ನಮಗೆ ಯಾವುದೇ ರೀತಿಯ ತೊಂದರೆ ಆಗದೆ ನಮ್ಮ ದೇಹದಿಂದ ದಾನ ಮಾಡುವಂತಹದ್ದು ರಕ್ತ ಒಂದೇ. ನಾವು ಕೊಟ್ಟ ರಕ್ತ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುತ್ತದೆ ಎಂದರೆ ರಕ್ತ ದಾನ ಎಷ್ಟೊಂದು ಮಹತ್ವವಾದದ್ದು. ಆದ್ದರಿಂದಲೇ ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ ಎನ್ನುವುದು. ನಾವು ಕೊಟ್ಟ ರಕ್ತ ಎರಡು ಮೂರು ದಿನಗಳಲ್ಲಿ ಉತ್ಪತ್ತಿಯಾಗುವುದರಿಂದ ರಕ್ತವನ್ನು ನೀಡಿದವರು ಪಡೆದವರು ಇಬ್ಬರು ಆರೋಗ್ಯವಾಗಿರಲು ಸಾಧ್ಯ.
ಇತ್ತೀಚಿನ ದಿನಗಳಲ್ಲಿ ರಕ್ತವನ್ನು ಮಾರುಕಟ್ಟೆಯ ಸರಕಾಗಿ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬನಲ್ಲಿಯು ಹರಿಯುತ್ತಿರುವ ರಕ್ತ ಮನುಷ್ಯ ಸಂಕುಲವೇ ಒಂದೇ ಎಂಬ ಸತ್ವವನ್ನು ಸಾರುತ್ತದೆ. ರಕ್ತವನ್ನು ದಾನ ಮಾಡುವುದರಿಂದ ಒಂದು ಜೀವವನ್ನು ಬದುಕಿಸಿದ್ದೇವೆ ಎಂಬ ಸಂತೃಪ್ತಿ ದೊರೆಯುತ್ತದೆ.
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಕ್ತ ಬೇಕೆಂದು ಒಂದು ಸಂದೇಶವನ್ನು ಹಾಕಿದರೆ ಸಾಕು. ಪರಿಚಯವೇ ಇಲ್ಲದ ಹಲವು ಮಂದಿ ರಕ್ತ ವನ್ನು ನೀಡಲು ಮುಂದೆ ಬರುತ್ತಿರುವುದು ಇನ್ನೂ ಮಾನವೀಯ ಮೌಲ್ಯಗಳು ಜೀವಂತವಾಗಿರುವುದಕ್ಕೆ ಸಾಕ್ಷಿ. ರಕ್ತ ದಾನವನ್ನು ಪ್ರತಿಯೊಬ್ಬ ವ್ಯಕ್ತಿಯು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು.
ಅನಿಲ್ ಗುಮ್ಮಘಟ್ಟ
ಪಾವಗಡ