Advertisement
ಸಂವಿಧಾನದ ಆಶಯಗಳನ್ನು ಗಟ್ಟಿ ಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ಕೆ ಇಡೀ ದೇಶ ಹೆಮ್ಮೆಪಟ್ಟಿದ್ದು, ಆ ಮೂಲಕ ಸರಕಾರದ ಉದ್ದೇಶ ಸಾರ್ಥಕವಾಗಿದೆ. ಒಂದಾಗಿ ಬಾಳುವ ಮಂತ್ರವನ್ನು ಪಠಿಸುವುದರ ಜತೆಗೆ ವೈವಿಧ್ಯ ದಲ್ಲಿ ಏಕತೆಯ ಸಂದೇಶ ವನ್ನು ಇಡೀ ಮನು ಕುಲಕ್ಕೆ ಸಾರಿದೆ.
Related Articles
ಮಾನವ ಸರಪಳಿ ಹಬ್ಬದಲ್ಲಿ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಶಿಕ್ಷಣ ಇಲಾಖೆ ಸಹಿತ 8 ಇಲಾಖೆಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದವು. ಉಳಿದ 25ಕ್ಕೂ ಹೆಚ್ಚು ಇಲಾಖೆಗಳು ನಾನಾ ರೀತಿಯಲ್ಲಿ ತಮ್ಮದೇ ಸಹಭಾಗಿತ್ವ ನೀಡಿ ಸರಕಾರದ ಸದುದ್ದೇಶವನ್ನು ಸಫಲಗೊಳಿಸಿದವು. 25 ಲಕ್ಷಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
Advertisement
ಇಂಥ ಯಶಸ್ವಿ ಪ್ರಯೋಗ ವಿಶ್ವದಲ್ಲೇ ಪ್ರಥಮ ಬಾರಿಗೆ ನಡೆದಿದ್ದು, ಇದಕ್ಕೆ ವಿಶ್ವ ದಾಖಲೆ ಆರಂಭಿಕ ಪುರಸ್ಕಾರ ಲಭಿಸಿದೆ. ಲಂಡನ್‌ನಲ್ಲಿರುವ ವಿಶ್ವ ದಾಖಲೆ ಸಂಸ್ಥೆಯ ಕರ್ನಾಟಕ ಪ್ರತಿನಿಧಿ ಶೈಲಜಾ ಅವರು ಬೆಂಗಳೂರಿನಲ್ಲಿ ನಡೆದ ಬೃಹತ್ ಹಾಗೂ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ಹೆಸರಿನಲ್ಲಿ ಪುರಸ್ಕಾರ ನೀಡಿ ಗೌರವಿಸಿದರು.
ಮೆಚ್ಚುಗೆಗೆ ಪಾತ್ರವಾದ ಜಿಲ್ಲೆಗಳುರಾಜ್ಯದ 31 ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯಲ್ಲಿ 2,18,891 ಮಂದಿ ಭಾಗವಹಿಸಿದ್ದು, ಅತೀ ಹೆಚ್ಚು, ಶೇ. 21 ಜನರ ಭಾಗವಹಿಸುವಿಕೆಯೊಂದಿಗೆ ಮುಂಚೂಣಿ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಉಡುಪಿ ಜಿಲ್ಲೆಯಲ್ಲಿ 234 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಿದ್ದು, ಇದು ಅತೀ ಉದ್ದದ ಮಾನವ ಸರಪಳಿ ಎಂಬ ಹೆಗ್ಗಳಿಕೆ ಗಳಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಶೇಷ ವಿನ್ಯಾಸದ ಹಾಗೂ ವಿಭಿನ್ನ ಸಂದೇಶಗಳನ್ನು ಸಾರುವ ಉಡುಗೆ-ತೊಡುಗೆ, ವೇಷಭೂಷಣ ಹಾಗೂ ಕಲಾ ಪ್ರಕಾರಗಳ ಬಳಕೆ ಮಾಡಿ ಪ್ರಜಾಪ್ರಭುತ್ವದ ಮಹತ್ವ ಸಾರಲಾಯಿತು. ಸಂವಿಧಾನದ ಪೀಠಿಕೆ ಓದಿ ಜಾಗೃತಿ ಮೂಡಿಸಲಾಯಿತು. ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ವ್ಯಾಪಿ ಸುಮಾರು 10 ಲಕ್ಷ ಗಿಡಗಳನ್ನು° ನೆಡಲಾಯಿತು. ರಾಜಧಾನಿ ಬೆಂಗಳೂರಿನಲ್ಲಿ ಹೊಸಕೋಟೆಯಿಂದ ಹೆಜ್ಜಾಲದ ವರೆಗೆ 60 ಸಾವಿರ ಜನರಿಂದ 92 ಕಿ.ಮೀ. ಮಾನವ ಸರಪಳಿ ಸೃಷ್ಟಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಕೈ ಜೋಡಿಸಲಾಯಿತು.