Advertisement

ನವಿಮುಂಬಯಿ ಕನ್ನಡ ಸಂಘದಲ್ಲಿ ವಿಶ್ವ ಪುಸ್ತಕ ದಿನಾಚರಣೆ

12:09 PM May 09, 2018 | Team Udayavani |

ನವಿ ಮುಂಬಯಿ: ವಾಶಿಯ ಕನ್ನಡ ಸಂಘದ ವತಿಯಿಂದ ಸಹೃದಯ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ವಿಶ್ವ ಪುಸ್ತಕ ದಿನಾಚರಣೆಯು ಎ. 23 ರಂದು ನವಿಮುಂಬಯಿ ಕನ್ನಡ ಸಂಘದ ಸಭಾಗೃಹದಲ್ಲಿ ನಡೆಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

ಶ್ರಾವ್ಯಾ ರಾವ್‌ ಪ್ರಾರ್ಥನೆಗೈದರು. ಸಂಘದ ಅಧ್ಯಕ್ಷ ಬಿ. ಎಚ್‌. ಕಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಅತಿಥಿಗಳಾಗಿ ಸೋಮನಾಥ ಕರ್ಕೇರ ಮತ್ತು ನಳಿನಾ ಎಸ್‌. ಪ್ರಸಾದ್‌ ಆಗಮಿಸಿದ್ದರು. ಸವಿತಾ ಜೋಶಿ ಹಾಗೂ ಸವಿತಾ ನಾಯಕ್‌ ಅವರು ಅತಿಥಿಗಳನ್ನು ಪರಿಚಯಿಸಿದರು.

ಲೇಖಕ ಸೋಮನಾಥ ಕರ್ಕೇರ ಅವರು ಮಾತನಾಡಿ, ಪುಸ್ತಕ ಮನುಷ್ಯನ ಸ್ನೇಹಿತ. ಜ್ಞಾನದ ದೀಪ, ಬದುಕಿನ ಮಾರ್ಗದರ್ಶಿ. ನಮ್ಮ ಜೀವನದ ಮಹತ್ವದ ಅಂಗ. ಪುಸ್ತಕ ಓದುವ ಅಭ್ಯಾಸ ನಮ್ಮನ್ನು ಸದಾ ಸುಖೀಯಾಗಿಸುತ್ತದೆ ಎಂದು ನುಡಿದು ಸಂಘದ ಸಿದ್ಧಿ-ಸಾಧನೆಗಳನ್ನು ಶ್ಲಾಘಿಸಿದರು.

ಖಾರ್‌ಘರ್‌ ಕನ್ನಡ ಸಂಘದ ಅಧ್ಯಕ್ಷ ನಳಿನಾ ಪ್ರಸಾದ್‌ ಅವರು ಮಾತನಾಡಿ, ನಾನು ಹಲವಾರು  ನಾಟಕಗಳಲ್ಲಿ ಭಾಗವಹಿಸುತ್ತಿದ್ದು, ಹಲವಾರು ಕವನ, ಕತೆಗಳನ್ನು ರಚಿಸಿದ್ದೇನೆ.  ತನ್ನ ಬಾಲ್ಯದಿಂದಲೂ ಪುಸ್ತಕಗಳಿಂದ ಬಹಳಷ್ಟನ್ನು ಕಲಿತಿದ್ದೇನೆ. ಓದುವ ಗೀಳು ತಮ್ಮನ್ನು ಮತ್ತಷ್ಟು ವಿದ್ಯಾಭ್ಯಾಸ ಮಾಡಲು ಪ್ರೇರೇಪಿಸಿದ್ದಾಗಿ ಸಭೆಗೆ ತಿಳಿಸಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಾಸಂತಿ ಕರ್ಕೇರ, ಕಾರ್ಯಕಾರಿ ಸಮಿತಿಯ ಸದಸ್ಯ, ಕನ್ನಡ ಸಂಘದ ಆಶ್ರಯದಲ್ಲಿರುವ ಗ್ರಂಥಾಲಯದ ಕೋಶಾಧಿಕಾರಿ ಆರ್‌. ಆರ್‌. ಕುಲಕರ್ಣಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನವಿಮುಂಬಯಿ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಮಧುಸೂದನ್‌ ಟಿ. ಆರ್‌. ಕಾರ್ಯಕ್ರಮ ನಿರ್ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರದ ರೂಪುರೇಷೆ ಗಳನ್ನು ಸಭೆಗೆ ತಿಳಿಸಿದರು. ಒಳ್ಳೆಯ ಪುಸ್ತಕಗಳನ್ನು ಖರೀದಿಸಿ ಓದುವ ಪ್ರಯತ್ನವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸ ಬೇಕು ಎಂದು ನುಡಿದು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Advertisement

ಪ್ರಾಧಿಕಾರದ ವತಿಯಿಂದ ರಾಜ್ಯದ 18 ಕೇಂದ್ರಗಳಲ್ಲಿ ಸಿರಿ ಗನ್ನಡ ಪುಸ್ತಕ ಮಾರಾಟ ಮಳಿಗೆಗಳಿದ್ದು, ವಾಶಿ ಕನ್ನಡ ಸಂಘದಲ್ಲಿ ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕಗಳು ಮುಂಬಯಿ ಹಾಗೂ ನವಿಮುಂಬಯಿ ಕನ್ನಡ ಓದುಗರಿಗೆ ಒದಗಿಸುವ ಪ್ರಯತ್ನದಲ್ಲಿ ಕಳೆದೊಂದು ವರ್ಷದಿಂದ ಸಿರಿಗನ್ನಡ ಪುಸ್ತಕ ಮಳಿಗೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next