Advertisement
ಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ಗೌರವಾಧ್ಯಕ್ಷತೆ ವಹಿಸುವರು. ರಾಷ್ಟ್ರಪತಿ ಪದಕ ಪುರಸ್ಕೃತ ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ, ಗುರು ಮಾತಾ ರಮಾದೇವಿ ಅಮ್ಮ, ಅರುಂಧತಿ ಋಷಿ ಪ್ರಭಾಕರ ಹಾಗೂ ಸಿದಾಟಛಿಂತ ಋಷಿ ಪ್ರಭಾಕರ ಭಾಗವಹಿಸುವರು. ಮಹಾಚಾರ್ಯ ಶ್ರೀ ಚೈತನ್ಯ ಕಾಯ್ಕಿಣಿ ಮಾರ್ಗ ದರ್ಶನ ನೀಡು ವರು. ಎಸ್.ಎನ್.ಸುಯಮೀಂ ದ್ರಾಚಾರ್, ಡಾ.ಆರ್.ಪ್ರಭಾಕರರಾವ್ ಸಹಕಾರ ನೀಡುವರು. ಸಮ್ಮೇಳನಕ್ಕೆ ಸುಕ್ರವಾರ ಬೆಳಗ್ಗೆ 9.45ಕ್ಕೆ ಕರ್ನಾಟಕದ ಮಾಜಿಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಚಾಲನೆ ನೀಡುವರು. ಆಧ್ಯಾತ್ಮಿಕ ಚಿಂತನವನ್ನು ಶ್ರೀ ಮಠದ ವಿದ್ವಾಂಸರು ನಡೆಸುವರು. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭಾಗವಹಿಸುವರು.
ಚಳ್ಳಕೆರೆಯ ಶ್ರೀ ಕ್ಷೇತ್ರ ದತ್ತಾವಧೂತ ಆಶ್ರಮದ ಶ್ರೀ ಸತ್ ಉಪಾಸಿ ಅಪ್ಪಾಜೀ ಸಾನ್ನಿಧ್ಯ ವಹಿಸುವರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಆಗಮಿಸುವರು ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.