 ಅಂಕಗಳನ್ನು ಹೊಂದಿದೆ. ಪಾಕಿಸ್ಥಾನ ಹಾಗೂ ಶ್ರೀಲಂಕಾ ತಂಡಗಳು ತಲಾ 80 ಅಂಕಗಳನ್ನು ಪಡೆದುಕೊಂಡು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕಟ್ಟಿಯಲ್ಲಿ ಇದುವರೆಗೆ ತಮ್ಮ ಖಾತೆಯನ್ನೇ ತೆರೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next