Advertisement
ಈ ಎರಡೂ ತಂಡಗಳು ಈಗಾ ಗಲೇ ಮೊದಲ ಪಂದ್ಯವನ್ನು ಆಡಿ ಮುಗಿಸಿವೆ. ಪಾಕಿಸ್ಥಾನ ಆರಂಭಿಕ ಮುಖಾಮುಖೀ ಯಲ್ಲಿ ನೆದರ್ಲೆಂಡ್ಸ್‌ಗೆ ಸೋಲು ಣಿಸಿದರೆ, ಶ್ರೀಲಂಕಾ ಟನ್‌ಗಟ್ಟಲೆ ರನ್ ಬಿಟ್ಟುಕೊಟ್ಟು ದಕ್ಷಿಣ ಆಫ್ರಿಕಾಕ್ಕೆ ಶರಣಾಗಿತ್ತು. ಇಲ್ಲಿ ಪಾಕ್ ಗೆದ್ದಿತಾದರೂ ಅದೊಂದು ಆಧಿಕಾರ ಯುತ ಗೆಲುವು ಆಗಿರಲಿಲ್ಲ. ಹಾಗೆಯೇ ಲಂಕಾ ಸೋತರೂ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿತ್ತು ಎಂಬು ದನ್ನು ಮರೆಯುವಂತಿಲ್ಲ.
ಪಾಕಿಸ್ಥಾನವಿನ್ನು ಹಂತ ಹಂತವಾಗಿ ದೊಡ್ಡ ದೊಡ್ಡ ತಂಡಗಳನ್ನು ಎದುರಿಸುತ್ತ ಹೋಗುವುದರಿಂದ ತನ್ನ ಆಟದ ಮಟ್ಟವನನ್ನು ಸುಧಾರಿಸಿಕೊಳ್ಳುವುದು ಅನಿವಾರ್ಯವಾಗಿದೆ. ನೆದರ್ಲೆಂಡ್ಸ್ ನಂಥ ಸಾಮಾನ್ಯ ತಂಡದ ವಿರುದ್ಧ ಬಾಬರ್ ಪಡೆ ಆಲೌಟ್ ಆದದ್ದು ಶುಭ ಸೂಚನೆಯಂತೂ ಅಲ್ಲ. ಡಚ್ಚರಿಗೆ ಹೋಲಿಸಿದರೆ ಲಂಕೆಯ ಬೌಲಿಂಗ್ ಗುಣಮಟ್ಟ ಹೆಚ್ಚು ಉತ್ತಮ. ಆದರೆ ನ್ಯೂಜಿಲ್ಯಾಂಡ್‌ಗೆ ದಾಖಲೆಯ ಮೊತ್ತ ವನ್ನು ಬಿಟ್ಟುಕೊಟ್ಟ ಸಂಕಟದಲ್ಲಿದೆ. ಇದಕ್ಕೆ ಪಾಕ್ ವಿರುದ್ಧ ಪ್ರಾಯಶ್ಚಿತ್ತ ಸಾಧ್ಯವೇ ಎಂಬುದೊಂದು ಪ್ರಶ್ನೆ.
ಪಾಕಿಸ್ಥಾನ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ತಂಡ. ಆದರೆ ದುನಿತ್ ವೆಲ್ಲಲಗೆ ಆ್ಯಂಡ್ ಕಂಪೆನಿಯನ್ನು ಹಗುರವಾಗಿ ಪರಿಗಣಿ ಸುವಂತಿಲ್ಲ. ಅದರಲ್ಲೂ ಆಫ್ಸ್ಪಿನ್ನರ್ ಮಹೀಶ ತೀಕ್ಷಣ ಬಂದರೆ ಲಂಕಾ ಬೌಲಿಂಗ್ ತೀಕ್ಷ್ಣಗೊಳ್ಳಲೂಬಹುದು. ಸ್ನಾಯು ಸೆಳೆತಕ್ಕೊಳಗಾಗಿರುವ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಪಾಕಿಸ್ಥಾನದ ಓಪನರ್ ಫಾರ್ಮ್ ನಲ್ಲಿಲ್ಲ. ಫಖಾರ್ ಜಮಾನ್, ಇಮಾಮ್ ಉಲ್ ಹಕ್ ಇಬ್ಬರೂ ರನ್ ಬರಗಾಲ ಅನುಭವಿಸುತ್ತಿದ್ದಾರೆ. ನಾಯಕ ಬಾಬರ್ ಆಜಂ ಕೂಡ ಡಚ್ಚರೆದುರು ಪೆಚ್ಚಾಗಿದ್ದರು. 38ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ರಿಜ್ವಾನ್-ಶಕೀಲ್ ಕ್ರೀಸ್ ಆಕ್ರಮಿಸಿಕೊಂಡು ನಿಲ್ಲದೇ ಹೋಗಿದ್ದರೆ ಪಾಕಿಸ್ಥಾನಕ್ಕೆ ಕಷ್ಟವಿತ್ತು.
Related Articles
ಪಾಕಿಸ್ಥಾನದ ಬೌಲಿಂಗ್ ವಿಭಾಗ, ಅದರಲ್ಲೂ ತ್ರಿವಳಿ ವೇಗಿಗಳ ದಾಳಿ ಅತ್ಯಂತ ಹರಿತ. ಅಫ್ರಿದಿ, ಹಸನ್ ಅಲಿ, ರವೂಫ್ ಅವರನ್ನು ಎದುರಿಸಿ ನಿಂತರಷ್ಟೇ ಲಂಕೆಗೆ ಯಶಸ್ಸು ಸಾಧ್ಯ. ಪಾಕ್‌ನಂತೆ ಲಂಕಾ ಓಪನರ್ ಕೂಡ ವೈಫಲ್ಯ ಅನುಭವಿಸಿದ್ದಾರೆ. ಹರಿಣಗಳ ವಿರುದ್ಧ ಪಥುಮ್ ನಿಸ್ಸಂಕ-ಕುಸಲ್ ಪೆರೆರ ಜೋಡಿ ಶೋಚನೀಯ ವೈಫಲ್ಯ ಅನುಭವಿಸಿತ್ತು. ಸದೀರ ಸಮರವಿಕ್ರಮ, ಧನಂಜಯ ಡಿ ಸಿಲ್ವ ಕೂಡ ಕ್ಲಿಕ್ ಆಗಿರಲಿಲ್ಲ. ಆದರೂ ಕುಸಲ್ ಮೆಂಡಿಸ್ ಮತ್ತು ನಾಯಕ ದಸುನ್ ಶಣಕ ಪರಾಕ್ರಮದಿಂದ 326ರ ತನಕ ಸಾಗಿದ್ದು ಒಳ್ಳೆಯ ಪ್ರಯತ್ನವಾಗಿತ್ತು.
Advertisement