ಮಸ್ಕತ್: ಕೋರಿ ಆ್ಯಂಡರ್ಸನ್ ಬ್ಯಾಟಿಂಗ್ ಸಾಹಸದಿಂದ ಬೃಹತ್ ಮೊತ್ತ ಕಲೆಹಾಕಿದ ವರ್ಲ್ಡ್ ಜೈಂಟ್ಸ್ ತಂಡವು ಲೆಜೆಂಡ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಏಶ್ಯನ್ ಲಯನ್ಸ್ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಡ್ಯಾರೆನ್ ಸ್ಯಾಮಿ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡವು ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ ಚೊಚ್ಚಲ ವಿಜಯಿಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜೈಂಟ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತು. ಗುರಿ ಬೆನ್ನತ್ತಿದ ಏಶ್ಯನ್ ಲಯನ್ಸ್ ತಂಡ 231 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ವರ್ಲ್ಡ್ ಜೈಂಟ್ಸ್ ತಂಡವು 25 ರನ್ ಜಯ ಸಾಧಿಸಿತು.
ವರ್ಲ್ಡ್ ಜೈಂಟ್ಸ್ ತಂಡಕ್ಕೆ ಕೋರಿ ಆ್ಯಂಡರ್ಸನ್, ಕೆವಿನ್ ಪೀಟರ್ಸನ್, ಹ್ಯಾಡಿನ್ ಮತ್ತು ಸ್ಯಾಮಿ ಬ್ಯಾಟಿಂಗ್ ನೆರವು ನೀಡಿದರು. ಆ್ಯಂಡರ್ಸನ್ ಕೇವಲ 43 ಎಸೆತಗಳಿಂದ ಅಜೇಯ 94 ರನ್ ಗಳಿಸಿದರೆ, ಪೀಟರ್ಸನ್ 48 ರನ್, ಸ್ಯಾಮಿ 38 ರನ್ ಮತ್ತು ಹ್ಯಾಡಿನ್ 37 ರನ್ ಗಳಿಸಿದರು.
ಇದನ್ನೂ ಓದಿ:ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ವಿವಾಹಿತ!
ಗುರಿ ಬೆನ್ನತ್ತಿದ ಲಯನ್ಸ್ ಗೆ ಯಾರೊಬ್ಬರೂ ನಿಂತು ಆಡಿ ಬೆಂಬಲ ನೀಡಲಿಲ್ಲ. ಯೂಸುಫ್ ಅಜೇಯ 39 ರನ್, ಜಯಸೂರ್ಯ 38 ರನ್, ದಿಲ್ಶನ್ ಮತ್ತು ತರಂಗ ತಲಾ 25 ರನ್ ಗಳಿಸಿದರು. ಅಲ್ಬಿ ಮೋರ್ಕೆಲ್ ಮೂರು ವಿಕೆಟ್ ಕಿತ್ತರು.