Advertisement

ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ-2017: ನಾಮ ನಿರ್ದೇಶನಕ್ಕೆ ಆಹ್ವಾನ

09:01 AM Aug 05, 2017 | |

ಮಂಗಳೂರು: ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈಯವರು 80 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ  ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು  ಶೆಣೈ ಅವರ ಹೆಸರಿನಲ್ಲಿ  ಎರಡು ಪ್ರಶಸ್ತಿಗಳನ್ನು ಕೊಡಮಾಡಲು ನಿರ್ಧರಿಸಿದೆ. ಕೊಂಕಣಿ ಭಾಷಿಕರಾಗಿ, ಶೈಕ್ಷಣಿಕ, ಆರೋಗ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ವ್ಯಕ್ತಿ ಮಾತ್ರವಲ್ಲದೇ ಕೊಂಕಣಿ ಭಾಷಿಕರಿಂದ ಸ್ಥಾಪಿಸಲಾದ ಶಿಕ್ಷಣ ಸಂಸ್ಥೆ, ಕೊಂಕಣಿ ಭಾಷಿಕರ ಆಡಳಿತವಿರುವ ಸಂಸ್ಥೆಗಳು, ಸಮಾಜ ಸೇವೆ, ಆರೋಗ್ಯ, ವಿಜ್ಞಾನ, ಪತ್ರಿಕಾರಂಗ, ಕಲೆ,  ವಾಣಿಜ್ಯೋದ್ಯಮ, ಕ್ರೀಡೆ ಕ್ಷೇತ್ರಗಳನ್ನೂ  ಒಳಗೊಂಡಿದೆ. 2020 ಇಸವಿಯ ವೇಳೆಗೆ ಕೊಂಕಣಿ ಸಮಾಜವನ್ನು ಒಂದು ಬಲಿಷ್ಠ ಸಮಾಜವಾಗಿ ಪರಿವರ್ತಿಸಬೇಕೆಂದು ಕನಸು ಕಂಡ  ಟಿ. ಮೋಹನದಾಸ  ಪೈಯವರು ಈ ಪ್ರಶಸ್ತಿಗಳನ್ನು  ಸ್ಥಾಪಿಸಿರುತ್ತಾರೆ. 2 ಪ್ರಶಸ್ತಿಗಳು ತಲಾ 1ಲಕ್ಷ ರೂ. ನಗದು  ಹೊಂದಿರುತ್ತದೆ. ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ತಲಾ ಒಂದು ಪ್ರಶಸ್ತಿಯನ್ನು ಪ್ರಮಾಣಪತ್ರದೊಂದಿಗೆ  ಪ್ರದಾನಮಾಡಲಾಗುತ್ತದೆ. 

Advertisement

ನಿಯಮಗಳು ನಾಮನಿರ್ದೇಶನಗೊಂಡವರು ಕೊಂಕಣಿಮಾತೃಭಾಷೆಯಾಗಿರುವ ಏಕ ವ್ಯಕ್ತಿಯಾಗಿರಬಹುದು ಅಥವಾ ಒಂದು ಕೊಂಕಣಿ ಸಂಸ್ಥೆಯಾಗಿರಲೂಬಹುದು. ಮತ್ತು  18ವರ್ಷಕ್ಕೆ ಮೇಲ್ಪಟ್ಟಿರಬೇಕು. ನಾಮ ನಿರ್ದೇಶಿತ ಸಂಸ್ಥೆಗಳು ಕೊಂಕಣಿ ಮಾತೃಭಾಷಿಕರ ಆಡಳಿತಕ್ಕೊಳಪಟ್ಟಿರಬೇಕು ಮತ್ತು ಅವುಗಳ ಸ್ಥಾಪಕರು ಕೊಂಕಣಿಭಾಷಿಕರಾಗಿರಬೇಕು. ನಾಮ ನಿರ್ದೇಶನದ ಸಂದರ್ಭ ಕನಿಷ್ಠ 5 ವರ್ಷದಿಂದ ಅಸ್ತಿತ್ವದಲ್ಲಿ ಇರಬೇಕಾಗುತ್ತದೆ.  ವ್ಯಕ್ತಿಗಳು ಅಥವಾ ಸಂಸ್ಥೆಗಳು ಸ್ವತ: ತಮ್ಮ ಬಗ್ಗೆ ನಾಮನಿರ್ದೇಶನ ಮಾಡಬಹುದಾಗಿದೆ.

ಅರ್ಜಿಗಳನ್ನು www.vishwakonkani.org ಅಂತರ್ಜಾಲದಿಂದ ಪಡೆಯ ಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು “”ಅಧ್ಯಕ್ಷರು, ಬಿ.ವಿ.ಎಸ್‌ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಆಯ್ಕೆ ಸಮಿತಿ, ವಿಶ್ವ ಕೊಂಕಣಿ ಕೇಂದ್ರ, ಲೊಬೊ ಪ್ರಭು ನಗರ ಕೊಂಕಣಿ ಗಾಂವ, ಶಕ್ತಿನಗರ, ಮಂಗಳೂರು  ವಿಳಾಸಕ್ಕೆ  ಸೆ. 20ರ ಒಳಗೆ ಕಳುಹಿಸಿ ಕೊಡಬೇಕು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next