Advertisement

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಅಂಪಾಯರ್ ಆಯ್ಕೆ

10:42 PM Jun 09, 2021 | Team Udayavani |

ಲಂಡನ್‌ : ಭಾರತ-ನ್ಯೂಜಿಲ್ಯಾಂಡ್‌ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಐಸಿಸಿ ಅಂಪಾಯರ್‌ಗಳನ್ನು ಪ್ರಕಟಿಸಿದೆ. ಇಂಗ್ಲೆಂಡ್‌ನ‌ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಮತ್ತು ಮೈಕಲ್‌ ಗಾಫ್ ಮೈದಾನದ ಅಂಪಾಯರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Advertisement

ಇಂಗ್ಲೆಂಡಿನ ಕ್ರಿಸ್‌ ಬ್ರಾಡ್‌ ಮ್ಯಾಚ್‌ ರೆಫ್ರಿಯಾಗಿರುತ್ತಾರೆ. ರಿಚರ್ಡ್‌ ಕೆಟಲ್‌ಬರೋ ಟಿವಿ ಅಂಪಾಯರ್‌ ಹಾಗೂ ಅಲೆಕ್ಸ್‌ ವಾಫ್ì ಅವರನ್ನು ಫೋರ್ತ್‌ ಅಂಪಾಯರ್‌ ಆಗಿ ನೇಮಿಸಲಾಗಿದೆ.

“ಇಂದಿನ ಕೋವಿಡ್‌ ಪರಿಸ್ಥಿತಿಯಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಂಪಾಯರಿಂಗ್‌ ನಡೆಸುವುದು ಸುಲಭವಲ್ಲ. ತಮ್ಮ ವೃತ್ತಿಜೀವನದುದ್ದಕ್ಕೂ ನಿರಂತರವಾಗಿ ಉತ್ತಮ ಸಾಧನೆಗೈದಿರುವ ಈ ಅಂಪಾಯರ್‌ಗಳು ಇಲ್ಲಿಯೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿಭಾಯಿಸುವ ಭರವಸೆ ಇದೆ’ ಎಂದು ಐಸಿಸಿ ಹಿರಿಯ ವ್ಯವಸ್ಥಾಪಕ ಆ್ಯಡ್ರಿಯನ್‌ ಗ್ರಿಫಿತ್‌ ತಿಳಿಸಿದ್ದಾರೆ.

ಇದನ್ನೂ ಓದಿ :ಬಿಜೆಪಿಯಲ್ಲಿನ ಗೊಂದಲಗಳ ಕುರಿತು ಚರ್ಚಿಸಲು ಶೀಘ್ರವೇ ರಾಜ್ಯಕ್ಕೆ ಅರುಣ್‌ ಸಿಂಗ್‌ ಆಗಮನ

Advertisement

Udayavani is now on Telegram. Click here to join our channel and stay updated with the latest news.

Next