Advertisement

SCO Summit; ಉಗ್ರವಾದದ ವಿರುದ್ಧ ಪಾಕಿಸ್ಥಾನದಲ್ಲೇ ಸ್ಪಷ್ಟ ಸಂದೇಶ ನೀಡಿದ ಎಸ್. ಜೈಶಂಕರ್

04:37 PM Oct 16, 2024 | Team Udayavani |

ಇಸ್ಲಾಮಾಬಾದ್ : ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ವೇಳೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬುಧವಾರ(ಅ16) ಪಾಕಿಸ್ಥಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ”ಎರಡು ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ಚಟುವಟಿಕೆಗಳು ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ಕೂಡಿದ್ದರೆ, ದ್ವಿಪಕ್ಷೀಯ ವ್ಯಾಪಾರ, ಸಂಬಂಧಗಳಿಗೆ ಮತ್ತು ಇತರ ಚಟುವಟಿಕೆಗಳಿಗೆ ಸಹಕಾರಿಯಾಗುವ ಸಾಧ್ಯತೆಯಿಲ್ಲ” ಎಂದು ಹೇಳಿದ್ದಾರೆ.

Advertisement

ಇಸ್ಲಾಮಾಬಾದ್‌ನಲ್ಲಿ ನಡೆದ ಎರಡು ದಿನಗಳ ಶೃಂಗಸಭೆಯಲ್ಲಿ ಮಾತನಾಡಿದ ಜೈಶಂಕರ್ “ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿದೆ ಎಂಬುದು ಮೂಲತತ್ವ.ಆದರೆ ‘ಮೂರು ದುಷ್ಪಶಕ್ತಿಗಳು’ (terrorism, extremism and separatism)ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕತಾವಾದ ಧೋರಣೆಯಿಂದ ವ್ಯಾಪಾರ, ಶಕ್ತಿಯ ಹರಿವು, ಸಂಪರ್ಕ ಮತ್ತು ಸಮಾನಾಂತರವಾಗಿ ಜನರಿಂದ ಜನರಿಗೆ ವಿನಿಮಯವನ್ನು ಉತ್ತೇಜಿಸುವ ಸಾಧ್ಯತೆಗಳಿಲ್ಲ” ಎಂದು ಸ್ಪಷ್ಟ ನುಡಿಗಳನ್ನಾಡಿದ್ದಾರೆ.

“ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸುವ ಪ್ರಾಥಮಿಕ ಗುರಿಯು ಪ್ರಸ್ತುತ ದಿನಗಳಲ್ಲಿ ಇನ್ನಷ್ಟು ನಿರ್ಣಾಯಕವಾಗಿದೆ. ಜಾಗತೀಕರಣ ಮತ್ತು ಮರುಸಮತೋಲನವು ಪ್ರಸ್ತುತ ದಿನದ ವಾಸ್ತವ. SCO ದೇಶಗಳು ಇದನ್ನು ಮುಂದಕ್ಕೆ ಕೊಂಡೊಯ್ಯುವ ಅಗತ್ಯವಿದೆ” ಎಂದರು.

“ಸಹಕಾರವು ಪರಸ್ಪರ ಗೌರವ ಮತ್ತು ಸಾರ್ವಭೌಮ ಸಮಾನತೆಯನ್ನು ಆಧರಿಸಿರಬೇಕು, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗುರುತಿಸಬೇಕು ಮತ್ತು ನಿಜವಾದ ಪಾಲುದಾರಿಕೆಗಳ ಮೇಲೆ ನಿರ್ಮಿಸಬೇಕು. ಏಕಪಕ್ಷೀಯ ಕಾರ್ಯಸೂಚಿಗಳ ಮೂಲಕ ಅಲ್ಲ. ನಾವು ವಿಶೇಷವಾಗಿ ವ್ಯಾಪಾರ ಮತ್ತು ಸಾರಿಗೆಯನ್ನು ಲಭ್ಯವಿರುವುದನ್ನು ಮಾತ್ರ ಆಯ್ಕೆ ಮಾಡಿದರೆ SCO ಪ್ರಗತಿ ಸಾಧಿಸಲು ಸಾಧ್ಯವಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next