Advertisement
ಸಚಿನ್ಗೆ ಉಡುಗೊರೆಕಪಿಲ್ ಪಡೆ ವಿಶ್ವಕಪ್ ಗೆದ್ದು ಬರೋಬ್ಬರಿ 28 ವರ್ಷಗಳ ಬಳಿಕ ಭಾರತ 2ನೇ ಸಲ ಜಾಗತಿಕ “ಕ್ರಿಕೆಟ್ ಕಿಂಗ್’ ಎನಿಸಿ ಮೆರೆದಾಡಿತು. ತವರಿನಂಗಳದಲ್ಲಿ ವಿಶ್ವಕಪ್ ಎತ್ತಿದ ಜಗತ್ತಿನ ಪ್ರಪ್ರಥಮ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಅಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಧೋನಿ ಪಡೆ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಕಪ್ ಎತ್ತಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ವಿಶ್ವಕಪ್ ಟ್ರೋಫಿಯ ಬರಗಾಲವನ್ನು ನೀಗಿಸಿತು. ಇದು ತೆಂಡುಲ್ಕರ್ ಅವರ ಕೊನೆಯ ವಿಶ್ವಕಪ್ ಕೂಡ ಆಗಿದ್ದರಿಂದ ದೊಡ್ಡದೊಂದು ಕೊರತೆ ಅವರನ್ನು ಕಾಡುತ್ತಿತ್ತು. ಧೋನಿ ಪಡೆ ಸಚಿನ್‌ಗೊàಸ್ಕರ ಮಹೋನ್ನತ ಸಾಧನೆಗೈದು ಕೃತಾರ್ಥವಾಯಿತು.
Related Articles
ಇದು 14 ತಂಡಗಳ ನಡುವಿನ ಕೂಟವಾಗಿತ್ತು. 7 ತಂಡಗಳ 2 ಗುಂಪುಗಳನ್ನು ರಚಿಸಲಾಗಿತ್ತು. ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿದ್ದ 10 ತಂಡಗಳು ನೇರ ಪ್ರವೇಶ ಪಡೆದರೆ, ಉಳಿದ 4 ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಆರಿಸಲಾಯಿತು. ಈ ತಂಡಗಳೆಂದರೆ ಚಾಂಪಿಯನ್ ಐರ್ಲೆಂಡ್, ರನ್ನರ್ ಅಪ್ ಕೆನಡಾ, 3ನೇ ಹಾಗೂ 4ನೇ ಸ್ಥಾನ ಸಂಪಾದಿಸಿದ ನೆದರ್ಲೆಂಡ್ಸ್ ಮತ್ತು ಕೀನ್ಯಾ.
Advertisement
ಪ್ರತೀ ವಿಭಾಗದ ಅಗ್ರ 4 ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಿದವು. “ಎ’ ವಿಭಾಗದಿಂದ ಪಾಕಿಸ್ಥಾನ, ಶ್ರೀಲಂಕಾ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್; “ಬಿ’ ವಿಭಾಗದಿಂದ ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮುನ್ನಡೆದವು.
ಹ್ಯಾಟ್ರಿಕ್ ಕಪ್ ಎತ್ತಿ ಬೀಗುತ್ತಿದ್ದ ಆಸ್ಟ್ರೇಲಿಯವನ್ನು 5 ವಿಕೆಟ್‌ಗಳಿಂದ ಬಗ್ಗುಬಡಿದ ಭಾರತ ಸೆಮಿಫೈನಲ್‌ಗೆ ನೆಗೆಯಿತು. ಇಲ್ಲಿ ಧೋನಿ ಬಳಗಕ್ಕೆ ಎದುರಾದ ತಂಡ ಪಾಕಿಸ್ಥಾನ. ಮೊಹಾಲಿ ಮುಖಾಮುಖೀಯಲ್ಲಿ ಪಾಕ್ ಪಡೆಯನ್ನು 29 ರನ್ನುಗಳಿಂದ ಉರುಳಿಸಿದ ಭಾರತ ಫೈನಲ್‌ಗೆ ನೆಗೆಯಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ 5 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್‌ಗೆ ಸೋಲಿನೇಟು ನೀಡಿತು.
ಇತ್ತಂಡಗಳಿಗೂ ಇದು 3ನೇ ಫೈನಲ್ ಆಗಿತ್ತು. ಶ್ರೀಲಂಕಾ ಸತತ 2ನೇ ಪ್ರಶಸ್ತಿ ಸಮರದಲ್ಲಿ ಆಡಲಿಳಿದಿತ್ತು. ಆದರೆ ಮತ್ತೆ ಅದೃಷ್ಟ ಕೈಕೊಟ್ಟಿತು.