ನವದೆಹಲಿ: ಭಾರತದ ಬಾಕ್ಸಿಂಗ್ ತಾರೆ ಎಂ.ಸಿ.ಮೇರಿ ಕೋಮ್”ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್’ ಫೈನಲ್ ಪ್ರವೇಶಿಸಿದ್ದು, ಐತಿಹಾಸಿಕ 6ನೇ ಸ್ವರ್ಣ ಪದಕದ ಸನಿಹ ಬಂದು ನಿಂತಿದ್ದಾರೆ.
ಗುರುವಾರ ನಡೆದ 48 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮೇರಿ ಕೋಮ್ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಸೋಲಿಸಿದರು. ಸದ್ಯ ಮೇರಿಗೆ ಬೆಳ್ಳಿಯಂತೂ ಖಚಿತವಾಗಿರುವುದರಿಂದ ವಿಶ್ವಕಪ್ ಇತಿಹಾಸದ ಶ್ರೇಷ್ಠ ಸಾಧಕಿಯೆನಿಸಿಕೊಂಡಿದ್ದಾರೆ. ಒಂದು ವೇಳೆ ಫೈನಲ್‌ನಲ್ಲಿ ಮೇರಿ ಚಿನ್ನ ಗೆದ್ದರೆ, ವಿಶ್ವಕಪ್‌ನಲ್ಲಿ 6 ಚಿನ್ನ ಗೆದ್ದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಳ್ಳಲಿದ್ದಾರೆ.
ತಂತ್ರಗಾರಿಕೆಯ ಆಟ: ಪಂದ್ಯದ ಆರಂಭದಲ್ಲೇ ಅನುಭವಿ ಬಾಕ್ಸರ್ ಮೇರಿ ಕೋಮ್ ತಂತ್ರಗಾರಿಕೆಯಲ್ಲಿ ಮೇಲುಗೈ ಸಾಧಿಸಿಕೊಂಡು ಪ್ರತಿಸ್ಪರ್ಧಿಗೆ ಹೆಚ್ಚಿನ ಅವಕಾಶ ನೀಡದೆ ಸತತ ಅಂಕಗಳನ್ನು ಗಳಿಸುತ್ತ ಹೋದರು. 5 ಮಂದಿ ತೀರ್ಪುಗಾರರು ಮೇರಿ ಪರವಾಗಿ ತೀರ್ಪು ನೀಡಿದರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಉಕ್ರೇನಿನ ಹನ್ನಾ ಒಕ್‌ಹುಟಾ ಅವರನ್ನು ಮೇರಿ ಎದುರಿಸಲಿದ್ದಾರೆ. ಇದೇ ವರ್ಷ ಪೋಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ಹನ್ನಾ ವಿರುದಟಛಿ ಮೇರಿ ಗೆಲುವು ಸಾಧಿಸಿದ್ದರು.
ಈವರೆಗೆ ಮೇರಿ ಕೋಮ್ ಮಹಿಳಾ ವಿಶ್ವ ಬಾಕ್ಸಿಂಗ್‌ನಲ್ಲಿ 5 ಚಿನ್ನ ಹಾಗೂ ಒಂದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಐರ್ಲೆಂಡ್‌ನ ಕ್ಯಾಟಿ ಟೇಲರ್ ಕೂಡ 5 ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದು ಸಮಬಲದ ಸಾಧನೆ ಮಾಡಿದ್ದಾರೆ. ಪ್ರಸ್ತುತ ಮೇರಿಗೆ ಇದನ್ನುಮೀರುವ ಅವಕಾಶವಿದೆ. ಒಂದು ವೇಳೆ ಮೇರಿ ಕೋಮ್ ಚಿ ನ್ನದಪದಕ ಗೆದ್ದರೆ, ಪುರುಷರ ವಿಭಾಗದ ದಿಗ್ಗಜ ಕ್ಯುಬಾದ ಫೆ ಲಿಕ್ಸ್ ಸಾವೋನ್ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ.
“ಪ್ರತಿಸ್ಪರ್ಧಿ ನನಗಿಂತ ಎತ್ತರ ಹಾಗೂ ಬಲಿಷ್ಠರಾಗಿದ್ದರು. ಎತ್ತರದ ಬಾಕ್ಸರ್‌ಗಳಿಗೆ ಅನುಕೂಲ ಹೆಚ್ಚು. ಆದರೆ ರಿಂಗ್ ಒಳಗೆ ಹೋದ ಬಳಿಕ ಪ್ರತಿಸ್ಪರ್ಧಿಯ ಎತ್ತರ, ಶಕ್ತಿ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಆಟ ಆಡುತ್ತೇನೆ. ಹನ್ನಾ ಅವರನ್ನು ಪೋಲೆಂಡ್‌ನಲ್ಲಿ ಸೋಲಿಸಿದ್ದೇನೆ. ಪುನಃ ಅವರನ್ನು ಸೋಲಿಸುತ್ತೇನೆ ಎಂಬ ನಂಬಿಕೆ ಇದೆ’
– ಮೇರಿ ಕೋಮ್, ಭಾರತದ ಮಹಿಳಾ ಬಾಕ್ಸರ್
ಸೆಮೀಸ್‌ನಲ್ಲಿ ಸೋಲು: ಲವಿÉàನಾಗೆ ಕಂಚು 69 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಅಸ್ಸಾಂನ ಲವಿÉàನಾ ಬೊರ್ಗೊಹೈನ್ ಚೀನಾ ತೈಪೆಯ ಚೆನ್ ನಿಯೆನ್ ಚಿನ್ ಅವರ ವಿರುದಟಛಿ ಸೋಲನುಭವಿಸಿದರು. ಭರವಸೆಯ ಸ್ಪರ್ಧಿಯಾಗಿದ್ದಲವಿÉನಾ ಈ ಸೋಲಿನೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.