Advertisement
ಈ ಐತಿಹಾಸಿಕ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ನಾವು ಇದೇ ರೀತಿಯಲ್ಲಿ ಆಡುತ್ತ ಹೋದರೆ ಯಾವ ತಂಡವನ್ನು ಬೇಕಾದರೂ ಮಣಿಸಬಲ್ಲೆವು ಎಂದಿದ್ದಾರೆ.
ಇದು ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ಸಾಧಿಸಿದ ಕೇವಲ 3ನೇ ಜಯ. ಅದೂ 16 ವರ್ಷಗಳ ಬಳಿಕ ಒಲಿದ ಗೆಲುವು. ಇದಕ್ಕೂ ಮೊದಲು 2003ರಲ್ಲಿ ನಮೀಬಿಯಾವನ್ನು, 2007ರಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿತ್ತು. ಆದರೆ ದೊಡ್ಡ ತಂಡವೊಂದನ್ನು ಹೊಡೆ ದುರುಳಿಸಿದ್ದು ಇದೇ ಮೊದಲು.
“ನಾವು ಅರ್ಹತಾ ಸುತ್ತಿನಿಂದ ಬಂದವರು. ಪ್ರಧಾನ ಸುತ್ತಿಗೆ ಅರ್ಹತೆ ಪಡೆದ ಕೂಡಲೇ ನಾವು ಮಾನಸಿಕವಾಗಿ ಸಜ್ಜಾದೆವು. ಇಲ್ಲಿಗೆ ಮಜಾ ಮಾಡಲು ಬಂದದ್ದಲ್ಲ. ಸಾಧ್ಯವಾದಷ್ಟು ಪಂದ್ಯಗಳನ್ನು ಗೆದ್ದು ಮುಂದಿನ ಹಂತದಲ್ಲಿ ಗುರುತಿಸಿಕೊಳ್ಳುವುದು ನಮ್ಮ ಯೋಜನೆ’ ಎಂದರು.
ಪ್ರಯತ್ನ ಜಾರಿಯಲ್ಲಿರುತ್ತದೆ
Related Articles
Advertisement
ಟೋಟಲ್ ಕ್ರಿಕೆಟ್“ಒಂದು ತಂಡವಾಗಿ ನಾವು ಅತ್ಯು ತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಇದನ್ನೇ “ಟೋಟಲ್ ಕ್ರಿಕೆಟ್’ ಎನ್ನು ವುದು. ನಾನು ಸರಿಯಾದ ಹೊತ್ತಿನಲ್ಲಿ ಬ್ಯಾಟಿಂಗ್‌ನಲ್ಲಿ ಸೆಟ್ ಆದೆ. ರೋಲ್ಫ್ ಮತ್ತು ಆರ್ಯನ್ ಕೊನೆಯ ಹಂತ ದಲ್ಲಿ ನಂಬಲಾಗದ ಆಟ ಪ್ರದರ್ಶಿ ಸಿದರು. ಹೀಗಾಗಿ ನಮ್ಮಿಂದ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಯಿತು. ಬೌಲಿಂಗ್ ಬೊಂಬಾಟ್ ಆಗಿತ್ತು. ಇಲ್ಲಿಂದ ಮುಂದುವರಿಯಬೇಕಿದೆ…’ ಎಂದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರ ರಾದ, ವಿಕೆಟ್ ಕೀಪರ್ ಕೂಡ ಆಗಿರುವ ಸ್ಕಾಟ್ ಎಡ್ವರ್ಡ್ಸ್ ಹೇಳಿದರು.