Advertisement

ವಿಶ್ವ ಚಾಂಪಿಯನ್‌ಶಿಪ್‌: ಚಿತ್ರಾಗೆ ಅವಕಾಶ ನೀಡಲು ಸಚಿವ ಗೋಯಲ್‌ ಸಲಹೆ 

08:45 AM Jul 30, 2017 | |

ನವದೆಹಲಿ: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಕೇರಳದ ಅಥ್ಲೀಟ್‌ ಪಿ.ಯು.ಚಿತ್ರಾ ಅವರಿಗೆ ಅವಕಾಶ ನೀಡಿ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ಭಾರ ತೀಯ ಅಥ್ಲೆಟಿಕ್ಸ್‌ ಒಕ್ಕೂಟಕ್ಕೆ(ಎಎಫ್ಐ) ಸಲಹೆ ನೀಡಿದ್ದಾರೆ. ಆದರೆ ಈ ಪ್ರಸ್ತಾಪ ವನ್ನು ಎಎಫ್ಐ ನಿರಾಕರಿಸಿದ್ದು, ಚಿತ್ರಾ ಪಾಲ್ಗೊಳ್ಳುವಿಕೆ ಇನ್ನೂ ಅತಂತ್ರವಾಗಿದೆ.

Advertisement

ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಚಿತ್ರಾಗೆ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೇರಳ ಹೈಕೋರ್ಟ್‌ ತಿಳಿಸಿದೆ.

ಹೀಗಾಗಿ ವಾಲ್ಡ್‌ ಕಾರ್ಡ್‌ ಪ್ರವೇಶ ನೀಡಿ ಕೋಟ್‌ ಆದೇಶ ಪಾಲಿಸಿ ಎಂದು ಸಚಿವರು ಎಎಫ್ಐಗೆ ಸೂಚನೆ
ನೀಡಿದ್ದಾರೆ.

ಸಾಧ್ಯವಿಲ್ಲ ಎಂದ ಎಎಫ್ಐ: ಈ ಬಗ್ಗೆ ಪ್ರತಿಕ್ರಿಯಿಸಿದ ಎಎಫ್ಐ ಅಧ್ಯಕ್ಷ ಅದಿಲ್‌ ಸುಮರಿವಾಲ, ನಾವು ಕೋರ್ಟ್‌ ಆದೇಶವನ್ನು ಗೌರವಿಸುತ್ತೇವೆ. ಆದರೆ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಮಿತಿಯ ಅಡಿಯಲ್ಲಿ ನಡೆಯುತ್ತದೆ.

ಅಥ್ಲೆಟಿಕ್ಸ್‌ಗಳ ಪಟ್ಟಿ ನೀಡುವ ಅವಧಿ ಮೀರಿ ಹೋಗಿದೆ. ಹೀಗಾಗಿ ಈಗ ಹೊಸದಾಗಿ ನೀಡಲು ಸಾಧ್ಯವಾಗುವುದಿಲ್ಲ. ಕೇರಳ ಹೈಕೋರ್ಟ್‌ ಆದೇಶ ನೀಡಿದೆ, ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ವಕೀಲರು ಇನ್ನೂ ವಾದ ಮಂಡಿಸಿಲ್ಲ. ಸೋಮವಾರ ವಾದ ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Advertisement

ಪ್ರಕರಣ ಏನು?: ಚಿತ್ರಾ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ನಡೆದ 1500 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ವಿಶ್ವ ಚಾಂಪಿಯನ್‌ ಶಿಪ್‌ಗೆ ಪ್ರವೇಶದ ಭರವಸೆಯಲ್ಲಿದ್ದರು. ಆದರೆ ಎಎಫ್ಐ ಪ್ರಕಟಿಸಿದ ವಿಶ್ವ ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ ಚಿತ್ರಾ ಹೆಸರನ್ನು ಕೈಬಿಡಲಾಗಿತ್ತು. ಹೀಗಾಗಿ ಚಿತ್ರಾ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು.

ಎಎಫ್ಐ ಹೇಳಿದ್ದು ಏನು?: ವಿಶ್ವಚಾಂಪಿಯನ್‌ಶಿಪ್‌ಗೆ ಅರ್ಹವಾದ ಸಮಯದಲ್ಲಿ ಚಿತ್ರಾ ಗೆಲುವು ಪಡೆದಿಲ್ಲ. ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಇತರೆ ಕ್ರೀಡಾಕೂಟದ ಫ‌ಲಿತಾಂಶವನ್ನು ಪರಿಗಣಿಸಿ ವಿಶ್ವಚಾಂಪಿಯನ್‌ಶಿಪ್‌ಗೆ ಅವಕಾಶ ನೀಡಲಾಗಿದೆ ಎಂದು ಹೇಳಿದೆ. ಆದರೆ ಅರ್ಹ ಸಮಯದಲ್ಲಿ ಗುರಿ ಮುಟ್ಟದವರನ್ನು ತಂಡದಲ್ಲಿ ಸ್ಥಾನನೀಡಲಾಗಿದೆ ಎಂದು ಚಿತ್ರಾ ದೂರಿದ್ದಾರೆ. ಉಳಿದಂತೆ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಸುಧಾ ಸಿಂಗ್‌ ಮತ್ತು ಅಜಯ್‌ ಕುಮಾರ್‌ ಸರೋಜ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next