ಯೂಜೀನ್ (ಯುಎಸ್‌ಎ): ಶುಕ್ರವಾರ ಆರಂಭವಾಗಲಿರುವ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ ಶಿಪ್‌ಗೆ ಅಮೆರಿಕದ ಯೂಜೀನ್ ನಗರ ಸಜ್ಜಾಗಿದೆ. ಈ ಬಾರಿ ಭಾರತದ ಪಾಲಿಗೆ ಈ ಪಂದ್ಯಾವಳಿ ಅತ್ಯಂತ ಮಹತ್ವದ್ದಾಗಿದೆ. ಕಾರಣ, ಟೋಕಿಯೊ ಒಲಿಂಪಿಕ್ಸ್‌ನ ಸ್ವರ್ಣ ಸಾಧಕ ನೀರಜ್ ಚೋಪ್ರಾ!
ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಸಾಧನೆಯನ್ನು ಪುನರಾ ವರ್ತಿಸಬಹುದೇ, ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಪದಕವೊಂದರಿಂದ ಸಿಂಗಾರ ಗೊಳ್ಳ ಬಹುದೇ ಎಂಬುದೆಲ್ಲ ಭಾರತೀಯ ಕ್ರೀಡಾಪ್ರೇಮಿಗಳ ನಿರೀಕ್ಷೆ.
ದಾಖಲೆಗಳನ್ನು ತಿದ್ದಿದ ಚೋಪ್ರಾ :
ನೀರಜ್ ಚೋಪ್ರಾ ಪ್ರಸಕ್ತ ಋತುವಿನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ನಿರ್ವ ಹಣೆಯನ್ನು ಎರಡು ಸಲ ತಿದ್ದಿ ಬರೆದಿದ್ದಾರೆ. ಜೂ. 14ರಂದು ಪಾವೋ ನುರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್ ದೂರದ ಸಾಧನೆಯೊಂದಿಗೆ ಮಿಂಚಿದರೆ, ಪ್ರತಿಷ್ಠಿತ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ. ದೂರಕ್ಕೆಸೆದು ಹೊಸ ಭರ ವಸೆ ಮೂಡಿಸಿದರು. ಈ ನಡುವೆ ಕುವೋರ್ತಾನ್ ಗೇಮ್ಸ್‌ನ ಜಾರುವ ಅಂಗಳದಲ್ಲೂ 86.69 ಮೀ. ಸಾಧನೆಯೊಂದಿಗೆ ಮಿಂಚಿದ್ದನ್ನು ಮರೆಯುವಂತಿಲ್ಲ.
ನೀರಜ್ ಚೋಪ್ರಾ ಅವರಿಗೆ ಪ್ರತಿಸ್ಪರ್ಧೆಯೊಡ್ಡುವ ಪ್ರಮುಖ ಜಾವೆಲಿನ್ ತ್ರೋವರ್ ಅಂದರೆ ಗ್ರೆನಡಾದ ಹಾಲಿ ಚಾಂಪಿಯನ್ ಆ್ಯಂಡರ್ಸನ್ ಪೀಟರ್. ಈ ವರ್ಷ ಅವರು 93.07 ಮೀ. ದೂರದ ಸಾಧನೆಗೈದಿದ್ದಾರೆ.
ಭಾರತದ ಮತ್ತೋರ್ವ ಜಾವೆಲಿನ್ ಎಸೆತಗಾರ ರೋಹಿತ್ ಯಾದವ್ ಕೂಡ ಇಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಪುರುಷರ 2 ಸುತ್ತುಗಳ ಅರ್ಹತಾ ಸ್ಪರ್ಧೆ ಜು. 21ರಂದು, ಫೈನಲ್ ಜು. 23ರಂದು ನಡೆಯಲಿದೆ.
ಶ್ರೀಶಂಕರ್ ಡಾರ್ಕ್ ಹಾರ್ಸ್ :
ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವ 23 ವರ್ಷದ ಲಾಂಗ್‌ಜಂಪರ್ ಮುರಳಿ ಶ್ರೀಶಂಕರ್ ಈ ಕೂಟದ ಡಾರ್ಕ್ ಹಾರ್ಸ್ ಆಗಿದ್ದಾರೆ. ಅವರು ಪ್ರಸಕ್ತ ಋತುವಿನಲ್ಲಿ ಸ್ಥಿರ ಪ್ರದರ್ಶನ ಕಾಯ್ದು ಕೊಂಡು ಬಂದಿದ್ದಾರೆ. 8.36 ಮೀ. ನೆಗೆತದ ದಾಖಲೆ ಇವರ ದ್ದಾಗಿದೆ.