Advertisement
ಕಚ್ಚಾತೈಲದ ಮೇಲೆ ನಿಯಂತ್ರಣ ಸಾಧಿಸಿದಂತೆ ಈಗ ಸೆಮಿಕಂಡಕ್ಟರ್ ಮೇಲೆ ಹಿಡಿತ ಸಾಧಿಸಲು ಹಲವು ದೇಶಗಳು ತಮ್ಮದೇ ಯೋಜನೆಗಳನ್ನು ರೂಪಿಸುತ್ತಿವೆ. ಪ್ರಧಾನಿ ಮೋದಿಯೂ ಸಹ ಭಾರತವನ್ನು ಸೆಮಿಕಂಡಕ್ಟರ್ ಹಬ್ ಮಾಡಲು ಮುಂದಾಗಿರುವುದಾಗಿ ಹಲವು ಬಾರಿ ಹೇಳಿದ್ದಾರೆ. ಇತ್ತೀಚಿನ ಅಮೆರಿಕ ಭೇಟಿ ಸಮಯದಲ್ಲಿ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಏನಿದು ಸೆಮಿಕಂಡಕ್ಟರ್, ಇದಕ್ಕೇಕೆ ಇಷ್ಟು ಮಹತ್ವ, ಇದರ ಉಪಯೋಗವೇನು ಎಂಬುದರ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ.
ಸೆಮಿಕಂಡಕ್ಟರ್ ಎಂಬುದನ್ನು ಕನ್ನಡಕ್ಕೆ “ಅರೆವಾಹಕ’ ಎಂದು ಭಾಷಾಂತರಿಸಬಹುದು. ಏಕೆಂದರೆ ಸೆಮಿಕಂಡಕ್ಟರ್ ಇದೇ ಕೆಲಸವನ್ನು ಮಾಡುವುದು. ವಿದ್ಯುತ್ ಸರಾಗವಾಗಿ ಹರಿಯಲು ಬಿಡುವ ವಸ್ತುಗಳು ವಾಹಕಗಳು ಎಂದು, ಹರಿಯಲು ಬಿಡದ ವಸ್ತುಗಳನ್ನು ಅವಾಹಕ ಎಂದು ಗುರುತಿಸುತ್ತೇವೆ. ಆದರೆ ಈ ಅರೆವಾಹಕಗಳು ಎಷ್ಟು ಬೇಕೋ ಅಷ್ಟು ವಿದ್ಯುತ್ತನ್ನು ಹರಿಯಲು ಬಿಟ್ಟು ವಾಹಕ ಮತ್ತು ಅವಾಹಕಗಳು ಮಾಡಲಾಗದ ಕೆಲಸವನ್ನು ಮಾಡುತ್ತವೆ! ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕಿದ್ದರೆ, ದೀಪವೊಂದು ಆನ್, ಆಫ್ ಆಗುವಲ್ಲಿ ಸ್ವಿಚ್ ಮಾಡುವ ಕೆಲಸವನ್ನು ಸೆಮಿಕಂಡಕ್ಟರ್ ಮಾಡುತ್ತದೆ. ಇವುಗಳ ಗಾತ್ರ ಕಣ್ಣಿಗೆ ಕಾಣದಷ್ಟು ಸಣ್ಣವಾಗಿದ್ದು, ಒಂದಷ್ಟು ಸೆಮಿಕಂಡಕ್ಟರ್‌ಗಳನ್ನು ಸೇರಿಸಿ ಚಿಪ್‌ಗ್ಳನ್ನು ತಯಾರು ಮಾಡಲಾಗಿರುತ್ತದೆ. ಈ ಚಿಪ್‌ಗ್ಳು ವಿದ್ಯುತ್‌ನಿಂದ ಆಗಬೇಕಾದ ಎಲ್ಲ ಕೆಲಸವನ್ನು ಮಾಡಿಸುತ್ತವೆ. ಸಿಲಿಕಾನ್ ಮತ್ತು ಜರ್ಮೇನಿಯಂ ಬಳಸಿ ಇದನ್ನು ತಯಾರು ಮಾಡಲಾಗುತ್ತದೆ.
Related Articles
ಕಂಪ್ಯೂಟರ್ ಸೇರಿ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ನಾವು ನೀಡುತ್ತಿರುವ ಸೂಚನೆಗಳು ಅರ್ಥವಾಗುವುದು ಕೇವಲ ಬೈನರಿ ಭಾಷೆಯಲ್ಲಿದ್ದಾಗ ಮಾತ್ರ (0, 1 ಭಾಷೆ). ಕಂಪ್ಯೂಟರ್‌ಗಳಲ್ಲಿ ವಿದ್ಯುತ್ ಹರಿದರೆ ಅದನ್ನು “1′ ಎಂದು ವಿದ್ಯುತ್ ಹರಿಯದಿದ್ದರೆ ಅದನ್ನು “0′ ಎಂದು ಗುರುತಿಸಲಾಗುತ್ತದೆ. ಈ ವಿದ್ಯುತ್ ಹರಿಯುವ ಮತ್ತು ತಡೆಯುವ ಕೆಲಸವನ್ನು ಈ ಸೆಮಿಕಂಡಕ್ಟರ್‌ಗಳು ಮಾಡುತ್ತವೆ. ಲಕ್ಷಾಂತರ ಸೆಮಿಕಂಡಕ್ಟರ್‌ಗಳನ್ನು ಒಂದುಕಡೆ ಜೋಡಿ ಚಿಪ್‌ಗ್ಳನ್ನು ತಯಾರಿಸಲಾಗಿರುತ್ತದೆ.
Advertisement
ಇವು ಕಂಪ್ಯೂಟರ್‌ಗೆ ನಾವು ನೀಡಬೇಕಿರುವ ಸೂಚನೆಯ ಆಧಾರದಲ್ಲಿ ವಿದ್ಯುತ್ ಹರಿಸುವ ಮತ್ತು ತಡೆಯುವ ಮೂಲಕ ಕೆಲಸ ಮಾಡಿಸುತ್ತವೆ. ಕೋಟ್ಯಂತರ ಸೆಮಿಕಂಡಕ್ಟರ್‌ಗಳು ಒಟ್ಟಿಗೆ ಕೆಲಸ ಮಾಡುವುದರಿಂದ ನಾವು ಯೋಚಿಸಿದಷ್ಟೇ ವೇಗವಾಗಿ ಕಂಪ್ಯೂಟರ್ ಆಗಬೇಕಿರುವ ಕೆಲಸ ಮಾಡುತ್ತದೆ. ಹೀಗಾಗಿಯೇ ಸೆಮಿಕಂಡಕ್ಟರ್‌ಗಳು ಜಾಗತಿಕ ಮಹತ್ವವನ್ನು ಪಡೆದುಕೊಂಡಿವೆ.
ಡಿಜಿಟಲ್ ಕ್ರಾಂತಿಯಿಂದಾಗಿ ಬೇಡಿಕೆಜಗತ್ತು ಈಗ ಡಿಜಿಟಲ್ ಕ್ರಾಂತಿಗೆ ತೆರೆದುಕೊಂಡಿದೆ. ಪ್ರತೀ ವ್ಯವ ಹಾರವನ್ನು ಡಿಜಿಟಲೀಕರಣ ಮಾಡಲಾ ಗುತ್ತಿದೆ. ಡಿಜಿಟಲೀಕರಣ ಮತ್ತು ಎಲೆಕ್ಟ್ರಾನಿಕ್ ಕ್ರಾಂತಿಯಾಗುತ್ತಿದ್ದಂತೆ ಸೆಮಿಕಂಡಕ್ಟರ್‌ನ ಬೇಡಿಕೆ ಹೆಚ್ಚಾಗಿದೆ. ಡಿಜಿಟಲ್ ಕಾರ್ಯಚಟು ವಟಿಕೆಗಳು ವೇಗ ವಾಗಿ ನಡೆಯಬೇಕಿದ್ದರೆ, ಅಲ್ಲಿ ಬಳಕೆಯಾಗುವ ಸೆಮಿಕಂಡಕ್ಟರ್‌ಗಳ ಪ್ರಮಾಣವೂ ಹೆಚ್ಚಳವಾಗಬೇಕು. ಹೀಗಾಗಿಯೇ ಡಿಜಿಟಲ್ ಕ್ರಾಂತಿ ಆಗುತ್ತಿದ್ದಂತೆ ಜಾಗತಿಕ ಬೇಡಿಕೆ ಹೆಚ್ಚಾಗಿದೆ. ಯಾವ ಸಾಧನಗಳಲ್ಲಿ ಸೆಮಿಕಂಡಕ್ಟರ್ ಬಳಕೆ?
ಸೆಮಿಕಂಡಕ್ಟರ್‌ಗಳು ಈ ಸರ್ವವ್ಯಾಪಿಯಾಗಿವೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್, ಕಾರ್, ಬೈಕ್, ಟಿವಿ, ಡಿಜಿಟಲ್ ಕೆಮರಾ, ವಾಷಿಂಗ್ ಮಷಿನ್, ರೆಫ್ರಿಜರೇಟರ್, ರೈಲು, ವಿಮಾನ, ವೈದ್ಯಕೀಯ ಉಪಕರಣಗಳು, ಮಿಲಿಟರಿ ಉಪಕರಣಗಳು, ಇಂಟರ್ನೆಟ್, ಎಟಿಎಂ… ಹೀಗೆ ಡಿಜಿಟಲ್ ಎಂದು ಕರೆಸಿಕೊಳ್ಳುವ ಎಲ್ಲ ಸ್ಥಳದಲ್ಲೂ ಈ ಸೆಮಿಕಂಡಕ್ಟರ್‌ಗಳಿರುತ್ತವೆ. ಅಮೆರಿಕ- ಚೀನ ಬಿಕ್ಕಟ್ಟಿನಿಂದ ಜಾಗತಿಕ ಚಿಪ್ ಮಾರುಕಟ್ಟೆಗೆ ಎದುರಾದ ಭೀತಿ?
ಅಮೆರಿಕ ಮತ್ತು ಚೀನದ ನಡುವೆ ಉಂಟಾಗಿರುವ ಬಿಕ್ಕಟ್ಟು ಜಾಗತಿಕ ಚಿಪ್ ಮಾರುಕಟ್ಟೆಯ ಮೇಲೆ ಭಯವನ್ನು ಮೂಡಿಸಿದೆ. ಒಂದು ವೇಳೆ ಅಮೆರಿಕ ಚೀನದ ಎಲ್ಲಾ ವಸ್ತುಗಳನ್ನು ನಿಷೇಧಿಸಿದರೆ, ಇದಕ್ಕಾಗಿ ತೈವಾನನ್ನೇ ನಂಬಿಕೊಂಡಿರುವ ರಾಷ್ಟ್ರಗಳು ನಷ್ಟ ಅನುಭವಿಸಲಿವೆ. ಹೀಗಾಗಿಯೇ ಪರ್ಯಾಯ ದೇಶಗಳಲ್ಲಿ ಹೂಡಿಕೆಗೆ ಹಲವು ದೇಶಗಳು ಮುಂದಾಗಿವೆ. 102 ಪ್ಲಾಂಟ್‌ಗಳನ್ನು ಹೊಂದುವ ಮೂಲಕ ಜಪಾನ್ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ತೈವಾನ್‌ನಲ್ಲಿ 77 ಘಟಕಗಳಿವೆ. ಅಮೆರಿಕದಲ್ಲಿ 76 ಘಟಕಗಳಿವೆ. ಅಮೆರಿಕ ಮತ್ತು ಚೀನ ನಡುವಿನ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ ಭಾರತ, ಮಲೇಷ್ಯಾ, ಇಂಡೋನೇಷ್ಯಾಗಳು ಈ ಸ್ಥಾನ ತುಂಬಲು ಮುಂದಾಗುತ್ತಿವೆ. ಸೌದಿ ಅರೇಬಿಯಾ ಸಹ 75 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ.
ಸೆಮಿಕಂಡಕ್ಟರ್ ಈಗ ಇಡೀ ರಾಜಕೀಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ದಶಕಗಳ ವೈರತ್ವ ಹೊಂದಿದ್ದ ದೇಶಗಳು ಸೆಮಿಕಂಡಕ್ಟರ್‌ಗಾಗಿ ಪರಸ್ಪರ ಸ್ನೇಹದ ಹಸ್ತ ಚಾಚುತ್ತಿವೆ. ತೈವಾನ್, ಚೀನ, ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ದೇಶಗಳು ಪ್ರಸ್ತುತ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಇವುಗಳನ್ನು ಮೀರಿಸಲು ಭಾರತ ಮುಂದಾಗಿದ್ದು, ಹಲವು ಕೇಂದ್ರಗಳನ್ನು ಸ್ಥಾಪನೆ ಮಾಡುವುದರ ಜತೆಗೆ ಹಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಸೆಮಿಕಂಡಕ್ಟರ್ ಉತ್ಪಾದಕ ದೇಶಗಳೊಂದಿಗೆ ಈಗಾಗಲೇ ಹಲವು ದೇಶಗಳು ಸ್ನೇಹ ಹಸ್ತ ಚಾಚಿವೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಚೀನದೊಂದಿಗೆ ವೈರತ್ವ ಹೊಂದಿರುವ ದೇಶಗಳು ಸೆಮಿಕಂಡಕ್ಟರ್ ಉತ್ಪಾದನೆಗೆ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಇದು ಜಾಗತಿಕ ರಾಜಕೀಯದಲ್ಲಿ ಭಾರತದ ಸ್ಥಾನವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದಲ್ಲದೇ ಈ ರಾಜಕಾರಣದ(ಜಿಯೋಪಾಲಿಟಿಕ್ಸ್) ರೂಪರೇಷೆಯನ್ನು ಬದಲು ಮಾಡಲಿದೆ. ಟೆಲಿಫೋನ್ ಸಂವಹನಕ್ಕಾಗಿ ಸೆಮಿಕಂಡಕ್ಟರ್ ಸಂಶೋಧನೆ!
ಕಂಪ್ಯೂಟರ್ ಅಥವಾ ಡಿಜಿಟಲ್ ಸಾಧನಗಳಿಗಾಗಿ ಈ ಸೆಮಿಕಂಡಕ್ಟರ್‌ಗಳನ್ನು ತಯಾರು ಮಾಡಲಿಲ್ಲ ಎಂಬ ವಿಷಯ ಅಚ್ಚರಿ ಮೂಡಿಸುತ್ತದೆ. ಸೆಮಿಕಂಡಕ್ಟರ್‌ಗಳನ್ನು ಮೊದಲ ಉತ್ಪಾದಿಸಿದ್ದು, ಟೆಲಿಫೋನ್ ಕಂಪೆನಿ ಅದೂ ಸಹ ತನ್ನ ಸಿಗ್ನಲ್‌ಗಳ ಬಲವರ್ಧನೆಗಾಗಿ. ಅಮೆರಿಕದಲ್ಲಿನ ದೂರವಾಣಿ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ “ಬೆಲ್ ಲ್ಯಾಬೊರೇಟರಿ’ ಎಂಬ ಸಂಸ್ಥೆ ಇದನ್ನು ಮೊದಲ ಬಾರಿಗೆ ತಯಾರು ಮಾಡಿತು. ದೂರವಾಣಿ ತರಂಗಗಳನ್ನು ಬಹುದೂರ ಕೊಂಡೊಯ್ಯುವುದಕ್ಕಾಗಿ ಅವುಗಳ ಬಲವರ್ಧನೆ ಮಾಡಬೇಕಿತ್ತು. ಅದಕ್ಕಾಗಿ ಅಲ್ಲಲ್ಲಿ ಈ ಸೆಮಿಕಂಡಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಮುಂದೆ ಡಿಜಿಟಲ್ ಕ್ರಾಂತಿಗೆ ಕಾರಣವಾಯಿತು. 2026ರಿಂದ “ಮೇಡ್ ಇನ್ ಇಂಡಿಯಾ ಚಿಪ್’!
ಸೆಮಿಕಂಡಕ್ಟರ್ ಉದ್ಯಮದಲ್ಲಿ ಪ್ರಮುಖ ರಾಷ್ಟ್ರವಾಗಿ ಗುರುತಿ ಸಿ ಕೊಳ್ಳುವ ಎಲ್ಲ ಅವಕಾಶಗಳು ಭಾರತದ ಮುಂದಿದೆ. ಭಾರತದ ಎಂಜಿನಿಯರಿಂಗ್ ಕೌಶಲ, ಹೆಚ್ಚುತ್ತಿರುವ ತಂತ್ರಜ್ಞಾನ, ಸರಕಾರದ ಬೆಂಬಲದಿಂದ ಇವೆಲ್ಲವೂ ಸಾಧ್ಯವಾಗಲಿದೆ. ಭಾರತವನ್ನು ಸೆಮಿ ಕಂಡಕ್ಟರ್ ಹಬ್ ಮಾಡಲು ನಿರ್ಧರಿಸಲಾಗಿದೆ. ಸೆಮಿಕಂ ಡಕ್ಟರ್ ಅಭಿವೃದ್ಧಿಗೆ 2021ರಲ್ಲಿ ಭಾರತ 83,000 ಕೋಟಿ ರೂ.ಗಳನ್ನು ನೀಡಲು ಸರಕಾರ ನಿರ್ಧರಿಸಿತ್ತು. ಟಾಟಾ ಗ್ರೂಪ್ ಈಗಾಗಲೇ ಅಸ್ಸಾಂ ಮತ್ತು ಗುಜರಾತ್‌ಗಳಲ್ಲಿ 2 ಸೆಮಿ ಕಂಡಕ್ಟರ್ ಘಟಕ ನಿರ್ಮಿಸು ತ್ತಿದೆ. 2026ರಿಂದ ಇಲ್ಲಿ ಉತ್ಪಾ ದನೆ ಆರಂಭವಾಗುವ ನಿರೀಕ್ಷೆ ಇದೆ. ಎಚ್‌ಸಿಎಲ್ ಜತೆ ಸೇರಿ ಸೆವಿ ುಕಂಡಕ್ಟರ್ ಉತ್ಪಾದನೆಗೆ ಫಾಕ್ಸ್‌ಕಾನ್ ಮುಂದಾಗಿದೆ. – ಗಣೇಶ್ ಪ್ರಸಾದ್