Advertisement
ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಬುಧವಾರ ವಿಶ್ವ ಕೊಂಕಣಿ ಸರದಾರ, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ ಶೆಣೈ ಅವರ ಹಿತ್ತಾಳೆಯ ಪ್ರತಿಮೆ ಅನಾವರಣ ಮತ್ತು ಇತರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
Related Articles
ಕೊಂಕಣಿಯಲ್ಲಿ ಹಲವು ಸಾಹಿತ್ಯ ಕೃತಿಗಳು ರಚನೆಯಾಗುತ್ತಿದ್ದು, ನಾಟಕ- ಸಿನೆಮಾಗಳು ಭಾಷೆಯ ಮೌಲ್ಯವನ್ನು ಹೆಚ್ಚಿಸಿದೆ. ಕೊಂಕಣಿ ಒಂದು ಭಾಷೆ ಮಾತ್ರ ಅಲ್ಲ ಅದೊಂದು ಸಂಸ್ಕೃತಿ. ನಮ್ಮ ಮುಂದಿನ ಪೀಳಿಗೆಗೂ ಭಾಷೆ ಮಾತನಾ ಡಲು, ಓದಲು-ಬರೆಯಲು ಕಲಿಸುವ ಅಗತ್ಯವಿದ್ದು, ಇದರಿಂದ ಭಾಷೆಯ ಭವಿಷ್ಯ ಉಜ್ವಲವಾಗಲಿದೆ. ಕೊಂಕಣಿ ಕಲಿತವರಿಗೂ ಉತ್ತಮವಾದ ಬೇಡಿಕೆ ಸೃಷ್ಟಿಯಾಗಿದೆ. ಮೈಸೂರಿನ ರಾಷ್ಟ್ರೀಯ ಗ್ರಂಥಾಲಯದ ಮೂಲಕ ಗೆಜೆಟೆಡ್, ಕೃತಿಗಳ ಕೊಂಕಣಿ ತರ್ಜುಮೆಗೆ ಬಹಳಷ್ಟು ಮಂದಿಗೆ ಅವಕಾಶವಿದೆ ಎಂದರು.
Advertisement
ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಚೇರ್ಮನ್ ಡಾ| ಪಿ. ದಯಾನಂದ ಪೈ ಮಾತನಾಡಿ, ವಿಶ್ವ ಕೊಂಕಣಿ ಕೇಂದ್ರ ಬಸ್ತಿ ವಾಮನ ಶೆಣೈ ಅವರ ಕನಸಾಗಿತ್ತು. ಅದನ್ನು ಅವರು ನನಸು ಮಾಡಿದ್ದಾರೆ. ಕೇಂದ್ರ ಪ್ರವೇಶಿಸುವಾಗ ದೇವಾಲಯಕ್ಕೆ ಬಂದ ಅನುಭವವಾಗುತ್ತದೆ. ಕೇವಲ 20 ಲಕ್ಷ ಜನಸಂಖ್ಯೆ ಹೊಂದಿರುವ ಕೊಂಕಣಿ ಭಾಷಿಕ ಸಮುದಾಯದವರು ಇಂದು ಎಲ್ಲ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ವಿಶ್ವದ ಯಾವುದೇ ಸಮಯದಾಯ ಮಾಡದಿರುವ ಸಾಧನೆ ಮಾಡಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಿ. ವೇದವ್ಯಾಸ ಕಾಮತ್, ಉದ್ಯಮಿ ಉಲ್ಲಾಸ್ ಕಾಮತ್, ಉದ್ಯಮಿ ಮೈಕಲ್ ಡಿ’ಸೋಜಾ ಉಪಸ್ಥಿತರಿದ್ದರು.
ಸಮ್ಮಾನದಾನಿಗಳಾದ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮತ್ತು ಉಷಾ ನಂದಗೋಪಾಲ ಶೆಣೈ, ಡಿ. ರಮೇಶ್ ನಾಯಕ್ ಮೈರಾ ಮತ್ತು ಸುಚಿತ್ರಾ ಆರ್. ನಾಯಕ್ ಅವರನ್ನು ಸಮ್ಮಾನಿಸಲಾಯಿತು. ವಾಸ್ತು ವಿನ್ಯಾಸಕಾರ ದಿನೇಶ್ ಶೇಟ್, ಗುತ್ತಿಗೆದಾರ ಸುಧೀರ್ ಶೆಣೈ, ಮತ್ತು ಒಳಾಂಗಣ ವಿನ್ಯಾಸಕ ಬಸ್ತಿ ಮಿಲಿಂದ್ ಶೆಣೈ ಅವರನ್ನು ಗೌರವಿಸಲಾಯಿತು.
ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಅವರು ಸ್ವಾಗತಿಸಿ, ವಿಶ್ವ ಕೊಂಕಣಿ ಸ್ಕಾಲರ್‌ಶಿಪ್ ಫಂಡ್ ಕಾರ್ಯದರ್ಶಿ ಪ್ರದೀಪ್ ಜಿ. ಪೈ ವಂದಿಸಿದರು. ಶಕುಂತಳಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿದರು.