ನವದೆಹಲಿ: ದೇಹದ ತೂಕ ಇಳಿಸಲು, ಸಕ್ಕರೆ ಕಾಯಿಲೆಯಿಂದ ಪಾರಾಗಲು ಎನ್‌ಎಸ್‌ಎಸ್ (ನಾನ್ ಶುಗರ್ ಸ್ವೀಟನರ್ಸ್) ಬಳಕೆ ಇತ್ತೀಚೆಗೆ ಜಾಸ್ತಿಯಾಗಿದೆ. ಆದರೆ ಇದನ್ನು ಬಳಸುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್‌ಒ) ಎಚ್ಚರಿಕೆ ನೀಡಿದೆ. ಸಕ್ಕರೆ ಪ್ರಮಾಣ ಅಧಿಕ್ಯದಿಂದ ಮಧುಮೇಹ, ಅತಿಭಾರ ಸೇರಿದಂತೆ ಹಲವು ಕಾಯಿಲೆಗಳು ಬರುವುದು ಎಲ್ಲರಿಗೂ ಗೊತ್ತಿದೆ.
ಇದಕ್ಕಾಗಿ ಇತ್ತೀಚೆಗೆ ಎನ್‌ಎಸ್‌ಎಸ್ (ನಾನ್ ಶುಗರ್ ಸ್ವೀಟನರ್ಸ್) ಬಳಕೆ ಜಾಸ್ತಿಯಾಗಿದೆ. ಆದರೆ ಇದರಿಂದ ಅಡ್ಡ ಪರಿಣಾಮಗಳು ಹೆಚ್ಚಿವೆ, ಮಧುಮೇಹ ಮಾದರಿ-2, ಹೃದಯಸಂಬಂಧಿ ಕಾಯಿಲೆಗಳು, ಶೀಘ್ರ ಮರಣ ಪ್ರಮಾಣ ಹೆಚ್ಚಾಗುತ್ತಿವೆ. ಹಲವು ಸಂಶೋಧನೆಗಳು ಇದನ್ನು ಖಚಿತಪಡಿಸಿವೆ.
ಆದ್ದರಿಂದ ಇದರ ಬಳಕೆ ಬಗ್ಗೆ ಮರು ಆಲೋಚನೆ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಊಟದಲ್ಲಿ ರಾಸಾಯನಿಕ ಮಿಶ್ರಿತ ಸಕ್ಕರೆಯ ಬದಲು ಎನ್‌ಎಸ್‌ಎಸ್ (ಕ್ಯಾಲೋರಿರಹಿತ ಕೃತಕ ಸಕ್ಕರೆ) ಬಳಕೆಯಿಂದ ದೀರ್ಘಾವಧಿಯಲ್ಲಿ ಉಪಯೋಗವಿಲ್ಲ. ಹಾಗಾಗಿ ಜನ ಸಹಜ ಸಕ್ಕರೆಯನ್ನು ಬಳಸಬಹುದು. ಪ್ರಕೃತಿ ಸಹಜವಾಗಿ ಸಿಹಿಯಿರುವ ಹಣ್ಣುಗಳು, ಅಥವಾ ಸಕ್ಕರೆಯೇ ಇಲ್ಲದ ಪಾನೀಯಗಳ ಬಳಕೆ ಉತ್ತಮ ಎಂದಿದೆ.