Advertisement
ಮೊದಲ ಆಚರಣೆ…ವಿಶ್ವ ಕ್ರೀಡಾದಿನದ ಮೂಲಕ ಸಾಮಾಜಿಕ ಬದಲಾವಣೆಗೆ ಸಾಧ್ಯವಿದೆ ಎಂಬ ಹಿನ್ನೆಲೆಯಲ್ಲಿ ನಿರ್ಣಯವನ್ನು ವಿಶ್ವಸಂಸ್ಥೆ ಕೈಗೊಂಡಿತ್ತು. ಜತೆಗೆ ಶಿಕ್ಷಣ, ಆರೋಗ್ಯ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಬಹುದು ಎಂಬ ಕಾರಣಕ್ಕೆ ಒಲಿಂಪಿಕ್ಸ್ ಇತ್ಯಾದಿ ಕ್ರೀಡಾಕೂಟದ ಸಂದರ್ಭಗಳಲ್ಲಿ ಆಯೋಜನಾ ಸಮಿತಿಯೊಂದಿಗೆ ಕೆಲಸ ಮಾಡಿದೆ. ಇದಕ್ಕೆ ಪೂರಕವಾಗಿ ಜಾಗತಿಕ ದಿನ ಆಚರಿಸಲು 2013, ಆ.23ರಂದು ನಿರ್ಣಯಕ್ಕೆ ಬಂದಿದ್ದು, ಎ. 6ನ್ನು ವಿಶ್ವ ಕ್ರೀಡಾದಿನವಾಗಿ ಘೋಷಿಸಿತ್ತು. ಶಾಂತಿಗಾಗಿ ಕ್ರೀಡೆ ಎನ್ನುವುದು ಈ ಬಾರಿಯ ಕ್ರೀಡಾ ದಿನಾಚರಣೆಯ ಆಶಯ.
ಕ್ರೀಡೆ ಮನಸು ಮನಸುಗಳನ್ನು ಬೆಸೆಯುವ ಸೇತುವೆ. ಅಲ್ಲಿ ಜಾತಿ, ಮತವಿಲ್ಲ, ದೇಶ, ಭಾಷೆಯ ಹಂಗಿಲ್ಲ. ಕ್ರೀಡಾಂಗಣದಲ್ಲಿ ಸ್ಪರ್ಧೆಯ ವೇಳೆ ಮಾತ್ರ ನಮಗೆ ಎದುರಾಳಿಗಳು. ಉಳಿದಂತೆ ಅವರು ಆಪ್ತ ಗೆಳೆಯರು. ಕ್ರೀಡೆಯಿಂದಲೇ ವಿಶ್ವಶಾಂತಿಯ ಜ್ಯೋತಿ ಬೆಳಗಲು ಸಾಧ್ಯ ಎನ್ನುತ್ತಾರೆ ಉಡುಪಿ ಜಿಲ್ಲೆಯಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಶಿಖರವೇರಿರುವ ಹೆಮ್ಮೆಯ ಕ್ರೀಡಾಳುಗಳು. ಅವರು “ಉದಯವಾಣಿ’ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ. ಕ್ರೀಡೆಯಂದ ಶಾಂತಿ
ನಾನು ದೇಶ-ವಿದೇಶಗಳಲ್ಲಿ ಆಡಿದ್ದೇನೆ. ಕ್ರೀಡೆಯನ್ನು ಎಲ್ಲರೂ ಕ್ರೀಡೆಯಾಗಿಯೇ ಸ್ವೀಕರಿಸುತ್ತಾರೆ. ಎಲ್ಲರನ್ನು ಅದು ಒಂದು ಮಾಡುತ್ತದೆ. ಕ್ರೀಡೆ ಇದ್ದಲ್ಲಿ ಅಶಾಂತಿಗೆ ಅವಕಾಶವಿಲ್ಲ.
– ಸುಕೇಶ್ ಹೆಗ್ಡೆ, ಕಬಡ್ಡಿ ಆಟಗಾರ
Related Articles
ಕ್ರೀಡೆ ಆರೋಗ್ಯ, ಸ್ಪರ್ಧೆಗಾಗಿ ಮಾತ್ರವೇ ಅಲ್ಲ. ನಮ್ಮ ನಡುವೆ ಒಳ್ಳೆಯ ಸಂಬಂಧವೇರ್ಪಡಲು ಕ್ರೀಡೆಯಿಂದ ಸಾಧ್ಯ. ಎಲ್ಲರೂ ಮೈದಾನದಲ್ಲಿ ಆತ್ಮೀಯ ರಾಗುತ್ತಾರೆ. ಕ್ರೀಡೆ ಇರು ವಲ್ಲಿ ಸಂಘರ್ಷ ಕಡಿಮೆ.
– ಗೋಪಾಲ ಖಾರ್ವಿ, ಈಜಿನಲ್ಲಿ ಗಿನ್ನೆಸ್ ವಿಶ್ವದಾಖಲೆಗೈದವರು
Advertisement
ಶಾಂತಿಯ ಸಂದೇಶ ಕ್ರೀಡೆ ಎನ್ನುವುದು ನಮ್ಮ ಸಂಕುಚಿತ ಮನೋಭಾವನೆಗಳನ್ನು ಮೀರಿ ನಿಲ್ಲುವಂತೆ ಮಾಡುತ್ತದೆ. ಕ್ರೀಡೆ ಎಲ್ಲರಿಗೂ ಪ್ರೀತಿ, ಶಾಂತಿಯ ಸಂದೇಶ ಕೊಡುತ್ತದೆ ಎಂಬುದು ನನ್ನ ಭಾವನೆ.
-ಮಮತಾ ಪೂಜಾರಿ, ಕಬಡ್ಡಿ ಆಟಗಾರ್ತಿ ಸೋಲು ಗೆಲುವು ಸಮಾನ
ಸೋಲು ಮತ್ತು ಗೆಲುವನ್ನು ಸ್ವೀಕರಿಸುವ ಮನೋಭಾವನೆ ಬೆಳೆಸ ುತ್ತದೆ. ಈ ಬಾರಿಯ ಶಾಂತಿ ಸೌಹಾರ್ದದ ಸಂದೇಶ ಜಗದಗಲ ಪಸರಿಸಲಿ.
-ಸ್ಯಾಂಡ್ರಾ ಡಿ’ಸೋಜಾ,