ತಾಯಿ ಕರುಣಾಮಯಿ, ಕ್ಷಮಾದಾತೆ ಅನ್ನು ವುದು ರೂಢಿ. ಆದರೆ ನಮ್ಮ ಏಳಿಗೆ, ಯಶಸ್ಸನ್ನೇ ಬಯಸುವ ಅಪ್ಪನ ಉಪಸ್ಥಿತಿ ನೆನಪಾಗುವುದು ಕಡಿಮೆ. ತಂದೆ-ತಾಯಿ ಇಬ್ಬರೂ ಒಂದೇ ನಾಣ್ಯದ 2 ಮುಖಗಳಿದ್ದಂತೆ. ಕವಿಗಳು ತಾಯಿಯನ್ನು ಕಾಮಧೇನುವಿಗೂ ತಂದೆಯನ್ನು ಕಲ್ಪವೃಕ್ಷಕ್ಕೂ ಹೋಲಿಸುತ್ತಾರೆ. ಮಕ್ಕಳ ಬದುಕಿಗೆ ಇವರ ನಿಸ್ವಾರ್ಥ ಕಾಣಿಕೆ ಮಹತ್ವದ್ದು.
Advertisement
ಅಮ್ಮನಷ್ಟೇ ಅಪ್ಪನೂ ಪ್ರತಿಯೊಬ್ಬರ ಜೀವನ ರೂಪಿಸುವ ಮಹತ್ವದ ವ್ಯಕ್ತಿ. ಅಪ್ಪನಿಗೂ ಅಮ್ಮ ನಂಥ ಮನಸ್ಸು, ಹೆಂಗರುಳು ಇದ್ದೇ ಇರು ತ್ತದೆ. ಅಪ್ಪ ಮಕ್ಕಳ ಮೇಲಣ ತನ್ನ ಪ್ರೀತಿಯನ್ನು ಬಹಿ ರಂಗವಾಗಿ ತೋರ್ಪಡಿಸಿಕೊಳ್ಳದಿರಬಹುದು. ಆದರೆ ಅಪ್ಪನಾದವನಿಗೆ ತನ್ನ ಮಗ ಅಥವಾ ಮಗಳನ್ನು ತನಗಿಂತ ಎತ್ತರದ ಸ್ಥಾನದಲ್ಲಿ ನೋಡುವ ತವಕ. ಈ ಕಾರಣದಿಂದಲೇ ಆತ ಮಕ್ಕಳ ಪಾಲಿಗೆ ಶಿಸ್ತಿನ ಸಿಪಾಯಿ. ಹಾಗೆಂದು ಮಕ್ಕಳನ್ನು ಎಂದೂ ತನ್ನಿಂದ ದೂರ ಮಾಡಲು ಬಯಸಲಾರ. ಕುಟುಂಬದ ಒಳಿತಿಗಾಗಿ ಅಪ್ಪ ತನ್ನ ಇಡೀ ಜೀವನ ವನ್ನೇ ಸವೆಸುತ್ತಾನೆ. ಇಂಥ ಅಪ್ಪಂದಿರಿಗೆ ಗೌರವ, ಅಭಿನಂದನೆ ಸಲ್ಲಿಸುವ ಉದ್ದೇಶದೊಂದಿಗೆ ಪ್ರತೀ ವರ್ಷದ ಜೂನ್ ತಿಂಗಳ ಮೂರನೇ ರವಿವಾರ ದಂದು “ವಿಶ್ವ ಅಪ್ಪಂದಿರ ದಿನ’ ಆಚರಿಸಲಾಗುತ್ತದೆ.
Related Articles
Advertisement
ಮಕ್ಕಳು ಯೌವ್ವನಕ್ಕೆ ಬರುವ ಕಾಲಕ್ಕೆ ತಂದೆ- ತಾಯಿ ವಾರ್ಧಕ್ಯದ ಬಾಗಿಲಲ್ಲಿರುತ್ತಾರೆ. ತಂದೆ ಯಂತೂ ಹೆಚ್ಚೇ ದಣಿದಿರುತ್ತಾನೆ. ದುರ ದೃಷ್ಟವಶಾತ್ ಪತ್ನಿ ಅಗಲಿದರಂತೂ ತಂದೆ ಮತ್ತೆ ಜೀವನ್ಮುಖೀಯಾಗುವುದಿಲ್ಲ. ಈ ಎಲ್ಲ ಸಮಯ ಗಳಲ್ಲಿಯೂ ಅವರಿಗೆ ನಮ್ಮ ಕಾಳಜಿಯ ಅಗತ್ಯ ವಿದೆ. ತಾಯಿಯಂತೆ ತಂದೆಗೂ ನಾವು ನಿಕಟ ವಾಗಬೇಕಿದೆ. ಒಟ್ಟಾರೆ ಅಪ್ಪನಿಗೆ ಅಪ್ಪನೆ ಸಾಟಿ, ಅವರಿಗೆ ಪರ್ಯಾಯವೆಂಬುದಿಲ್ಲ. ನಮ್ಮ ಏಳಿ ಗೆಯ ಹಿಂದಿನ ಕೈಯನು ಗೌರವಿಸುವ, ಕೃತಜ್ಞತೆ ಸಲ್ಲಿಸುವ ಈ ದಿನದಂದು ನಮ್ಮೆಲ್ಲರಿಗೆ ಅಪ್ಪ ಇನ್ನೂ ಹತ್ತಿರವಾಗಲಿ. ಆ ಮೂಲಕ ಅವರ ಮೊಗದಲ್ಲಿ ಸಂತಸದ ಕಿರುನಗೆ ಮೂಡಿಸುವ ಜತೆಯಲ್ಲಿ ನಾವೂ ಅವರ ಕನಸನ್ನು ನನಸಾಗಿಸುವ ಹಾದಿಯಲ್ಲಿ ಹೆಜ್ಜೆ ಇಡೋಣ.
– ರಾಧಿಕಾ, ಕುಂದಾಪುರ