Advertisement
ಈ ವೈರಾಣುವಿನ ಬಲ ಕಡಿಮೆ ಮಾಡಲು ಈಗಾಗಲೇ ಬಹಳಷ್ಟು ಲಾಕ್‌ಡೌನ್‌ಗಳನ್ನು ನಾವೆಲ್ಲ ಅನುಭವಿಸಿದ್ದೇವೆ. ಈ ಲಾಕ್‌ಡೌನ್‌ಗಳು ಕೆಲವು ಸಂದರ್ಭಗಳಲ್ಲಿ ಮಾನಸಿಕ ಒತ್ತಡ ಹೆಚ್ಚಿಸಿರುವುದನ್ನು ಕಂಡಿದ್ದೇವೆ. ಈ ನಿಟ್ಟಿನಲ್ಲಿ ಕೆಲವು ಸೇವೆಗಳು ಅದರಲ್ಲಿಯೂ ಮಾನಸಿಕ, ನರಗಳ ಹಾಗೂ ಮಾದಕ ವ್ಯಸನಿಗಳ ವಿಚಾರವಾಗಿ ಸೂಕ್ತ ಸಮಯಕ್ಕೆ ಜನರಿಗೆ ಚಿಕಿತ್ಸೆ ಸಿಗದೆ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.
Related Articles
Advertisement
ಇದನ್ನೂ ಓದಿ:ಡಗ್ಸ್ ಪಾರ್ಟಿ ಪ್ರಕರಣ : ಎನ್‌ಸಿಬಿ ಮೇಲಿನ ಎಲ್ಲಾ ಆರೋಪಗಳು ಆಧಾರ ರಹಿತ
ಕೋವಿಡ್ ಸೋಂಕು ದೈಹಿಕ ಸಮಸ್ಯೆಗಳನ್ನು ಹುಟ್ಟು ಹಾಕಿದರೆ, ಅದರ ಜತೆಗೇ ಹುಟ್ಟಿಕೊಳ್ಳುವ ಮಾನಸಿಕ ಸಮಸ್ಯೆಗಳಿಗೆ ವಿಶ್ವದಾದ್ಯಂತ ಜನರು ತತ್ತರಿಸಿದ್ದಾರೆ. ಇನ್ನೂ ಹೊರಗೆ ಬರಲಾರದೇ ತೊಳಲಾಡುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು ಮುಚ್ಚಿರುವುದರಿಂದ ಮಕ್ಕಳಿಗೂ ಗೆಳೆಯರ ಸಂಪರ್ಕ ಆಟಪಾಠಗಳಿಲ್ಲದೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಬದಲಾದ ಶಿಕ್ಷಣ ಕ್ರಮ ಒತ್ತಡಗಳನ್ನು ಸೃಷ್ಟಿಸಿದೆ. ಹಿರಿಯ ನಾಗರಿಕರು, ರಕ್ತದೊತ್ತಡ ಇರುವವರು, ಹೃದ್ರೋಗಿಗಳು, ಮಧುಮೇಹಿಗಳು ಹಾಗೂ ವೈದ್ಯಕೀಯ ಸಿಬಂದಿ ಕೋವಿಡ್ ನಿಯಂತ್ರಣಕ್ಕಾಗಿ ಬೇರೆಬೇರೆ ಊರುಗಳಿಗೆ ವರ್ಗಾವಣೆ ಹೊಂದಿ ಅವರು ಕೂಡ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ.
ಹೊರರೋಗಿ ವಿಭಾಗಗಳು (ಮಾನಸಿಕ ಆರೋಗ್ಯ) ಸ್ಥಗಿತಗೊಂಡಿದ್ದರಿಂದ ಈಗಾಗಲೇ ಮಾನಸಿಕ ಕಾಯಿಲೆಗಳಿಗೆ ಒಳಗಾಗಿದ್ದವರಿಗೆ ಸರಿಯಾದ ಸಮಯಕ್ಕೆ ಔಷಧ ದೊರೆ ಯದೆ ಜನರು ಇನ್ನಷ್ಟು ಒತ್ತಡಕ್ಕೆ ಒಳಗಾಗ ಬೇಕಾಯಿತು. ಇದರಿಂದ ಸೂಕ್ಷ್ಮತೆ ಉಳ್ಳ ಜನರಲ್ಲಿ ಒತ್ತಡ, ಆತಂಕಗಳು ಹೆಚ್ಚಾದವು.
ಇಂತಹ ಅಸಮಾನ್ಯ ಸ್ಥಿತಿಯಲ್ಲಿ ಎಲ್ಲರಿಗೂ ಬೇಕಾಗುವಂತಹ ಸಹಾಯಗಳನ್ನು ಒದಗಿಸುವುದು ಬಹಳ ಮುಖ್ಯ. ಆದ್ದರಿಂದ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಎಲ್ಲರೂ ಈ ಸಮಸ್ಯೆಯ ಪರಿಹಾರಕ್ಕೆ ನಾಂದಿ ಹಾಡಬಹುದು.– ಸ್ನೇಹಿತರು, ಪ್ರೀತಿ ಪಾತ್ರರ ಒಟ್ಟಿಗೆ ಸಮಯ ಕಳೆಯುವುದು.
– ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ, ಬೇರೆಯವರ ಭಾವನೆ ಗೌರವಿಸಿ.
– ನಿಮ್ಮನ್ನು ಆರೋಗ್ಯಕರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
– ಸರಿಯಾದ ಸಮಯಕ್ಕೆ ವ್ಯಾಯಾಮ, ಆಹಾರ ಸೇವಿಸಿ.
– ಮನೋರಂಜನೆಗೆ ಸಂಗೀತ, ಮನೆ ಒಳಗಿನ ಆಟಗಳು, ಕಥೆ ಹೇಳುವುದು ಹಾಗೂ ಕೇಳುವುದಕ್ಕೆ ಸಮಯ ಕೊಡಿ.
– ವಿಶ್ರಾಂತಿ ಕಡೆ ಗಮನ ಇರಲಿ. ಬೇಗನೆ ಮಲಗುವುದು, ಬೆಳಗ್ಗೆ ಬೇಗನೆ ಏಳುವುದು ನಮ್ಮನ್ನು ಸದೃಢ ಮತ್ತು ಸಮರ್ಥರನ್ನಾಗಿ ಮಾಡುತ್ತದೆ.
– ನೀವು ಸಾಧಿಸಬಹುದಾದ ಗುರಿಗಳನ್ನು ಇಟ್ಟುಕೊಳ್ಳಿ.
ಮೇಲೆ ಹೇಳಿದ ಸಲಹೆಗಳನ್ನು ಪಾಲಿಸುತ್ತಾ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮ ಪಡಿಸಿಕೊಳ್ಳಲು ಯತ್ನಿಸಿ. ಯಾವುದೇ ಮಾನಸಿಕ ಸಮಸ್ಯೆಗಳಿದ್ದರೆ ನೀವು ನಮ್ಮ ಕ್ಲಿನಿಕಲ್ ಸೈಕಾಲಜಿ ವಿಭಾಗವನ್ನು ಸಂಪರ್ಕಿ ಸಬಹುದು. -ಮುಂದಿನ ವಾರಕ್ಕೆ ಡಾ| ಶ್ವೇತಾ ಟಿ.ಎಸ್.
ಸಹಾಯ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ ವಿಭಾಗ ಕೆ.ಎಂ.ಸಿ. ಮಣಿಪಾಲ