ಭಾರತೀಯ ಸಂಗೀತ ಹಾಗೂ ಹಾರ್ಮೋನಿಯಂ ಬಗೆಗಿನ ಹಲವು ಚರ್ಚೆ-ವಿವಾದಗಳ ಮಧ್ಯೆಯೂ ಸಂಗೀತ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಪಡೆದಿರುವ ಈ ವಾದ್ಯದ ಕುರಿತಾದ ಚಾರಿತ್ರಿಕವೆನಿಸುವ ಕಾರ್ಯಕ್ರಮವೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
Advertisement
ಹಿರಿಯ ಹಾರ್ಮೋನಿಯಂ ವಿದ್ವಾಂಸರಾದ ಡಾ.ರವೀಂದ್ರ ಕಾಟೋಟಿಯವರ ಬಹುಕಾಲದ ಪ್ರಯತ್ನದ ಫಲವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಮೂರುದಿನ ಗಳ ಕಾಲ ನಡೆದ ಈ ವಿಶ್ವ ಸಂವಾದಿನಿ ಶೃಂಗ (World Harmonium Summit) ಮೊದಲೆರಡು ದಿನ ಕೃಷ್ಣದೇವರಾಯ ಕಲಾಮಂದಿರ ಹಾಗೂ ಮೂರನೆಯ ದಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮ, ಏಕಕಾಲಕ್ಕೆ ದೇಶದೆÇÉೆಡೆ ಇರುವ ಸಂಗೀತಾಸಕ್ತರ ಗಮನ ಸೆಳೆದಿದೆ ಹಾಗೂ ಕುತೂಹಲ ಕೆರಳಿಸಿದೆ.
Related Articles
Advertisement
ತಮ್ಮ ವಾದ್ಯದ ಬಗ್ಗೆ ಬಹು ದೊಡ್ಡ ಕಾಣೆR (vision) ಹೊಂದಿರುವ ಕಾಟೋಟಿಯವರು, ಅವುಗಳ ಕಾರ್ಯಸಾಧನೆಗಾಗಿ ಹದಿನೈದು ವರ್ಷಗಳ ಹಿಂದೆ ತಮ್ಮ ಗುರುಗಳ ಉಪಸ್ಥಿತಿಯಲ್ಲಿ ಫ‚ೌಂಡೇಷನ್ ನ್ನು ಆರಂಭಿಸಿದರು. ಅದರ ಮೂಲಕ ಪ್ರತಿ ವರ್ಷ ಹಾರ್ಮೋನಿಯಂ ಹಬ್ಬವನ್ನು ನಡೆಸಿಕೊಂಡು ಬರುತ್ತಿ¨ªಾರೆ. ಅವುಗಳಲ್ಲಿ ಸಮರಸ ಸಂವಾದಿನಿ, ನಾದ ವಿಠuಲ, ಜರ್ನಿ ಇನ್ ಹಾರ್ಮೋನಿಯಂ ಮೊದಲಾದ ವಿಷಯಾಧಾರಿತ ಕಾರ್ಯಕ್ರಮಗಳನ್ನು ಇಲ್ಲಿ ಉಲ್ಲೇಖೀಸಬಹುದು.
ಫೌಂಡೇಷನ್, ಕಳೆದ ಕೆಲವು ವರ್ಷಗಳಲ್ಲಿ ಸುಷಿರ ವಾದ್ಯವಾದ ಹಾರ್ಮೋನಿಯಂ ಉಳಿದ ತಂತಿ ಅಥವಾ ಪಾಶ್ಚಾತ್ಯ ವಾದ್ಯಗಳ ಜೊತೆ ಹೇಗೆ ಹೊಂದುತ್ತವೆ ಎನ್ನುವ ಅಧ್ಯಯನದ ಜೊತೆ, ತಮ್ಮ ಗುರುಗಳ ಜೀವನ ಚರಿತ್ರೆ ಹಾಗೂ ವೀಡಿಯೋ ಸಾಕ್ಷ್ಯಚಿತ್ರ ಬಿಡುಗಡೆ, ಕಾರ್ಯಾಗಾರಗಳು ಹಾಗೂ ಉಪನ್ಯಾಸಗಳನ್ನು ನಡೆಸಿದೆ. ಗುರುವರ್ಯ ರಾಮಭಾವು ಬಿಜಾಪುರೆ ಅವರ ಜನ್ಮ ಶತಮಾನೋತ್ಸವದ ಪ್ರಸ್ತುತ ವರ್ಷದಲ್ಲಿ ಈ ಕಾರ್ಯಕ್ರಮ ನಡೆದಿದೆ.
ವಿಶ್ವ ಸಂವಾದಿನಿ ಶೃಂಗದ ಮೊದಲ ಎರಡು ದಿನಗಳಲ್ಲಿ ಕರ್ನಾಟಕಿ ಹಾರ್ಮೋನಿಯಂ ವಾದನ, ರಂಗ ಸಂಗೀತ, ಪ್ರಾತ್ಯಕ್ಷಿಕೆ, ಉಪನ್ಯಾಸ, ಹಾರ್ಮೋನಿಯಂ-ಸಿತಾರ್ ಜುಗಲ್‌ಬಂದಿ, ಸಾಕ್ಷ್ಯಚಿತ್ರ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳಿದ್ದವು.
ಎರಡನೆಯ ದಿನ, ಹಲವು ಕಾರ್ಯಕ್ರಮಗಳ ಜೊತೆಗೆ, ಡಾ.ವಿದ್ಯಾಧರ ಓಕ್ ಅವರು ಪ್ರಸ್ತುತಪಡಿಸಿದ ಹಾರ್ಮೋನಿಯಂ ಮೇಲೆ 22 ಶ್ರುತಿಗಳ ಪ್ರಸ್ತುತಿ. ತಾವು ಈ ಕುರಿತು ಸಂಶೋಧನೆ ನಡೆಸಿ ಶ್ರುತಿ ಹಾರ್ಮೋನಿಯಂ ಒಂದನ್ನು ಕಂಡುಹಿಡಿದು ಅದರ ಮೇಲೆ 22 ಶ್ರುತಿಗಳನ್ನು ಸ್ಥಾಪಿಸಿ ತೋರಿಸಿದ ಡಾ.ಓಕ್ ಅವರು ಈ ಬಗ್ಗೆ ಪೇಟೆಂಟ್ ಅನ್ನೂ ಹೊಂದಿದವರಾಗಿ¨ªಾರೆ.
ಮೂರನೆಯ ದಿನ ಬಹು ಅಪರೂಪದ ಗಮನಾರ್ಹ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಪಲ್ಲಕ್ಕಿಯಲ್ಲಿ ವೇದಿಕೆಗೆ ಕರತರಲಾಯಿತು. ಮೊದಲೇ ನೂರು ಹಾರ್ಮೋನಿಯಂಗಳನ್ನು ವೇದಿಕೆ ಮೇಲಿಟ್ಟು ಸಜ್ಜುಗೊಳಿಸಲಾಗಿತ್ತು. ಬೆಳಗಾವಿಯ ಶ್ರೀಮತಿ ಅರ್ಚನ ಬೆಳಗುಂದಿ ಅವರ ನೇತೃತ್ವದಲ್ಲಿ ನೂರು ಜನರು ಒಟ್ಟಿಗೆ ಶತಕಂಠ ಗಾಯನವನ್ನು ಪ್ರಸ್ತುತ ಪಡಿಸಿದರು. ನೂರು ಕಂಠದಲ್ಲಿ ಬಿಹಾಗ್ ರಾಗದ ಖ್ಯಾಲ್ ಗಾಯನ ಆಕರ್ಷಕವಾಗಿತ್ತು. ಆ ಬಳಿಕ ಬಹು ನಿರೀಕ್ಷೆಯ, ಸಾಕಷ್ಟು ಸಿದ್ಧತೆಯೊ ಡನೆ ಮೂಡಿಬಂದ ಕಾರ್ಯಕ್ರಮ ಶತ ಹಾರ್ಮೋ ನಿಯಂ ವಾದನ. ಇದರಲ್ಲಿ ಡಾ. ಕಾಟೋಟಿ ಯವರ ಶಿಷ್ಯರು ಹಾಗೂ ರಾಜ್ಯದ ಅನೇಕ ಹಾರ್ಮೋ ನಿಯಂ ವಾದಕರ ಜೊತೆ, ಮೊದಲೆರಡು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಕಲಾವಿದರೂ ಉಳಿದವರೊಡನೆ ಸೇರಿ ನುಡಿಸಿದ್ದು ವಿಶೇಷ. ಕೊನೆಯದಾಗಿ ಪ್ರಸ್ತುತಗೊಂಡು ಮುದ ನೀಡಿದ್ದು, ಕಾಟೋಟಿಯವರು ಹಲವು ಇತರ ಭಾರತೀಯ ಹಾಗೂ ಪಾಶ್ಚಾತ್ಯ ವಾದ್ಯಗಳ ಜೊತೆಗೂಡಿ ನಡೆಸಿಕೊಟ್ಟ, ಜರ್ನಿ ಇನ್ ಹಾರ್ಮೋನಿಯಂ ಕಾರ್ಯಕ್ರಮ.
ಸಂಗೀತವನ್ನು ವಿಭಿನ್ನ ನೆಲೆಗಳಿಂದ ನೋಡುವ ಇಂಥ ಪ್ರಯತ್ನ ನಮ್ಮ ತಿಳಿವಿನ ಪರಿಧಿಯನ್ನು ವಿಸ್ತರಿಸುತ್ತದೆ.
– ಶ್ರೀಮತೀದೇವಿ ಮೈಸೂರು