Advertisement

World Cup 2023; ಹಿಂದೂ ನಿಂದನೆ ಟ್ವೀಟ್ ಗೆ ಕ್ಷಮೆ ಕೋರಿದ ಪಾಕ್ ನಿರೂಪಕಿ ಜೈನಾಬ್ ಅಬ್ಬಾಸ್

01:09 PM Oct 13, 2023 | Team Udayavani |

ಹೊಸದಿಲ್ಲಿ: 2023 ರ ಕ್ರಿಕೆಟ್ ವಿಶ್ವಕಪ್ ವರದಿಗಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರು ಕೆಲವು ವರ್ಷಗಳ ಹಿಂದೆ ಮಾಡಿದ ವಿವಾದಾತ್ಮಕ ಟ್ವೀಟ್‌ಗಳ ಕಾರಣದಿಂದ ಭಾರೀ ಟ್ರೋಲ್ ಗಳಿಗೆ ಒಳಗಾಗಿದ್ದರು. ಇದಾದ ಬಳಿಕ ಜೈನಬ್ ದೇಶವನ್ನು ತೊರೆದಿದ್ದಾರೆ ಎಂಬ ವರದಿಗಳು ನಂತರ ಹೊರಬಂದವು.

Advertisement

ಆದರೆ, ಜೈನಬ್ ಭಾರತವನ್ನು ಏಕೆ ತೊರೆದರು ಮತ್ತು ಅವರು ಪಾಕಿಸ್ತಾನಕ್ಕೆ ಮರಳಿದರೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಭಾರತೀಯ ಅಧಿಕಾರಿಗಳು ಆಕೆಯನ್ನು ಗಡೀಪಾರು ಮಾಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿತ್ತು. ಅಲ್ಲದೆ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ದೆಹಲಿ ಪೊಲೀಸರು ಎಫ್‌ ಐಆರ್ ದಾಖಲಿಸಿದ ನಂತರ ಆಕೆ ಪಾಕ್ ಗೆ ಓಡಿಹೋಗಿದ್ದಾರೆ ಎಂದೂ ವರದಿಗಳಾಗಿದ್ದವು. ಇದೀಗ ಸ್ವತಃ ಜೈನಾಬ್ ಅಬ್ಬಾಸ್ ಪರಿಸ್ಥಿತಿಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ವಿವಾದಾತ್ಮಕ ಪೋಸ್ಟ್‌ ಗಳ ಬಗ್ಗೆ ಜೈನಾಬ್ ಅವರು ಒಪ್ಪಿಕೊಂಡರು ಆದರೆ ಅದಕ್ಕೆ ಇಂದು ಯಾವುದೇ ಬೆಲೆಯಿಲ್ಲ ಎಂದು ಹೇಳಿದ್ದಾರೆ. ಪೋಸ್ಟ್‌ನಿಂದ ನೋಯಿಸಿದವರಿಗೆ ಕ್ಷಮೆಯಾಚಿಸಿದ ಜೈನಾಬ್ ಅವರು, ಪೋಸ್ಟ್‌ಗಳಿಂದ ಉಂಟಾದ ನೋವನ್ನು ‘ಅರ್ಥಮಾಡಿಕೊಂಡಿದ್ದಾರೆ’ ಮತ್ತು ‘ಆಳವಾಗಿ ವಿಷಾದಿಸುತ್ತೇನೆ’ ಎಂದು ಹೇಳಿದರು.

ಐಸಿಸಿಗಾಗಿ ಕಾರ್ಯಕ್ರಮಗಳನ್ನು ಕವರ್ ಮಾಡುವ ಪಾಕಿಸ್ತಾನದ ಟಿವಿ ನಿರೂಪಕಿ ಜೈನಾಬ್, ಆಕೆಯನ್ನು ಭಾರತ ತೊರೆಯಲು ಅಥವಾ ಗಡೀಪಾರು ಮಾಡಲು ಹೇಳಲಿಲ್ಲ ಎಂದು ಹೇಳಿದರು.

Advertisement

“ನನ್ನ ವಾಸ್ತವ್ಯದ ಸಮಯದಲ್ಲಿ ಪ್ರತಿಯೊಬ್ಬರೊಂದಿಗಿನ ನನ್ನ ಒಡನಾಟವು ನಿರೀಕ್ಷಿಸಿದಂತೆ ಉತ್ತಮವಾಗಿತ್ತು. ನನ್ನನ್ನು ತೊರೆಯಲು ಕೇಳಲಿಲ್ಲ ಅಥವಾ ನನ್ನನ್ನು ಗಡೀಪಾರು ಮಾಡಲಿಲ್ಲ. ಆದರೆ, ಆನ್‌ಲೈನ್‌ ನಲ್ಲಿ ಪ್ರತಿಕ್ರಿಯೆಯಿಂದ ನಾನು ಭಯಭೀತಳಾಗಿದ್ದೆ. ನನ್ನ ಸುರಕ್ಷತೆಗೆ ತಕ್ಷಣದ ಬೆದರಿಕೆ ಇಲ್ಲದಿದ್ದರೂ, ಗಡಿಯ ಎರಡೂ ಬದಿಗಳಿಂದ ನನ್ನ ಕುಟುಂಬ ಮತ್ತು ಸ್ನೇಹಿತರು ಕಾಳಜಿ ವಹಿಸಿದ್ದರು. ನನಗೆ ನನ್ನದೆ ಅವಕಾಶ ಬೇಕಿತ್ತು” ಎಂದು ಜೈನಾಬ್ ಬರೆದುಕೊಂಡಿದ್ದಾರೆ.

ಜೈನಾಬ್ ಅವರ ಪೋಸ್ಟಿಗ್ ಭಾರತೀಯ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ಅವರ ಕ್ಷಮೆಯನ್ನು ಒಪ್ಪಿಕೊಂಡರೆ, ಕೆಲವರು ಇದು ಸಾಕಾಗದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next