Advertisement
ಆದರೆ ಪ್ರಸಕ್ತ ಸೀಸನ್‌ನಲ್ಲಿ ಅಷ್ಟೇನೂ ಫಾರ್ಮ್ನಲ್ಲಿಲ್ಲದ ಪಿ.ವಿ. ಸಿಂಧು ಮೇಲೆ ಯಾರೂ ಅಷ್ಟೊಂದು ಭರವಸೆ ಇರಿಸಿಲ್ಲ. ಆದರೆ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಭಾರತದ ಅತ್ಯಂತ ಯಶಸ್ವಿ ಆಟಗಾರ್ತಿ ಎಂಬು ದನ್ನು ಮರೆಯುವಂತಿಲ್ಲ. 2019ರ ಚಾಂಪಿಯನ್ ಆಗಿರುವ ಸಿಂಧು ಗರಿಷ್ಠ 5 ಪದಕಗಳನ್ನು ಜಯಿಸಿದ್ದಾರೆ. 2011ರಿಂದ ಮೊದಲ್ಗೊಂಡು ಒಂದಲ್ಲ ಒಂದು ಪದಕ ಗೆಲ್ಲುತ್ತ ಬಂದಿರುವುದು ಸಿಂಧು ಹೆಗ್ಗಳಿಕೆ.ಸಿಂಧು ಅವರಿಗೆ ಮೊದಲ ಸುತ್ತಿನ ಬೈ ಲಭಿಸಿದೆ. ಹೀಗಾಗಿ ಜಪಾನ್‌ನ ನೊಜೊಮಿ ಒಕುಹಾರ ಮತ್ತು ವಿಯೆಟ್ನಾಮ್‌ನ ಥುಯಿ ಲಿನ್ ಎನ್‌ಗುಯೆನ್ ನಡುವಿನ ವಿಜೇತರನ್ನು ಎದುರಿಸಲಿದ್ದಾರೆ.
1977ರಿಂದ ಮೊದಲ್ಗೊಂಡು ಈವರೆಗೆ ಭಾರತ 13 ಪದಕಗಳನ್ನು ಗೆದ್ದಿದೆ. ಸಿಂಧು ಜಯಿಸಿದ ಏಕೈಕ ಸ್ವರ್ಣ ಸೇರಿದಂತೆ 4 ಬೆಳ್ಳಿ ಹಾಗೂ 8 ಕಂಚಿನ ಪದಕಗಳು ಸೇರಿವೆ. ಭಾರತದ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ 1983ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ನಕ್ಷೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್‌ಗೆ ವಿಶಿಷ್ಟ ಸ್ಥಾನ ಕಲ್ಪಿಸಿಕೊಟ್ಟಿದ್ದರು. 2021ರ ಆವೃತ್ತಿಯಲ್ಲಿ ಕೆ. ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದ್ದರು. ಕಳೆದ ವರ್ಷ ಚಿರಾಗ್-ಸಾತ್ವಿಕ್ ಜೋಡಿಗೆ ಕಂಚಿನ ಪದಕ ಒಲಿದಿತ್ತು. ಕಳೆದೆರಡು ಕೂಟಗಳ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ಎಚ್.ಎಸ್. ಪ್ರಣಯ್ ಈ ಬಾರಿ ನೆಚ್ಚಿನ ಆಟಗಾರನಾಗಿ ಮೂಡಿಬಂದಿದ್ದಾರೆ. ಮಲೇಷ್ಯಾ ಮಾಸ್ಟರ್ ಪ್ರಶಸ್ತಿ ಗೆದ್ದಿರುವ 9ನೇ ಶ್ರೇಯಾಂಕದ ಪ್ರಣಯ್ ಮೊದಲ ಸುತ್ತಿನಲ್ಲಿ ಫಿನ್ಲಂಡ್‌ನ 56ನೇ ರ್‍ಯಾಂಕಿಂಗ್ ಆಟಗಾರ ಕಾಲ್ಲೆ ಕೊಲೊjನೆನ್ ವಿರುದ್ಧ ಸೆಣಸಲಿದ್ದಾರೆ.
Related Articles
Advertisement
ಸಿರಾಗ್-ಸಾತ್ವಿಕ್ಭಾರತದ ಡಬಲ್ಸ್ ಜೋಡಿ ಯಾದ ಚಿರಾಗ್-ಸಾತ್ವಿಕ್ ಮೇಲೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಕಾರಣ, ಇವರ ಪ್ರಚಂಡ ಫಾರ್ಮ್. ಸಾಲು ಸಾಲಾಗಿ ಇಂಡೋನೇಷ್ಯಾ ಓಪನ್, ಏಷ್ಯಾ ಚಾಂಪಿಯನ್‌ಶಿಪ್, ಸ್ವಿಸ್ ಓಪನ್ ಮತ್ತು ಕೊರಿಯಾ ಓಪನ್ ಚಾಂಪಿಯನ್ ಎನಿಸಿಕೊಂಡ ಹೆಗ್ಗಳಿಕೆ ಇವರದು. ದ್ವಿತೀಯ ಶ್ರೇಯಾಂಕದ ಭಾರತೀಯ ಜೋಡಿಗೂ ಮೊದಲ ಸುತ್ತಿನ ಬೈ ಲಭಿಸಿದೆ. ವನಿತಾ ಡಬಲ್ಸ್‌ನಲ್ಲಿ ತ್ರಿಸಾ ಜಾಲಿ-ಗಾಯತ್ರಿ ಗೋಪಿಚಂದ್, ಅಶ್ವಿನಿ ಭಟ್-ಶಿಖಾ ಗೌತಮ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಮಿಶ್ರ ಡಬಲ್ಸ್
ನಲ್ಲಿ ಕಣಕ್ಕಿಳಿಯುವವರೆಂದರೆ ರೋಹನ್ ಕಪೂರ್-ಎನ್. ಸಿಕ್ಕಿ ರೆಡ್ಡಿ, ವೆಂಕಟ ಪ್ರಸಾದ್-ಜೂಹಿ ದೇವಾಂಗನ್. 5ನೇ ಆತಿಥ್ಯದ ದಾಖಲೆ
ಕೋಪನ್‌ಹೆಗನ್ ದಾಖಲೆ 5ನೇ ಸಲ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಆತಿಥ್ಯ ವಹಿಸುತ್ತಿದೆ. ಇದಕ್ಕೂ ಮೊದಲು 1983, 1991, 1999 ಮತ್ತು 2014ರಲ್ಲಿ ಈ ಪ್ರತಿಷ್ಠಿತ ಪಂದ್ಯಾವಳಿ ನಡೆದಿತ್ತು. 2017ರಲ್ಲಿ ಶಟ್ಲ ಬ್ಯಾಡ್ಮಿಂಟನ್‌ಗೆ ತೆರೆದ “ದ ರಾಯಲ್ ಅರೆನಾ’ದಲ್ಲಿ ಸ್ಪರ್ಧೆಗಳು ನಡೆಯುತ್ತವೆ.