ಹನೂರು: ರಕ್ತದಾನ ಮಹಾದಾನ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು. ರಕ್ತದಾನದಿಂದ ಒಂದು ಜೀವ ಉಳಿಸಿದಂತಾ ಗುತ್ತದೆ ಎಂದು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆ ಮುಖ್ಯಸ್ಥೆ ಡಾ.ಡೀನಾ ಮನವಿ ಮಾಡಿದರು.
ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಕಾಮಗೆಯೆ ಹೋಲಿಕ್ರಾಸ್ ಆಸ್ಪತ್ರೆ ಯಿಂದ ರಕ್ತದಾನ ಕುರಿತು ಅರಿವು ಮೂಡಿಸುವ ಜಾಥಾಕ್ಕೆ ಚಾಲನೆ ಮಾತನಾಡಿದರು.
ರಕ್ತದಾನದ ಬಗ್ಗೆ ಕೆಲವೊಂದು ಮೂಢನಂಬಿಕೆಗಳಿವೆ. ಪ್ರತಿಯೊಬ್ಬರೂ ಇಂಥ ಮೂಢ ನಂಬಿಕೆಗಳಿಂದ ಹೊರಬಂದು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಪುಣ್ಯ ಲಭಿಸುವುದರ ಜೊತೆಗೆ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ ನಮಗೂ ಉತ್ತಮ ಆರೋಗ್ಯ ಭಾಗ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಕಿವಿಮಾತು ಕೇಳಿದರು.
ಅರಿವು ಜಾಥಾ: ರಕ್ತದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹೋಲಿಕ್ರಾಸ್ ಆಸ್ಪತ್ರೆ ಆವರಣದಿಮದ ಜಾಥಾ ಹೊರಟು ಜೆಎಸ್‌ಎಸ್ ಪ್ರೌಢ ಶಾಲೆ ಹಾಗೂ ಕಾಮಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಅರಿವು ಜಾಥಾ ನಡೆಸಲಾಯಿತು. ಜಾಥಾದುದ್ದಕ್ಕೂ ನರ್ಸಿಂಗ್ ವಿದ್ಯಾರ್ಥಿನಿಯರು ಫಲಕ ಗಳನ್ನು ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಇದೇ ವೇಳೆ ರಕ್ತದಾನ ಮಾಡುವುದರ ಪ್ರಯೋಜನದ ಬಗ್ಗೆ ಕಿರುನಾಟಕ ಪ್ರದರ್ಶಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಸಿಸ್ಟರ್ ಡೆಲಿನ್, ವೈದ್ಯಾರಾದ ಡಾ.ಬಸವ ರಾಜು, ಡಾ.ವಿಕಾಸ್ ನಾಯಕ್, ಡಾ.ಕ್ಯಾಥರೀನ್, ಡಾ.ರೊನಾಲ್ಡ್, ನರ್ಸಿಂಗ್ ಮೇಲ್ವಿಚಾರಕರಾದ ಸಿಸ್ಟರ್ ಬ್ರೆಜಿತ್, ಸಿಸ್ಟರ್ ಅಗಾತ, ನರ್ಸಿಂಗ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.