Advertisement

World Cup 2023: ಬಾಂಗ್ಲಾ ವಿರುದ್ಧ ಟಾಸ್ ಸೋತ ರೋಹಿತ್; ತಂಡದಲ್ಲಿಲ್ಲ ಬದಲಾವಣೆ

01:59 PM Oct 19, 2023 | Team Udayavani |

ಪುಣೆ: ಏಕದಿನ ವಿಶ್ವಕಪ್ ಅಭಿಯಾನ ಮುಂದುವಿಸಿರುವ ಟೀಂ ಇಂಡಿಯಾ ಇಂದು ಬಾಂಗ್ಲಾದೇಶ ಮುಖಾಮುಖಿಗೆ ಸಜ್ಜಾಗಿದೆ. ಪುಣೆಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ,

Advertisement

ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಗಾಯಗೊಂಡಿರುವ ಕಾರಣ ನಜ್ಮುಲ್ ಹೊಸೈನ್ ಶಾಂಟೊ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ತಸ್ಕಿನ್ ಅಹಮದ್ ಬದಲು ಹಸನ್ ಮೆಹಮೂದ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪಾಕಿಸ್ತಾನ ವಿರುದ್ಧ ಆಡಿದ ತಂಡವನ್ನೇ ಮುಂದುವರಿಸಲಾಗಿದೆ.

ಬಾಂಗ್ಲಾದೇಶ : ಲಿಟ್ಟನ್ ದಾಸ್, ತನ್ಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್ (ವಿ.ಕೀ), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ

ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

Advertisement
Advertisement

Udayavani is now on Telegram. Click here to join our channel and stay updated with the latest news.

Next