ಕೋಪನ್‌ಹೆಗನ್ (ಡೆನ್ಮಾರ್ಕ್): ಭಾರತದ ಸ್ಟಾರ್ ಶಟ್ಲರ್‌ಗಳಾದ ಎಚ್.ಎಸ್. ಪ್ರಣಯ್ ಮತ್ತು ಲಕ್ಷ್ಯ ಸೇನ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತನ್ನು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವದ ನಂ. 9 ಆಟಗಾರ ಎಚ್.ಎಸ್. ಪ್ರಣಯ್ ಫಿನ್ಲಂಡ್‌ನ 56ನೇ ರ್‍ಯಾಂಕಿಂಗ್‌ನ ಎಡಗೈ ಆಟಗಾರ ಕಾಲ್ಲೆ ಕೊಲೊjನೆನ್ ವಿರುದ್ಧ 24-22, 21-10 ಅಂತರದ ಜಯ ಸಾಧಿಸಿದರು. ಇದರೊಂದಿಗೆ ಫಿನ್ನಿಶ್ ಆಟಗಾರನೆದುರು ಪ್ರಣಯ್ 3-0 ಮೇಲುಗೈ ಸಾಧಿಸಿದಂತಾಯಿತು.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ಲಕ್ಷ್ಯ ಸೇನ್ ಕೇವಲ 25 ನಿಮಿಷಗಳಲ್ಲಿ ಮಾರಿಶಸ್‌ನ ಜಾಜ್Õì ಜೂಲಿಯನ್ ಪೌಲ್ ವಿರುದ್ಧ 21-12, 21-7 ಅಂತರದಿಂದ ಗೆದ್ದು ಬಂದರು. 2021ರ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದ ಸೇನ್ ಬಹುತೇಕ ಕೊರಿಯಾದ ಜಿಯೋನ್ ಹೊÂàಕ್ ಜಿನ್ ವಿರುದ್ಧ ದ್ವಿತೀಯ ಸುತ್ತಿನ ಪಂದ್ಯ ಆಡಲಿದ್ದಾರೆ. ಪ್ರಣಯ್ ಇಂಡೋನೇಷ್ಯಾದ ಚಿಕೊ ಔರ ದ್ವಿ ವರ್ದೋಯೊ ಅವರನ್ನು ಎದುರಿಸುವ ಸಾಧ್ಯತೆ ಇದೆ.
ಮಿಶ್ರ ಡಬಲ್ಸ್‌ನಲ್ಲಿ ಸೋಲು
ಮಿಶ್ರ ಡಬಲ್ಸ್‌ನಲ್ಲಿ 33ನೇ ರ್‍ಯಾಂಕಿಂಗ್‌ನ ರೋಹನ್ ಕಪೂರ್-ಎನ್. ಸಿಕ್ಕಿ ರೆಡ್ಡಿ ಸ್ಕಾಟ್ಲೆಂಡ್‌ನ ಆ್ಯಡಮ್ ಹಾಲ್-ಜೂಲಿ ಮ್ಯಾಕ್‌ಪರ್ಸನ್ ವಿರುದ್ಧ 14-21, 22-20, 18-21ರಿಂದ ಪರಾಭವಗೊಂಡರು.