Advertisement

ಮನುಜ ಅರಿಯಬೇಕಿದೆ ಮಿತಿ, ಇದು ನಿಗೂಢ ರಹಸ್ಯಗಳ ಪ್ರಕೃತಿ

04:27 PM Oct 23, 2022 | ದಿನೇಶ ಎಂ |

ಮನುಷ್ಯ ತಾನು ಎಲ್ಲವನ್ನು ತಿಳಿದಿರುವುದಾಗಿ ಎಷ್ಟೇ ಅಂದುಕೊಂಡರೂ ಆತನ ಅರಿವಿಗೆ, ತಿಳುವಳಿಕೆಗಳಿಗೆ, ಅನ್ವೇಷಣೆಗಳಿಗೆ ಮಿತಿಯಿರುವುದಂತು ನಿಜ. ಜಗತ್ತು ನಮ್ಮ ಮುಂದೆ ಬಗೆದಷ್ಟು ಅದ್ಭುತಗಳನ್ನು ತೆರೆದಿಡುತ್ತವೆ. ಕೆಲವೊಂದನ್ನು ವೈಜ್ಞಾನಿಕ ದೃಷ್ಠಿಕೋನಗಳಿಂದ ತಿಳಿದು ತೃಪ್ತಿಯಾದರೆ, ಇನ್ನೂ ಹಲವು ವಿಷಯಗಳು ನಿಗೂಢವಾದ ಪ್ರಾಕೃತಿಕ ಅಥವಾ ಪೂರ್ವಜರ ದೈವೀಕ ಶಕ್ತಿಗಳಿಂದ ಬೆರೆತು ವಿಜ್ಞಾನದ ಅನ್ವೇಷಣೆ, ತರ್ಕಗಳಿಗೂ ನಿಲುಕದೆ ನಿಗೂಢವಾಗಿ ಉಳಿದಿರುತ್ತವೆ. ಅವುಗಳನ್ನು ಸಾಧ್ಯವಾದರೆ ನೋಡಿ ಭಾವುಕರಾಗುದಷ್ಟೇ ನಾವು ಮಾಡಬಹುದಾದ ಕೆಲಸ. ಜಗತ್ತಿನ ಅಂತಹ ಕೆಲವು ವಿಸ್ಮಯ ತಾಣಗಳ ಕುರಿತ ಮಾಹಿತಿ ಹೀಗಿವೆ.

Advertisement

ಬರ್ಮುಡಾ ಟ್ರಯಾಂಗಲ್:

ಡೆವಿಲ್ ಟ್ರಯಾಂಗಲ್ ಎಂಬ ಹೆಸರಿನ ಬರ್ಮುಡಾ ಟ್ರಯಾಂಗಲ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿನ ಒಂದು ಪ್ರದೇಶವಾಗಿದೆ. ಇಲ್ಲಿ ಹಲವಾರು ಹಡಗುಗಳು ಮತ್ತು ವಿಮಾನಗಳು ಯಾವುದೇ ಕುರುಹುಗಳಿಲ್ಲದೆ ಕಣ್ಮರೆಯಾಗಿರುವುದು ನಿಗೂಢ ರಹಸ್ಯವಾಗಿದೆ. ಕೆಲವರ ಅಭಿಪ್ರಾಯದ ಪ್ರಕಾರ ಇವುಗಳು ಸುಳಿಯೊಳಗೆ ಸಿಲುಕಿ ಕಣ್ಮರೆಯಾಗುತ್ತವೆ ಎಂದೂ ಹೇಳುತ್ತಾರೆ. ಇನ್ನು ಕೆಲವರ ನಂಬಿಕೆಯ ಪ್ರಕಾರ ಈ ಕಣ್ಮರೆಗೆ ಅನ್ಯಗ್ರಹ ಜೀವಿಗಳು ಕಾರಣವೆಂದೂ ಹೇಳಲಾಗುತ್ತದೆ. ಇಲ್ಲಿ ಇದೇ ವಿಷಯಕ್ಕಾಗಿ ಹಲವಾರು ತನಿಖೆಗಳು ನಡೆದರೂ ಈವರೆಗೆ ಇಲ್ಲಿ ಸಂಭವಿರುವ ಈ ನಿಗೂಢ ಮಾಯೆಯ ಕಾರಣವನ್ನು ಸಾಬೀತು ಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುವು ಅಚ್ಚರಿಯ ವಿಷಯ.


ಈಜಿಪ್ಟ್ ನ ಗೀಜಾದ ದ ಗ್ರೇಟ್ ಪಿರಮಿಡ್:

Advertisement

ಈಜಿಪ್ಟ್ ನ ಆಧುನಿಕ ಕೈರೋದ ಹೊರವಲಯದಲ್ಲಿರುವ ಮೂರು ಪಿರಮಿಡ್ ಗಳಲ್ಲಿ ಗೀಜಾದ ಗ್ರೇಟ್ ಪಿರಮಿಡ್ ಅತ್ಯಂತ ಹಳೆಯ, ದೊಡ್ಡದಾದ ಮತ್ತು ರಹಸ್ಯಮಯ ಪಿರಮಿಡ್ ಆಗಿದೆ. ಇದು ಪ್ರಪಂಚದ ಪ್ರಾಚೀನ ಏಳು ಅದ್ಭುತಗಳಲ್ಲಿ ಒಂದಾಗಿದೆ. ಈ ಪಿರಮಿಡ್ ಮಾನವರು ನಿರ್ಮಿಸಿದ “ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ನ ಶ್ರೇಷ್ಠ ಕಲಾಕೃತಿ” ಎಂಬ ಬಿರುದು ಪಡೆದಿದೆ.

ಗ್ರೇಟ್ ಪಿರಮಿಡ್ ಈಜಿಪ್ಟ್ ನ ನಾಲ್ಕನೇ ರಾಜವಂಶದ ರಾಜನಾದ ಫೆರೋ ಖುಫು ಅವರ ಸಮಾಧಿಯಾಗಿ ನಿರ್ಮಿಸಲಾಯಿತು. ಇಲ್ಲಿರುವಂತಹ ಉಪಕರಣಗಳು ಈಗಿನ ಆಧುನಿಕ ಯುಗದಲ್ಲಿಯೂ ಕಾಣಲು ಸಿಗುವುದಿಲ್ಲ ಇಂತಹ ಅದ್ಬುತವಾದ ಈ ಮೇರು ಕಲಾಕೃತಿ ರಚಿಸಿದ ಬಗೆ ಇನ್ನೂ ಅಭೇದ್ಯವಾಗಿದೆ.

ಏರಿಯಾ 51:

ಏರಿಯಾ 51, ಯುನೈಟೆಡ್ ಸ್ಟೇಟ್ಸ್ ನೆವಾಡದಲ್ಲಿರುವ ಒಂದು ರಹಸ್ಯ ಪ್ರದೇಶವಾಗಿದೆ, ಇದು ಹಲವಾರು ವದಂತಿಗಳ ನೆಲೆಯಾಗಿ ಉಳಿದುಕೊಂಡಿದೆ. ಈ ನೆಲೆಯನ್ನು ಮೊದಲ ಬಾರಿಗೆ ಎರಡನೇ ಮಹಾಯುದ್ಧದ ಸಮಯದಲ್ಲಿ ರಹಸ್ಯ ವಾಯುನೆಲೆಯಾಗಿ ನಿರ್ಮಿಸಲಾಯಿತು, ಇದನ್ನು ಯುಎಸ್ ಮಿಲಿಟರಿ ಪ್ರಾಯೋಗಿಕ ವಿಮಾನಗಳನ್ನು ಪರೀಕ್ಷಿಸಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ಕೆಲವು ಮಾಹಿತಿಯ ಪ್ರಕಾರ ಎರಿಯಾ 51 ಅಮೇರಿಕನ್ ಪಡೆಗಳಿಂದ ನಿಷ್ಕ್ರಿಯಗೊಳಿಸಲ್ಪಟ್ಟ ಅನ್ಯಗ್ರಹದ ಬಾಹ್ಯಾಕಾಶ ನೌಕೆಗಳ ಸಮೂಹಕ್ಕೆ ಅಲ್ಲಿ ಇರಿಸಲಾಗಿದೆ ಎನ್ನುತ್ತಾರೆ, ಇದನ್ನು ಯು ಎಸ್ ವಾಯುಪಡೆಯು ಮೊದಲ ಬಾರಿಗೆ ತಮ್ಮ ಅತ್ಯಂತ ಉನ್ನತ ರಹಸ್ಯ ತಾಣವೆಂದು ಘೋಷಿಸಿತು.

ಪೋಲ್ಯಾಂಡ್ ನ ಕ್ರೂಕ್ಡ್ ಫ಼ಾರೆಸ್ಟ್:

ಪೋಲ್ಯಾಂಡ್ ನ ಕ್ರೂಕ್ಡ್ ಫ಼ಾರೆಸ್ಟ್ ಈ ವಕ್ರ ಅರಣ್ಯವು ಪೋಲೆಂಡ್ ನ ಒಂದು ನಿಗೂಢ ಅರಣ್ಯವಾಗಿದೆ. ಇಲ್ಲಿ ಮರಗಳು ವಿರುದ್ದ ದಿಕ್ಕಿನಲ್ಲಿ ಬೆಳೆಯುತ್ತವೆ ಮತ್ತು ಅವುಗಳ ಬುಡದಲ್ಲಿ 90 ಡಿಗ್ರಿಯಲ್ಲಿ ತಿರುವು ಪಡೆದು ವೃತ್ತಾಕಾರದಲ್ಲಿ ಬೆಳೆಯುತ್ತವೆ. ಈ ಮರಗಳ ಕಾಣಲು ಇಂಗ್ಲೀಷ್ ಅಕ್ಷರ ಜೆ-ಆಕಾರದಲ್ಲಿದೆ. ಕ್ರೂಕ್ಡ್ ಅರಣ್ಯಗಳು ಅತ್ಯಂತ ಹಳೆಯದಾದ ಪೈನ್ ಮರಗಳನ್ನೊಳಗೊಂಡ ಕಾಡುಗಳಾಗಿವೆ, ಶತಮಾನಗಳಿಂದ ಆಗುತ್ತಿರುವ ಭೂಕಂಪಗಳಿಗೆ ತುತ್ತಾಗಿ ಈ ಕಾಡುಗಳು ತಿರುಚಲ್ಪಟ್ಟಿವೆ ಎಂಬುದು ತಜ್ಞರ ಅಭಿಪ್ರಾಯ.

ಈಸ್ಟರ್ ಐಲ್ಯಾಂಡ್ – ಚಿಲಿ:

ಈಸ್ಟರ್ ದ್ವೀಪ ಆಗ್ನೇಯ ಪೆಸಿಫಿಕ್ ಸಾಗರದಲ್ಲಿ ಅಳಿದುಹೋದ ಚಿಲಿ ದೇಶದ ದ್ವೀಪವಾಗಿದೆ. ಈ ಸ್ಥಳವು ನಿಗೂಡವೆವಾದ ಮೋವೈ ಎಂಬ ಪ್ರತಿಮೆಗೆ ಹೆಸರುವಾಸಿಯಾಗಿದೆ. ಈ ಪ್ರತಿಮೆಗಳನ್ನು ದ್ವೀಪದ ಜ್ವಾಲಾಮುಖಿಯಿಂದ ಸೃಷ್ಟಿಯಾದ ಬಂಡೆಯಲ್ಲಿ ರಾಪಾ ನುಯಿ ಎಂಬಲ್ಲಿಯ ಜನರು ಕೆತ್ತಿದರು ಎಂದು ಹೇಳಲಾಗುತ್ತದೆ. ಈ ಪ್ರತಿಮೆಗಳನ್ನು ಪೂರ್ವಜರು ಮತ್ತು ದೇವತೆಗಳನ್ನು ಗೌರವಿಸುವ ಉದ್ದೇಶವನ್ನು ಕೆತ್ತಲಾಗಿದೆ ಎನ್ನಲಾಗುತ್ತದೆ. ಆದರೆ ಕಾಲಾನಂತರದಲ್ಲಿ ಅವು ದ್ವೀಪವಾಸಿಗಳ ಸ್ವಂತ ಧಾರ್ಮಿಕ ನಂಬಿಕೆಗಳ ಪ್ರತೀಕವಾಗಿ ಮಾರ್ಪಾಟ್ಟವು. ಈ ಪ್ರತಿಮೆಗಳ ಮೂಲ ಇನ್ನೂ ಅಸ್ಪಷ್ಟವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಭೂಮಿಗೆ ಇಳಿದ ಅನ್ಯಗ್ರಹ ಜೀವಿಗಳಿಂದ ಇವು ಸೃಷ್ಟಿಯಾಗಿದೆ ಎಂಬ ಮಾಹಿತಿ ಜನರ ನಡುವೆ ಇವೆ. ಆದರೆ ಇವುಗಳನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳೂ ಇಲ್ಲ. ಪುರಾತತ್ವಶಾಸ್ತ್ರಜ್ಞರ ಪ್ರಕಾರ ಇತಿಹಾಸದ ಒಂದು ಘಟ್ಟದಲ್ಲಿ ಈ ದ್ವೀಪದಲ್ಲಿ ನೆಲೆಸುತ್ತಿದ್ದ ಮಾನವರಿಂದಲೇ ಈ ಪ್ರತಿಮೆಗಳು ನಿರ್ಮಿಸಲ್ಪಟ್ಟಿವೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಈಸ್ಟರ್ ದ್ವೀಪವು ತನ್ನ ದೈತ್ಯ ಕಲ್ಲಿನ ಪ್ರತಿಮೆಗಳು ಮತ್ತು ಏಕಶಿಲಾ ವೇದಿಕೆಗಳ ನಿಗೂಢ ತಾಣವಾಗಿ ಹೆಸರುವಾಸಿಯಾಗಿದೆ

ಜಗತ್ತು ಇನ್ನೂ ಪತ್ತೆಯಾಗದ ನಿಗೂಡತೆ ಮತ್ತು ರಹಸ್ಯಗಳಿಂದ ಕೂಡಿದೆ ಹಾಗೂ ವಿಶ್ವದ ಕೆಲವು ಸ್ಥಳಗಳಲ್ಲಿ ಹಲವಾರು ನಿಗೂಡ ದೃಶ್ಯಗಳನ್ನು ಕಾಣಸಿಗುತ್ತವೆ. ಅಂತಹ ನಿಗೂಡತೆಯನ್ನು ಹೊಂದಿರುವಂತಹ ಸ್ಥಳಗಳು ನಮ್ಮ ಹಿಂದಿನ ಪೂರ್ವಜರ ಕೆಲಸ, ಜೀವನ ಕ್ರಮ ಮತ್ತು ನೈಪುಣ್ಯತೆಗಳನ್ನು ನೆನಪಿಸುತ್ತವೆ. ಈ ಸ್ಥಳಗಳ ಅಭೇದ್ಯ ರಹಸ್ಯಗಳು ವೈಜ್ಞಾನಿಕವಾಗಿ ಸರಿ ಕಂಡರೆ ಇನ್ನು ಕೆಲವು ನಂಬಿಕೆಗಳ ಮೇಲೆ ನಿಂತಿವೆ.

Advertisement

Udayavani is now on Telegram. Click here to join our channel and stay updated with the latest news.

Next