Advertisement

World Cup Final ; ಪ್ಯಾಲೆಸ್ತೀನ್ ಪರ ಧ್ವನಿಯೆತ್ತಿ ಮೈದಾನಕ್ಕೆ ನುಗ್ಗಿದ ಪ್ರೇಕ್ಷಕ !!

03:47 PM Nov 19, 2023 | Team Udayavani |

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ವಿಶ್ವಕಪ್ ರೋಚಕ ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಪ್ಯಾಲೆಸ್ತೀನ್ ಪರ ಧ್ವನಿಯೆತ್ತಿದ  ಕ್ರೀಡಾಂಗಣದೊಳಗೆ ನುಗ್ಗಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರ ಹೆಗಲ ಮೇಲೆ ಕೈಹಾಕಿದ ಕಳವಳಕಾರಿ ಘಟನೆ ನಡೆದಿದೆ. ಘಟನೆ ನಡೆದ ಬೆನ್ನಲ್ಲೇ ಕ್ರೀಡಾಂಗಣದಲ್ಲಿ ಪೊಲೀಸರು ಬಿಗಿ ಭದ್ರತೆ ಇನ್ನಷ್ಟು ಹೆಚ್ಚು ಮಾಡಿದ್ದಾರೆ.

Advertisement

ದಿಗ್ಗಜರೆಲ್ಲರೂ ಪಂದ್ಯ ವೀಕ್ಷಿಸುತ್ತಿದ್ದ ವೇಳೆ, ಗಂಭೀರವಾಗಿ ಪಂದ್ಯ ಸಾಗುತ್ತಿದ್ದ ವೇಳೆ ‘ಸ್ಟಾಪ್ ಬಾಂಬಿಂಗ್ ಪ್ಯಾಲೆಸ್ತೀನ್’ ಎಂಬ ಟೀ ಶರ್ಟ್ ಮತ್ತು ಕೆಂಪು ಶಾರ್ಟ್ಸ್ ಧರಿಸಿದ್ದ ಯುವಕ ಏಕಾಏಕಿ ಮೈದಾನಕ್ಕೆ ನುಗ್ಗಿ ಕ್ರೀಸ್ ವರೆಗೆ ಶರವೇಗದಲ್ಲಿ ಓಡಿ ಬಂದು ಕೊಹ್ಲಿ ಅವರ ಹೆಗಲಿಗೆ ಕೈ ಹಾಕಿದ್ದಾನೆ. ಈ ವೇಳೆ ಇನ್ನೊಂದು ಬದಿಯಲ್ಲಿ ಕೆ.ಎಲ್.ರಾಹುಲ್ ಅವರಿದ್ದರು. ಆಡಮ್ ಜಂಪಾ ಬೌಲಿಂಗ್ ಮಾಡುತ್ತಿದ್ದರು.

ತತ್ ಕ್ಷಣ ಜಾಗ್ರತರಾದ ಪೊಲೀಸ್ ಅಧಿಕಾರಿಗಳು ಮತ್ತು ಕ್ರೀಡಾಂಗಣದ ಸಿಬಂದಿಗಳು ದೌಡಾಯಿಸಿ ಬಂದು ಆತನನ್ನು ಹೊರಗೆ ಎಳೆದೊಯ್ದಿದ್ದಾರೆ.  ಪೊಲೀಸರು ಬಂಧಿಸಿದ್ದಾರೆ. ಆತ ಯಾರು ಎನ್ನುವ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next