Advertisement

ವಿಶ್ವ ಟಿ20, ವಿಶ್ವಕಪ್‌ ಏಕದಿನಕ್ಕೆ ತೆರಿಗೆ ಭಯವಿಲ್ಲ: ಬಿಸಿಸಿಐ

07:20 AM Apr 27, 2018 | |

ಮುಂಬೈ: ಭಾರತದಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್‌ ಕ್ರಿಕೆಟ್‌ ಹಾಗೂ 2023ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೆ ತೆರಿಗೆ ಭಯವಿಲ್ಲ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್‌ ಚೌಧರಿ ತಿಳಿಸಿದ್ದಾರೆ. 

Advertisement

ಭಾರತದಲ್ಲಿ ಅಧಿಕ ತೆರಿಗೆ ಇರುವುದರಿಂದ ಪಂದ್ಯವನ್ನು ವಿದೇಶಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ಮಾತುಗಳು ಐಸಿಸಿನಿಂದ ಕೇಳಿಬಂದಿದ್ದವು. ಈ ವಿಷಯ ಪರಿಶೀಲನೆಯಲ್ಲಿದೆ. ಸರ್ಕಾರದ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸಲು ಇನ್ನೂ ಸಮಯಾವಕಾಶ ಇದೆ. ಈ ಬಗ್ಗೆ ಆತಂಕ ಬೇಡ ಎಂದು ಅಮಿತಾಬ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next