Advertisement

ಗಿಡ, ಮರ ಬೆಳೆಸಿ ಪರಿಸರ ಉಳಿಸಿ

02:59 PM Jun 07, 2022 | Team Udayavani |

ಕೊಳ್ಳೇಗಾಲ: ಜೆಎಸ್‌ಎಸ್‌ ನರ್ಸಿಂಗ್‌ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಾಂಶುಪಾಲ ಹೇಮೇಶ್‌ ಮೂರ್ತಿ ಸೋಮವಾರ ಗಿಡ ನೆಟ್ಟು ನೀರೆರೆದರು.

Advertisement

ನಂತರ ಮಾತನಾಡಿದ ಅವರು, ಪರಿಸರ ಮಾಲಿನ್ಯದಿಂದ ತೀವ್ರವಾಗಿ ಹವಾಮಾನ ಬದಲಾವಣೆಗಳು, ಹಸಿರು ಮನೆ, ಪರಿಣಾಮ, ಜಾಗತಿಕ ತಾಪಮಾನ ಹೀಗೆ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಸಮಸ್ಯೆಗಳ ಬಗ್ಗೆ ಜಾಗರೂಕತೆ ಇದ್ದರೆ ಪರಿಸರದ ಬಗ್ಗೆ ಕಾಳಜಿ ವಹಿಸಿ ಗಿಡ, ಮರ ಬೆಳೆಸಿ ಪರಿಸರ ಉಳಿಸಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಬಾರಿಯು ತಮ್ಮ ಮನೆಗಳ ಮುಂದೆ ಗಿಡ ನೆಟ್ಟು ಸಮಾಜಕ್ಕೆ ಪ್ರಕೃತಿಯನ್ನು ಉಳಿಸೋಣ ಮತ್ತು ಬೆಳೆಸೋಣ ಎಂಬ ಸಂದೇಶವನ್ನು ಸಾರಿದರು. ಉಪ ಪ್ರಾಂಶುಪಾಲರಾದ ರಂಗನಾಯಕಿ ಹಾಗೂ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಇತರರು ಇದ್ದರು.

ಪ್ರತಿಯೊಬರೂ ಗಿಡನೆಟ್ಟು ಪೋಷಿಸಿ:

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕಾವಲು ಪಡೆ ತಾಲೂಕು ಸಂಘಟನೆಯಿಂದ ಆಯೋಜನೆ ಮಾಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಸಂಧ್ಯಾ ಗಿಡನೆಟ್ಟು ನೀರೆರೆಯುವ ಮೂಲಕ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಅವರು, ಗಿಡನೆಟ್ಟರೆ ಸಾಲದು. ಅದನ್ನು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮನೆಗೊಂದು ಮರವಿದ್ದರೆ ಊರಿಗೊಂದು ವನ ತಾನಾಗಿಯೇ ಸೃಷ್ಟಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಗಿಡನೆಡಬೇಕೆಂದು ಸಲಹೆ ನೀಡಿದರು. ಕಾವಲು ಪಡೆಯ ತಾಲೂಕು ಅಧ್ಯಕ್ಷ ಎ.ಅಬ್ದುಲ್‌ ಮಾಲಿಕ್‌ ಮಾತನಾಡಿ, ಪರಿಸರದ ಕಾಳಜಿ ಎಲ್ಲರು ವಹಿಸಿ ಗಿಡ ನೆಟ್ಟರೆ ಉತ್ತಮ ಗಾಳಿ ಬೆಳಕು ದೊರಕುತ್ತದೆ ಎಂದು ತಿಳಿಸಿದರು.

ಕಾವಲು ಪಡೆಯ ತಾಲೂಕು ಕಾರ್ಯದರ್ಶಿ ಎಸ್‌. ಮುಬಾರಕ್‌, ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್‌ ರಶೀದ್‌, ಚಾಮರಾ ಜನಗರ ಜಿಲ್ಲಾ ಉಪಾಧ್ಯಕ್ಷ ಅಮೀರ್‌, ತಾಲೂಕು ಗೌರವಾಧ್ಯಕ್ಷ ವೆಂಕಟೇಶ್‌ ಗೌಡ, ಕಾರ್ಯಾಧ್ಯಕ್ಷರಾದ ಇಲಿಯಾಸ್‌, ಸಂಚಾಲಕರಾದ ಕುಂಜುಟ್ಟಿ, ಟೌನ್‌ ಉಪಾಧ್ಯಕ್ಷ ಸಾದಿಕ್‌ ಪಾಷಾ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಎಚ್‌.ರಾಜು, ಟೌನ್‌ ಸಂಚಾಲಕ ಮಿಮಿಕ್ರಿರಾಜು, ರೈತ ಸಂಘದ ಮುಖಂಡ ಶ್ರೀನಿವಾಸ್‌ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next