Advertisement

“ವೈದ್ಯ ವೃತ್ತಿಯ ಬಗ್ಗೆ ನಂಬಿಕೆ ಮುಖ್ಯ’

10:38 PM Jul 01, 2019 | Sriram |

ಕಾಪು: ಸಮಾಜದ ಆರೋಗ್ಯವನ್ನು ಕಾಪಾಡುವ ಧ್ಯೇಯವನ್ನಿಟ್ಟುಕೊಂಡು ಸೇವಾ ಮನೋಭಾವದೊಂದಿಗೆ ಹಗಲಿರುಳೆನ್ನದೆ ಶ್ರಮಿಸುವ ವೈದ್ಯರನ್ನು ಮತ್ತು ವೃತ್ತಿಗೆ ಸಂಬಂಧಪಟ್ಟವರನ್ನು ಗುರುತಿಸುವುದರಿಂದ ಗೌರವ ಹೆಚ್ಚುತ್ತದೆ. ಮುಖ್ಯವಾಗಿ ವೈದ್ಯ ವೃತ್ತಿಯ ಬಗ್ಗೆ ಗೌರವಕ್ಕಿಂತಲೂ ನಂಬಿಕೆ ಮುಖ್ಯ ಎಂದು ಡಾ|ಯಶೋದಾನಂದ ಅವರು ಹೇಳಿದರು.

Advertisement

ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಕಾಪು ರೋಟರಿ ಕ್ಲಬ್‌ ವತಿಯಿಂದ ಜು. 1ರಂದು ಬೆಳಪು ಶಾಸ್ತ್ರಿ ಕ್ಲಿನಿಕ್‌ನಲ್ಲಿ ಹಮ್ಮಿಕೊಳ್ಳಲಾದ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವೈದ್ಯರನ್ನು ದೇವರೆಂಬ ಭಾವನೆ ಇಟ್ಟು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ರೋಗಿಗಳನ್ನು ತಾಳ್ಮೆಯಿಂದ ಚಿಕಿತ್ಸೆ ನೀಡಿ ಗುಣಮುಖರಾಗಿಸುವುದು ವೈದ್ಯರ ಕರ್ತವ್ಯವಾಗಿದೆ. ಇರದಲ್ಲಿ ವೈದ್ಯರು, ರೋಗಿಗಳು ಹಾಗೂ ಸಾರ್ವಜನಿಕರ ನಡುವೆ ನಂಬಿಕೆ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದರು.

ಕಾಪು ರೋಟರಿ ಕ್ಲಬ್‌ ನಿಯೋಜಿತ ಅಧ್ಯಕ್ಷ ಮನೋಹರ ರಾವ್‌ ಪಣಿಯೂರು, ಅಧ್ಯಕ್ಷ ಜೇಮ್ಸ್‌ ಡಿ. ಸೋಜ, ಸದಸ್ಯರಾದ ಪ್ರವೀಣ್‌ ಕುಮಾರ್‌ ಶೆಟ್ಟಿ, ಮಧು ಪಾಲನ್‌, ಸತೀಶ್‌ ಶೆಟ್ಟಿ, ಸ್ಥಳೀಯರಾದ ನಿಜಾಮುದ್ದೀನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next