Advertisement

ಬಸ್ತಿ ಅವರು ಸಾಧಕ ಸಂತ: ಪ್ರೊ|ವಿವೇಕ ರೈ

01:20 AM Jan 12, 2022 | Team Udayavani |

ಮಂಗಳೂರು: ಬದುಕು, ಚಿಂತನೆ, ಕಾರ್ಯನಿಷ್ಠೆ ಹಾಗೂ ಸಾಧನೆಗಳಲ್ಲಿ ಅನನ್ಯತೆಯನ್ನು ಮೆರೆ ದಿರುವ ಬಸ್ತಿ ವಾಮನ ಶೆಣೈ ಅವರು ಓರ್ವ ಸಾಧಕ ಸಂತ ಎಂದು ಹಂಪಿ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ ಹೇಳಿದ್ದಾರೆ.

Advertisement

ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ, ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ ಅವರಿಗೆ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಂಗಳವಾರ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಚೇರ್‌ಮನ್‌, ವಿಶ್ವ ಕೊಂಕಣಿ ಕೇಂದ್ರದ ಪೋಷಕ ಟಿ.ವಿ. ಮೋಹನದಾಸ್‌ ಪೈ ಮಾತನಾಡಿ, ಬಸ್ತಿ ಅವರು ಕೊಂಕಣಿ ಭಾಷೆ, ಸಂಸ್ಕೃತಿಗಾಗಿ ಮಾಡಿರುವ ಕಾರ್ಯ, ಸಲ್ಲಿಸಿರುವ ಸೇವೆ ಅಪಾರವಾದುದು. ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದು ಅವರ ಆಶಯ, ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಪ್ರೇರಣಾಶಕ್ತಿ
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮತ್ತು ವಿಶ್ವ ಕೊಂಕಣಿ ವಿದ್ಯಾನಿಧಿಯ ಕಾರ್ಯದರ್ಶಿ ಪ್ರದೀಪ್‌ ಜಿ. ಪೈ ಮಾತನಾಡಿ, ವಿಶ್ವ ಕೊಂಕಣಿ ಸಮ್ಮೇಳನ, ವಿಶ್ವ ಕೊಂಕಣಿ ಕೇಂದ್ರ ಮುಂತಾದ ಮಹತ್ವದ ಕಾರ್ಯ ಯೋಜನೆಗಳನ್ನು ಸಾಕಾರಗೊಳಿಸಿದ ಬಸ್ತಿ ಅವರು ಎಲ್ಲರಿಗೂ ಪ್ರೇರಣಾಶಕ್ತಿ. ಓರ್ವ ಮೇರು ವ್ಯಕ್ತಿತ್ವದ ನಾಯಕ ಎಂದು ಹೇಳಿದರು.

ಜ್ಯೋತಿ ಲ್ಯಾಬೋರೆಟರಿಸ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್‌ ಕಾಮತ್‌, ಮಾಂಡ್‌ ಸೋಬಾಣ್‌ ಗುರಿಕಾರ್‌ ಎರಿಕ್‌ ಒಜಾರಿಯೋ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಜಗದೀಶ ಪೈ, ಸಾಹಿತಿ ಮೆಲ್ವಿನ್‌ ರಾಡ್ರಿಗಸ್‌, ವಿದ್ವಾಂಸ ಡಾ| ಪ್ರಭಾಕರ ಜೋಶಿ, ಪ್ರಮುಖರಾದ ಗಿಲ್ಬರ್ಟ್‌ ಡಿ’ಸೋಜಾ, ಬಿ.ಆರ್‌. ಭಟ್‌, ಪ್ರದೀಪ್‌ ಕುಮಾರ್‌ ಕಲ್ಕೂರ, ಸಿ.ಡಿ. ಕಾಮತ್‌, ಡಾ| ವೈ.ವಿ. ರವೀಂದ್ರನಾಥ ರಾವ್‌, ಮುರಳಿ ಕಡೆಕಾರ್‌, ಸಿಎ ಸುರೇಂದ್ರ ನಾಯಕ್‌, ಪ್ರವೀಣ್‌ ನಾಯಕ್‌, ಎಚ್‌.ಆರ್‌. ಆಳ್ವ, ಜೂಲಿಯೆಟ್‌ ಮೊರಾಸ್‌, ಸ್ಮಿತಾ ಶೆಣೈ, ಭಾರತಿ ಸೇವಾಗೂರ್‌ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಶೆಣೈ ಅವರಿಗೆ ಹಲವಾರು ವರ್ಷಗಳಿಂದ ಕಾರು ಚಾಲಕರಾಗಿದ್ದ ಅಬ್ದುಲ್‌ ರಹಿಮಾನ್‌ ಅವರನ್ನು ಗೌರವಿಸಲಾಯಿತು.

ಗುರುದತ್ತ ಕಾಮತ್‌ ಬಂಟ್ವಾಳ್‌ಕಾರ್‌ ಉಪಸ್ಥಿತರಿದ್ದರು. ಶಕುಂತಳಾ ಆರ್‌. ಕಿಣಿ ನಿರೂಪಿಸಿದರು.

ರಸ್ತೆ / ವೃತ್ತಕ್ಕೆ ಬಸ್ತಿ
ಅವರ ಹೆಸರು
ಕೊಂಕಣಿ ಭಾಷೆ, ಸಂಸ್ಕೃತಿ, ಸಮುದಾಯದ ಉನ್ನತಿಗೆ ಶ್ರಮಿಸಿ ಕೊಂಕಣಿ ಸರದಾರ ಮನ್ನಣೆಗೆ ಪಾತ್ರರಾದ ಬಸ್ತಿ ವಾಮನ ಶೆಣೈ ಅವರ ಹೆಸರನ್ನು ಮಂಗಳೂರಿನ ಯಾವುದಾದರೂ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ಇಡುವ ಮೂಲಕ ಗೌರವ ಅರ್ಪಿಸಬೇಕು ಎಂದು ಎಚ್‌.ಆರ್‌. ಆಳ್ವ ಅಭಿಪ್ರಾಯಪಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next