Advertisement
ಇದು ಗಾಳಿಯ ವಿರುದ್ಧ ಓಡುವ ಓಟಗಾರ, ಗುರುತ್ವಾಕರ್ಷಣೆಯ ಸೆಳೆತವನ್ನು ಸಮರ್ಥವಾಗಿ ಎದುರಿಸುವ ಜಿಗಿತಗಾರ ಅಥವಾ ಜಂಪರ್, ಎಲ್ಲಾ ಇತಿಮಿತಿಗಳನ್ನು ಮೀರಿ ಜಯಿಸುವ ಮ್ಯಾರಥಾನ್ ಓಟಗಾರ. ಹೀಗೆ ಪ್ರತಿಯೊಬ್ಬ ಅಥ್ಲೀಟ್ ತನ್ನ ಸಮರ್ಪಣೆ ಮತ್ತು ಶಿಸ್ತಿನ ಜೀವಂತ ಸಾಕಾರವಾಗಿದ್ದುಕೊಂಡು ಅಸಾಧ್ಯವಾದುದನ್ನು ಸಾಧ್ಯ ಎಂದು ತೋರಿಸಿಕೊಡುವಂತಹ ಛಲಗಾರನಾಗಿರುತ್ತಾನೆ. ಸ್ಪರ್ಧೆ ಮತ್ತು ಪದಕಗಳ ಜಗತ್ತನ್ನು ಮೀರಿ ಅಥ್ಲೆಟಿಕ್ಸ್ ಸ್ವಯಂ ಶೋಧನೆ ಮತ್ತು ಸ್ವಯಂ ಪಾಂಡಿತ್ಯದ ಪ್ರಯಾಣವಾಗಿದೆ.
Related Articles
Advertisement
*ಜ್ಯೋತಿ ಯರ್ರಾಜಿ 2023 ರ ಜುಲೈನಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳಾ 100 ಮೀಟರ್ ಹರ್ಡಲ್ಸ್ ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟು ಕೀರ್ತಿ ಮೆರೆದಿದ್ದರು. ಈ ದೂರವನ್ನು ಕೇವಲ 13.09 ಸೆಕೆಂಡುಗಳಲ್ಲಿ ಓಡಿ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು.
*ದುತಿ ಚಂದ್ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಎಲ್ಲಾ ಅಡೆತಡೆಗಳನ್ನು ಮೀರಿ ಪ್ರಸ್ತುತ ಮಹಿಳಾ 100 ಮೀಟರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ದುತಿ ಚಂದ್ 2019 ರಲ್ಲಿ ಯುನಿವರ್ಸಿಯಾಡ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಓಟಗಾರಳಾಗಿದ್ದಾರೆ. LGBTQ+ ಕ್ರೀಡಾಪಟುವಾಗಿ ಅವರ ಧೈರ್ಯದ ನಿಲುವು ಪಾಲ್ಗೊಳ್ಳುವಿಕೆ ಮತ್ತು ಸಾಧನೆಗೆ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.
*ರಮಾಬಾಯಿ. ಇವರು 105 ವರ್ಷದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅತ್ಯಂತ ಹಿರಿಯ ಚಿನ್ನದ ಪದಕ ವಿಜೇತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಛಲ ಮತ್ತು ಬದ್ಧತೆ ಇತರರಿಗೆ ಮಾದರಿಯಾಗಿದೆ. ಗುಜರಾತಿನ ವಡೋದರದಲ್ಲಿ ನಡೆದ ನ್ಯಾಷನಲ್ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿನ 100 ಮೀಟರ್ ಸ್ಪರ್ಧೆಯಲ್ಲಿ ಮೊದಲಿಗರಾಗಿ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಸಾಧನೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
*ಅಂಜು ಬಾಬಿ ಜಾರ್ಜ್. ಇವರು ಇಂದಿಗೂ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದ ಐಕಾನ್ ಆಗಿದ್ದಾರೆ. IAAF ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟುವಾಗಿದ್ದು, ಇಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಪ್ರೇರಕರಾಗಿದ್ದಾರೆ. ಲಾಂಗ್ ಜಂಪ್ ನಲ್ಲಿ ಅವರು ತೋರಿದ ಅಸಾಧಾರಣ ಸಾಧನೆಯು ಅಥ್ಲೆಟಿಕ್ಸ್ ಸಮುದಾಯದಲ್ಲಿ ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸುವಂತೆ ಮಾಡಿದೆ. ಅವರ ಈ ಸಾಧನೆಯನ್ನು ಪರಿಗಣಿಸಿ 2014 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನ ಮಲಯಾಳಂ ಆವೃತ್ತಿಯ `ಮಹಿಳಾ ಸಬಲೀಕರಣ’ ವಿಷಯದ ಬಿಡುಗಡೆ ಸಂದರ್ಭದಲ್ಲಿ ಅವರನ್ನು ಗೌರವಿಸಲಾಗಿತ್ತು.