Advertisement

ವಿಶ್ವಕಪ್‌ ಬಳಿಕ ಜೆ.ಪಿ. ಡ್ಯುಮಿನಿ ಏಕದಿನ ವಿದಾಯ

12:30 AM Mar 16, 2019 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌, ಮಾಜಿ ನಾಯಕನೂ ಆಗಿರುವ ಜೀನ್‌ಪಾಲ್‌ ಡ್ಯುಮಿನಿ ಮುಂಬರುವ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟಿಗೆ ವಿದಾಯ ಘೋಷಿಸಲು ತೀರ್ಮಾನಿಸಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವುದು ಅವರ ಬಯಕೆ. ಡ್ಯುಮಿನಿ 2017ರಲ್ಲೇ ಟೆಸ್ಟ್‌ ಕ್ರಿಕೆಟಿಗೆ ಗುಡ್‌ಬೈ ಹೇಳಿದ್ದಾರೆ. “ಇಂಥದೊಂದು ನಿರ್ಧಾರ ತೆಗೆದು ಕೊಳ್ಳುವುದು ಸುಲಭವಲ್ಲ. ಆದರೆ ಏಕದಿನದಿಂದ ದೂರ ಸರಿಯಲು ಇದೇ ಸೂಕ್ತ ಸಮಯ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಅಂತಾರಾಷ್ಟ್ರೀಯ ಹಾಗೂ ದೇಶಿ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ’ ಎಂದು ಡ್ಯುಮಿನಿ ಹೇಳಿದರು.

Advertisement

“ಮುಂದಿನ ದಿನಗಳನ್ನು ಕುಟುಂಬ ದವರ ಜತೆ ಕಳೆಯಬೇಕು. ಅವರಿಗೆ ಇನ್ನು ನನ್ನ ಮೊದಲ ಆದ್ಯತೆ. ಇಷ್ಟು ವರ್ಷಗಳ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್‌ ಆಡುವುದನ್ನು ಆನಂದಿಸಿದೆ. ನನ್ನ ಬೆಳವಣಿಗೆಗೆ ಕಾರಣರಾದ ಸಹ ಆಟಗಾರರು, ಕೋಚ್‌, ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆಗಳು’ ಎಂದರು.

ಡ್ಯುಮಿನಿ ಏಕದಿನ ಸಾಧನೆ
2004ರ ಶ್ರೀಲಂಕಾ ಪ್ರವಾಸದ ವೇಳೆ ಕೊಲಂಬೊದಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ಡ್ಯುಮಿನಿ, ಈವರೆಗೆ 193 ಪಂದ್ಯಗಳನ್ನು ಆಡಿದ್ದಾರೆ. 37.39ರ ಸರಾಸರಿಯಲ್ಲಿ 5,047 ರನ್‌ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳಿವೆ. ಅಜೇಯ 150 ರನ್‌ ಅತ್ಯುತ್ತಮ ಸಾಧನೆ. 68 ವಿಕೆಟ್‌ ಕೂಡ ಉರುಳಿಸಿದ್ದಾರೆ. 2011 ಮತ್ತು 2015ರ ವಿಶ್ವಕಪ್‌ ಕೂಟಗಳಲ್ಲಿ ಆಡಿದ್ದಾರೆ. ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಕೂಡ ವಿಶ್ವಕಪ್‌ ಬಳಿಕ ವಿದಾಯ ಹೇಳಲು ನಿರ್ಧರಿಸಿದ್ದು, ಈ ಘೋಷಣೆಯಾದ ಕೆಲವೇ ದಿನಗಳಲ್ಲಿ ಡ್ಯುಮಿನಿಯ ನಿರ್ಧಾರ ಪ್ರಕಟಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next