Advertisement

ವಿಶ್ವಕಪ್‌ ವೇಳೆ 20 ದಿನ ಪತ್ನಿಯರಿಗೆ ನಿರ್ಬಂಧ

02:49 AM Apr 20, 2019 | Team Udayavani |

ನವದೆಹಲಿ: ವಿಶ್ವಕಪ್‌ ಏಕದಿನ ಕ್ರಿಕೆಟ್‌ ಕೂಟ ಆರಂಭಕ್ಕೂ ಮೊದಲು ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೆ ಕಹಿ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ತಂಡದೊಂದಿಗೆ ಪತ್ನಿಯರು, ಗೆಳತಿಯರ ಪ್ರವಾಸವನ್ನು ಮೊದಲ ಇಪ್ಪತ್ತು ದಿನಗಳವರೆಗೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ನಿರ್ಬಂಧಿಸಿದೆ. ಈ ಮೂಲಕ ಆಟಗಾರರು ಪೂರ್ಣ ಕ್ರಿಕೆಟ್‌ನತ್ತ ಗಮನ ಹರಿಸುವ ಪರೋಕ್ಷ ಸಂದೇಶವನ್ನು ಬಿಸಿಸಿಐ ಸಾರಿದೆ.

Advertisement

ಸಾಮಾನ್ಯವಾಗಿ ವಿದೇಶದಲ್ಲಿ ಕ್ರಿಕೆಟ್‌ ಸರಣಿಗಳಾದಾಗ ಆಟಗಾರರ ಪತ್ನಿಯರು, ಗೆಳತಿಯರೂ ತಂಡದ ಜತೆ ಹೋಗುವುದನ್ನು ಕಾಣಬಹುದು. ಈ ಬಾರಿ ಒಟ್ಟಾರೆ ಒಂದೂವರೆ ತಿಂಗಳು ಕ್ರಿಕೆಟ್‌ ಕೂಟ ನಡೆಯಲಿದ್ದು ಕುಟುಂಬದ ಸದಸ್ಯರು ಕೂಡ ಭಾಗಿಯಾಗಲಿದ್ದಾರೆ. ಆದರೆ ಮೊದಲ 20 ದಿನ ಪತ್ನಿಯರಾಗಲಿ ಅಥವಾ ಗೆಳತಿಯ ರಾಗಲಿ ತಂಡದ ಜತೆ ಇರುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಬಿಸಿಸಿಐ ತಿಳಿಸಿದೆ.

ಕೊಹ್ಲಿ ಮನವಿ ಪುರಸ್ಕರಿಸದ ಬಿಸಿಸಿಐ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ವಿರಾಟ್‌ ಕೊಹ್ಲಿ ಇತ್ತೀಚೆಗೆ ಪತ್ರ ಬರೆದಿದ್ದರು. ಯಾವುದೇ ಕ್ಷಣದಲ್ಲೂ ತಂಡದ ಆಟಗಾರರಿಗೆ ಪತ್ನಿಯರು, ಗೆಳತಿಯರು ಹಾಗೂ ಕುಟುಂಬ ಸದಸ್ಯರು ಸುಲಭವಾಗಿ ಸಿಗುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಬಿಸಿಸಿಐ ತಳ್ಳಿ ಹಾಕಿದೆ. ಭಾರತ ಮೇ22ರಂದು ಇಂಗ್ಲೆಂಡ್‌ಗೆ ತೆರಳಲಿದೆ. ಅಲ್ಲಿ ಅಭ್ಯಾಸ ನಡೆಸಲಿದೆ. ಬಳಿಕ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಆ ಬಳಿಕವಷ್ಟೇ ಆಟಗಾರರನ್ನು ಪತ್ನಿಯರು, ಗೆಳತಿಯರು ಕೂಡಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next