1981ರಲ್ಲಿ ಮೊತ್ತ ಮೊದಲಿಗೆ ಎಚ್.ಐ.ವಿ. ಸೋಂಕು ಪತ್ತೆಯಾದ ಅನಂತರ ಪ್ರಸ್ತುತ ಪ್ರಪಂಚದಾದ್ಯಂತ ಸುಮಾರು ನಾಲ್ಕರಿಂದ ಐದು ಕೋಟಿ ಜನರು ಈ ಸೋಂಕಿನಿದ ಬಳಲುತ್ತಿ¨ªಾರೆಂದು ಅಂದಾಜಿಸಲಾಗಿದೆ. ಎಚ್.ಐ.ವಿ. ವೈರ
ಸ್‌ನ್ನು ಯಾವುದೇ ರೀತಿಯಲ್ಲಿ ದೇಹದಲ್ಲಿ ಪಡೆದುಕೊಂಡವರಿಗೆ ಎಚ್.ಐ.ವಿ. ಸೋಂಕಿತ ಎಂದು ಕರೆಯುತ್ತಾರೆ. ಈ ರೋಗ ಸೋಂಕಿತರು ಹಲವು ವರ್ಷಗಳವರೆಗೆ ಯಾವುದೇ ಕಾಯಿಲೆಯ ಲಕ್ಷಣಗಳಿಲ್ಲದೇ ಸಾಮಾನ್ಯ ಮನುಷ್ಯನಂತೆ ಇರಬಹುದು. ಕೇವಲ ರಕ್ತ ಪರೀಕ್ಷೆಗಳಿಂದ ಮಾತ್ರ ಈ ರೋಗದ ಸೋಂಕಿ ರುವುದನ್ನು ಪತ್ತೆ ಹಚ್ಚಬಹುದು. ಆದರೆ ಈ ವ್ಯಕ್ತಿಯು ಸೋಂಕನ್ನು ಮತ್ತೂಬ್ಬರಿಗೆ ಹರಡಬಲ್ಲರು ಮತ್ತು ಕ್ರಮೇಣ ಕೆಲವು ವರ್ಷಗಳ ಅನಂತರ ಸೋಂಕಿತನ ರೋಗ ನಿರೋಧಕ ಶಕ್ತಿ ಕಡಿಮೆಗೊಂ ಡಂತೆ, ರಕ್ತದಲ್ಲಿ ಜೀವ ರಕ್ಷಕ ಇಈ4 ಜೀವಕೋಶಗಳ ಸಂಖ್ಯೆ ಕ್ಷೀಣಿಸುತ್ತದೆ. ಅನಂತರ ಮುಖ್ಯವಾಗಿ ಕ್ಷಯರೋಗ, ನ್ಯುಮೋನಿಯ, ಚರ್ಮ ರೋಗಗಳು, ಕೆಲವು ತೆರನಾದ ಕ್ಯಾನ್ಸರ್‌ಗಳ ಲಕ್ಷಣಗಳು ಕಂಡುಬರಬಹುದು. ಈ ಹಂತದಲ್ಲಿ ಅಂತಹ ಎಚ್.ಐ.ವಿ. ಸೋಂಕಿತರನ್ನು ಏಡ್ಸ್ ರೋಗಿಯೆಂದು ಪರಿಗಣಿ ಸಲಾಗುವುದು. ಎಚ್.ಐ.ವಿ. ಸೋಂಕಿಗೆ ಒಳಗಾದ ಅನಂತರ ಏಡ್ಸ್ ಲಕ್ಷಣಗಳು ಬರುವುದನ್ನು ತಡೆಗಟ್ಟಲು ಅವರಲ್ಲಿ ಇಂತಹ ಅವಕಾಶವಾದಿ ಸೋಂಕು ರೋಗಗಳನ್ನು ತಡೆಗಟ್ಟಲು ದೇಶಾ ದ್ಯಂತ ಆಯ್ದ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ART (Anti-Retroviral Therapy)ಚಿಕಿತ್ಸೆ ಲಭ್ಯವಿದೆ. ಜೀವನ ಪರ್ಯಂತ ತೆಗೆದುಕೊಳ್ಳಬೇಕಾದ ಈ ಚಿಕಿತ್ಸೆ ರೋಗಿಯನ್ನು ಎಚ್.ಐ.ವಿ. ಸೋಂಕಿನಿಂದ ಮುಕ್ತ ಮಾಡದಿದ್ದರೂ ಏಡ್ಸ್‌ನ ರೋಗ ಲಕ್ಷಣಗಳು ಕಂಡುಬರುವುದನ್ನು, ಅವಕಾಶವಾದಿ ಸೋಂಕುರೋಗಗಳನ್ನು/ಸಾವನ್ನು ಮುಂದೂಡಬಹುದು.
ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತೆ ಎಚ್.ಐ.ವಿ. ಸೋಂಕು ಮುಖ್ಯವಾಗಿ ಒಟ್ಟು ಹರಡುವಿಕೆಯ ಸರಿಸುಮಾರು ಶೇ.85ರಷ್ಟು ಜನರಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಶೇ.5ರಷ್ಟು ಹರಡುವಿಕೆ ಪೋಷಕರಿಂದ ಮಗುವಿಗೆ ಹಾಗೂ ಉಳಿದ ಸಣ್ಣ ಪ್ರಮಾಣದ ಹರಡುವಿಕೆ ಸರಿಯಾದ ಪರೀಕ್ಷೆಗಳನ್ನು ಮಾಡದೇ ಪಡೆದ ಸೋಂಕಿತರ ರಕ್ತ/ರಕ್ತದ ಉತ್ಪನ್ನಗಳು, ಅಸುರಕ್ಷಿತ ಚುಚ್ಚು ಮದ್ದುಗಳ ಮೂಲಕ ಆಗುತ್ತಿದೆ. ಪ್ರಪಂಚದಾದ್ಯಂತ ಸುಮಾರು 13-15 ಲಕ್ಷ ಹೆಂಗಸರು ಹಾಗೂ ಹುಡುಗಿಯರು ಈಗ ಈ ಸೋಂಕಿನಿಂದ ಬಳಲುತ್ತಿ¨ªಾರೆ. ಭಾರತದಲ್ಲಿ ಪ್ರತೀ ವರ್ಷ ನಡೆಯುವ ಸುಮಾರು 2.7 ಕೋಟಿ ಹೆರಿಗೆಗಳಲ್ಲಿ ಸೋಂಕಿತ ತಾಯಂದಿರ ಮೂಲಕ ಸುಮಾರು 30 ಸಾವಿರ ಮಕ್ಕಳು ಹುಟ್ಟುವಾಗಲಿಂದಲೇ ಈ ಸೋಕು ಪಡೆಯುವ ಅಂದಾಜಿದೆ. ಈ ಸೋಂಕು ಗರ್ಭಾವಸ್ಥೆಯಲ್ಲಿ, ಹೆರಿಗೆ ಸಂದರ್ಭ, ಅನಂತರ ಎದೆಹಾಲು ಸೇವಿಸುವ ಮೂಲಕ ಸೋಂಕಿರುವ ತಾಯಿಯಿಂದ ಮಗುವಿಗೆ ಹರಡುತ್ತದೆ. ಆದರೆ ಮಕ್ಕಳಿಗೆ ಈ ಮಾರ್ಗದಿಂದ ಹರಡುವ ಎಚ್.ಐ.ವಿ. ಸೋಂಕನ್ನು ತಡೆಯಲು ಎಲ್ಲ ಗರ್ಭಿಣಿ ಮಹಿಳೆಯರಿಗೆ ಮೊದಲ ಮೂರು ತಿಂಗಳೊಳಗೆ ಎಚ್.ಐ.ವಿ. ಪರೀಕ್ಷೆ ಹಾಗೂ ಪರೀಕ್ಷೆಗಳು ಧನಾತ್ಮಕಾಗಿದ್ದರೆ ಮಹಿಳೆ ಯು/ಪೋಷಕರು ART ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ, ಸರಿಯಾದ ಪ್ರಸವಪೂರ್ವ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರ ಮೂಲಕ ಹಾಗೂ ಆಸ್ಪತ್ರೆಯಲ್ಲಿ ನುರಿತ ವೈದ್ಯರು, ದಾದಿಯರ ಸಹಾಯದಿಂದ ಹೆರಿಗೆ ಮಾಡಿಸಿಕೊಳ್ಳುವುದರ ಮೂಲಕ ತಾಯಿಯಿಂದ ಮಗುವಿಗೆ ಈ ಸೋಂಕು ಹರಡುವುದನ್ನು ಗಣನೀಯವಾಗಿ (ಶೇ.1-2ರಷ್ಟಕ್ಕೆ) ಕಡಿಮೆಗೊಳಿಸಬಹುದು. ಸೋಂಕಿರುವ ತಾಯಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಮತ್ತು ತಾಯಿ ಮಗುವಿಗೆ ಹಾಲುಣಿಸಿದರೆ, ಶೇ. 30 ರಿಂದ 45ರಷ್ಟು ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಯಿದೆ.
ವೈದ್ಯಕೀಯ ಕಾಲೇಜುಗಳಲ್ಲಿ, ಜಿಲ್ಲಾಆಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಸಮಗ್ರ ಆಪ್ತ ಸಮಾಲೋಚನೆ ಮತ್ತು ಉಚಿತವಾಗಿ ಎಚ್.ಐ.ವಿ. ಪರೀಕ್ಷೆಯ ಸೌಲಭ್ಯ ಲಭ್ಯವಿದೆ. ಇದರಲ್ಲಿ ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ಪ್ರಸರಣ ವಿಧಾನಗಳು, ಅಪಾಯದ ಗುಂಪುಗಳು, ತಡೆಗಟ್ಟುವ ಕ್ರಮಗಳು ಮತ್ತು ಅವರು ಪಾಸಿಟಿವ್ ಪರೀಕ್ಷೆಯ ಫಲಿತಾಂಶದ ಸಂದರ್ಭದಲ್ಲಿ ಮುಂದೇನು ಮಾಡಬೇಕೆಂದು ಅವರಿಗೆ ತಿಳಿ ಹೇಳಲಾಗುವುದು. ಎಚ್.ಐ.ವಿ. ಪರೀಕ್ಷೆ ಧನಾತ್ಮಕವಾಗಿದ್ದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು ಮತ್ತು ಕೆಲವು ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿART ಚಿಕಿತ್ಸೆ ಉಚಿತವಾಗಿ ಲಭ್ಯವಿದೆ. ಈ ಕೇಂದ್ರಗಳಲ್ಲಿ ಪ್ರತೀ ಒಂದು ತಿಂಗಳ ಅವಧಿಗೆ ಮಾತ್ರೆಗಳನ್ನು ನೀಡಲಾಗುತ್ತದೆ. ಚಿಕಿತ್ಸೆಯ ಅನುಸರಣೆಗಾಗಿ ಮತ್ತು ಅಡ್ಡ ಪರಿಣಾಮಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿದ್ದಲ್ಲಿ ಅವಕಾಶವಾದಿ ಸೋಂಕುಗಳಿಗೆ ಚಿಕಿತ್ಸೆ ನೀಡಲು ಅವರ ಆರೋಗ್ಯ ಸ್ಥಿತಿಯನ್ನು ತಿಂಗಳಿಗೊಮ್ಮೆ ಪರಿಶೀಲಿಸಿ ಮುಂದಿನ ತಿಂಗಳ ಅವಧಿಗೆ ಮಾತ್ರೆಗಳನ್ನು ನೀಡಲಾಗುವುದು. ಹೀಗೆ ಜೀವನ ಪರ್ಯಂತ ಚಿಕಿತ್ಸೆ ಪಡೆಯುತ್ತಿರಬೇಕು.
ತಾಯಿ ART ಚಿಕಿತ್ಸೆಯಲ್ಲಿದ್ದರೆ, 32 ರಿಂದ 36 ವಾರಗಳ ಗರ್ಭಾವಸ್ಥೆಯಲ್ಲಿ ತಾಯಿಯ ವೈರಲ್ ಲೋಡ್ ಒಂದು ಸಾವಿರ ಪ್ರತಿಗಳಿಗಿಂತ ಕಡಿಮೆಯಿದ್ದರೆ ಜನಿಸಿದ ಶಿಶುಗಳನ್ನು ಕಡಿಮೆ ಅಪಾಯ ಎಂದು ವರ್ಗೀಕರಿಸಲಾಗುತ್ತದೆ. ಈ ಮಕ್ಕಳಿಗೆ ಔಷಧವನ್ನು ಆರು ವಾರಗಳವರೆಗೆ ನೀಡಲಾಗುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿ ART ತೆಗೆದುಕೊಳ್ಳದಿದ್ದರೆ, 32 ರಿಂದ 36 ವಾರಗಳ ನಡುವೆ ತಾಯಿಯು ವೈರಲ್ ಲೋಡ್ ಪರೀಕ್ಷೆಯನ್ನು ಮಾಡದಿದ್ದರೆ, 32 ರಿಂದ 36 ವಾರಗಳಲ್ಲಿ ಒಂದು ಸಾವಿರ ಪ್ರತಿಗಳು/ಮಿಲಿಗಿಂತ ಹೆಚ್ಚಿನ ವೈರಲ್ ಲೋಡ್ ಪ್ರತಿಗಳು ಜನಿಸಿದರೆ ಜನಿಸಿದ ಶಿಶುಗಳು ಹೆಚ್ಚಿನ ಅಪಾಯ ವರ್ಗಕ್ಕೆ ಒಳಗಾಗುತ್ತವೆ. ಅಂತಹ ಮಕ್ಕಳಿಗೆ ಮತ್ತು ತಾಯಿ ಮಗುವಿಗೆ ಹಾಲುಣಿಸಿದ ಮಕ್ಕಳಿಗೆ ಹನ್ನೆರಡು ವಾರಗಳವರೆಗೆ ಎರಡು ಔಷಧಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ, ತಾಯಿ ಮಗುವಿಗೆ ಹಾಲುಣಿಸದಿದ್ದರೆ, ಚಿಕಿತ್ಸೆಯನ್ನು ಆರು ವಾರಗಳವರೆಗೆ ನೀಡಲಾಗುತ್ತದೆ.
ಎಚ್.ಐ.ವಿ ಪರೀಕ್ಷೆಯಿಲ್ಲದೆ ನೇರವಾಗಿ ಹೆರಿಗೆಯಲ್ಲಿ ಕಾಣಿಸಿಕೊಳ್ಳುವ ಮಹಿಳೆಯರು ಎಚ್.ಐ.ವಿ. ಪರೀಕ್ಷೆಗೆ ಒಳಗಾಗುತ್ತಾರೆ ಹಾಗೂ ಎಚ್.ಐ.ವಿ. ಸೋಂಕಿತ ಪೋಷಕರಿಗೆ ಜನಿಸಿದ ಮಗುವನ್ನು ಆರು ವಾರಗಳು, ಆರು ತಿಂಗಳುಗಳು, ಹನ್ನೆರಡು ತಿಂಗಳುಗಳು ಮತ್ತು ಹದಿನೆಂಟು ತಿಂಗಳುಗಳಲ್ಲಿ ಒಟ್ಟು ನಾಲ್ಕು ಬಾರಿ ಪರೀಕ್ಷಿಸಲಾಗುತ್ತದೆ. ಎಚ್.ಐ.ವಿ. ಸೋಂಕಿತ ತಾಯಂದಿರಿಗೆ ಜನಿಸಿದ ಶಿಶುಗಳಿಗೆ ಆರು ವಾರದ ವಯಸ್ಸಿನಲ್ಲಿ ಎಚ್.ಐ.ವಿ. ರಕ್ತ ಪರೀಕ್ಷೆ ಮಾಡಲಾಗುತ್ತದೆ. ಆರು ತಿಂಗಳು ಅಥವಾ ಅನಂತರ ಕಾಣಿಸಿಕೊಳ್ಳುವ ಶಿಶುಗಳನ್ನು ಮೂರು ಪ್ರತಿಕಾಯ ಆಧಾರಿತ ಪರೀಕ್ಷೆಗಳೊಂದಿಗೆ ಪರೀಕ್ಷಿ ಸಬಹುದು. ಮಗುವಿನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಮಗುವಿಗೆ ART ಚಿಕಿತ್ಸೆ ನೀಡಲಾಗುತ್ತದೆ. ಆರು ವಾರಗಳಲ್ಲಿ ಮಗುವಿನ ಪರೀಕ್ಷೆಯು ಪಾಸಿಟಿವ್ ಆಗಿದ್ದರೆ, ಎರಡು ವರ್ಷಗಳ ಕಾಲ ಸ್ತನ್ಯಪಾನವನ್ನು ಮುಂದುವರಿಸಲು ತಾಯಿಗೆ ಸಲಹೆ ನೀಡಲಾಗುತ್ತದೆ, ಆರು ವಾರಗಳು, ಆರು ತಿಂಗಳುಗಳು ಮತ್ತು ಹನ್ನೆರಡು ತಿಂಗಳುಗಳಲ್ಲಿ ಮಕ್ಕಳ ಪರೀಕ್ಷೆಯು ನಕಾರಾತ್ಮ ಕವಾಗಿದ್ದರೆ, ಹನ್ನೆರಡು ತಿಂಗಳುಗಳಲ್ಲಿ ಸ್ತನ್ಯಪಾನವನ್ನು ನಿಲ್ಲಿಸಲು ತಾಯಿಗೆ ಸಲಹೆ ನೀಡಲಾಗುತ್ತದೆ. ಎಚ್.ಐ.ವಿ. ಸೋಂಕನ್ನು ತಡೆಗಟ್ಟಲು ಅಪಾಯದ ಆಧಾರದ ಮೇಲೆ ಶಿಶುಗಳಿಗೆ ಒಂದೇ ತೆರನಾದ ಔಷಧ ಅಥವಾ ಎರಡು ತೆರನಾದ ಔಷಧ ಚಿಕಿತ್ಸೆಯನ್ನು ನೀಡಲಾಗುತ್ತದೆ ಮತ್ತು ತಾಯಿಗೆ ART ಅನ್ನು ಮುಂದು ವರಿಸಲು ಸಲಹೆ ನೀಡಲಾಗುತ್ತದೆ. ಒಮ್ಮೆ ಮಗುವಿಗೆ ಎಚ್.ಐ.ವಿ. ಪಾಸಿಟಿವ್ ಎಂದು ಪರಿಗಣಿಸಿದರೆ, ಮಗುವಿಗೆ ಸಹ ART ನೀಡಲಾಗುತ್ತದೆ. ಅಲ್ಲದೇ ಆ್ಯಂಟಿಬಯೋಟಿಕ್‌ನ್ನು ಸೋಂಕಿತ ಪೋಷಕರಿಗೆ ಜನಿಸಿದ ಆರು ವಾರಗಳ ವಯಸ್ಸಿನಿಂದ ನೆಗೆಟಿವ್‌ವಾಗಿ ಸಾಬೀತಾಗುವವರೆಗೆ ಎಲ್ಲ ಮಕ್ಕಳಿಗೆ ನೀಡ ಲಾಗುತ್ತದೆ. ಒಂದು ವೇಳೆ ಮಗುವು ಪಾಸಿಟಿವ್‌ವಾಗಿದ್ದರೆ, ಇತರ ಬ್ಯಾಕ್ಟೀರಿಯಾದ ಸೋಂಕು ತಡೆಗಟ್ಟಲು ಐದು ವರ್ಷ ವಯಸ್ಸಿನವರೆಗೆ ಅದನ್ನು ಮುಂದುವರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಸಾಮಾನ್ಯ ಜನರಿಗೆ ರೋಗ ಹರಡುವ ವಿಧಗಳು, ತಡೆಯುವ ಮಾರ್ಗಗಳು ಹಾಗೂ ಮುಖ್ಯವಾಗಿ ಮುಗ್ದ ಮಕ್ಕಳಿಗೆ ಪೋಷಕರಿಂದ ಹುಟ್ಟುವಾಗಲೇ ಸೋಂಕು ಪಡೆಯು ವುದನ್ನು ತಡೆಯುಲು ಇರುವ ಸರಕಾರದ ಎಲ್ಲ ಕಾರ್ಯ ಕ್ರಮಗಳನ್ನು ತಿಳಿದುಕೊಂಡು ಇತರರಿಗೆ ತಿಳಿಸಲು ಸಮುದಾಯದ ಜನರು, ಮುಖಂಡರು ಮುಂದಡಿ ಇಡಬೇಕಾಗಿದೆ.
ಡಾ| ಅಶ್ವಿನಿ ಕುಮಾರ್ ಗೋಪಾಡಿ