Advertisement
ಬ್ರಹ್ಮಾವರ: ಕಳೆದ ಬೇಸಗೆಯಲ್ಲಿ ಮುಖ್ಯವಾಗಿ ಚೇರ್ಕಾಡಿ ಪಂಚಾಯತ್ ವ್ಯಾಪ್ತಿಯ ಪ್ರಗತಿನಗರ, ಗಂಗಾಡಿ, ಜಾರ್ಜೆಡ್, ಹುತ್ತಿ ಪರುಬೆಟ್ಟು ಮೊದಲಾದೆಡೆ ಹಾಹಾಕಾರ ಎದ್ದಿತ್ತು. ಅಂತರ್ಜಲ ಕುಸಿತಗೊಂಡ ಪರಿಣಾಮ 6 ಬೋರ್‌ವೆಲ್, ಎರಡು ಬಾವಿ ನಿರುಪಯುಕ್ತವಾಗಿವೆ.
ಹೇರೂರು ಹೊಳೆಬದಿ, ಭಂಡಾÕಲೆಬೆಟ್ಟು, ಬದನೆಕಾಡು, ರಾಜೀವನಗರ, ಮಾರಿಕಟ್ಟೆ, ಕೊಳಂಬೆಯಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಈ ಬಾರಿ ಮಾರಿಕಟ್ಟೆಯಲ್ಲಿ ಹೊಸ ಬೋರ್‌ವೆಲ್ ಹಾಗೂ ಪೈಪ್‌ಲೈನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
Related Articles
ಕರ್ಜೆಯ ತಡಾಲಿನಲ್ಲಿ ಮದಗದ ಹೂಳೆತ್ತಲಾಗಿದ್ದು, ಬಾಳೆಬೆಟ್ಟು, ದರ್ಖಾಸು, ಕುರ್ಪಾಡಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಆದರೆ ಕಡಂಗೋಡು, ಬ್ರಾಹ್ಮಣರಬೆಟ್ಟು, ಹಾಡಿಬೆಟ್ಟು, ಕೆಳಬೆಟ್ಟು, ಗುಂಡಾಳ, ನೂಜಿ, ಆಲಡ್ಕ, ತಳಬ, ಕಂಗಿಬೆಟ್ಟು, ಮರ್ಡಿ, ಸರಂಬಳ್ಳಿ, ತೆಂಕಬೈಲು, ಕುಕ್ಕುಡೆ, ನೆಕ್ಕರಾಡಿ, ಉದ್ದಳ್ಕ ಪ್ರದೇಶದ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
Advertisement
ಹೆಗ್ಗುಂಜೆಯಲ್ಲಿ ಕಾಮಗಾರಿ:ಕಾಡಿನಕೊಡೆR ಬಳಿ ಸೀತಾ ನದಿಯಿಂದ ಪೈಪ್‌ಲೈನ್ ಮೂಲಕ ನೀರನ್ನು ತಂದು ಪಂಚಾಯತ್ ಬಳಿ ಸಂಸ್ಕರಿಸಿ ವಿತರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಪಂಚಾಯತ್ ಬಳಿ 1 ಲಕ್ಷ ಲೀ. ನ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಇದರಿಂದ ಮಂದಾರ್ತಿ ಪೇಟೆ, ನಾಕೋಡಿ, ನೀರ್ಜೆಡ್, ಹಂದಿಗದ್ದೆ, ಒಳಮಕ್ಕಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಆದರೆ ಜಾರ್ಕಲ್, ಹೆಮ್ಮಣಿಕೆ, ಬಾರಾಳಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಈ ಭಾಗದಲ್ಲಿ ಮತ್ತೆ ನಾಲ್ಕು ಬೋರ್‌ವೆಲ್ ವಿಫಲವಾಗಿವೆ. ಬಾರಕೂರಿನಲ್ಲಿ ಉಪ್ಪೂರು ನೀರು
ಬಾರಕೂರು ಪಂಚಾಯತ್ ವ್ಯಾಪ್ತಿಯ ಕಚ್ಚಾರು ಮೂಡಹಿತ್ಲು, ಕಳುವಿನ ಬಾಗಿಲು, ಹಾಲೆಕೊಡಿ, ಅಜ್ಜಿಮನೆ ಬೆಟ್ಟು, ರಾಯರ ತೋಟ, ದೇವಾಡಿಗರ ಬೆಟ್ಟು, ಹೊಸಾಳ, ಗರಡಿ ವಠಾರ, ನಾಗರಮಠ, ಬದನಗೋಳಿ, ಬಾಯರ್‌ಬೆಟ್ಟು, ಜಪRಳಿ ಕುದ್ರು ಮೊದಲಾದೆಡೆ ಉಪ್ಪು, ಕೆಂಪು ನೀರಿನ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಪ್ರಸ್ತುತ ಬಾರಕೂರು ಆಸ್ಪತ್ರೆ ಹಾಗೂ ಹೊಸಾಳ ಶಾಲೆ ಬಳಿಯ ಟ್ಯಾಂಕ್‌ನಿಂದ ನೀರು ಪೂರೈಸಲಾಗುತ್ತಿದೆ. ಆದರೆ ಟ್ಯಾಂಕಿ ನೀರಿನ ಒತ್ತಡ ಸಾಲುತ್ತಿಲ್ಲ. ಬಹುತೇಕ ಕಡೆ ಉಪ್ಪು ನೀರಿನ ಸಮಸ್ಯೆಯಿಂದ ಬೇಸಗೆಯಲ್ಲಿ ಟ್ಯಾಂಕರ್ ನೀರು ಅನಿವಾರ್ಯವೆನಿಸಿದೆ. ಹಾರಾಡಿ ಗ್ರಾ.ಪಂ.
ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ವಲಸೆ ಕಾರ್ಮಿಕರ ಪ್ರದೇಶದಲ್ಲಿ ಹೊಸ ಬಾವಿಯಾಗಿದೆ. ಕುಕ್ಕುಡೆ ಎಸ್‌ಸಿ ಕಾಲೋನಿಗೆ ಬಾವಿ ಮಂಜೂರಾಗಿದೆ. ಕೊಳ್ಕೆಕೆರೆಯಲ್ಲಿ ಬಾವಿ ದುರಸ್ತಿ, ಜಿ.ಎಂ. ಹಿಂಭಾಗದ ಬಾವಿಗೆ ಫಿಲ್ಟರ್‌ಗೆ ಪ್ರಸ್ತಾವನೆ ಇದೆ. ಗಾಂಧಿನಗರ ವ್ಯಾಪ್ತಿಯವರಿಗೆ ಖಾಸಗಿ ಬಾವಿಯಿಂದ ಪೂರೈಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮಟಪಾಡಿ ಬಳ್ಳಿಕೆರೆಯಲ್ಲಿ ಹೊಸ ಬಾವಿ ನಿರ್ಮಿಸಲಾಗಿದ್ದು, ಬಲ್ಜಿಯ ಸಮಸ್ಯೆ ನೀಗಲಿದೆ. ಕಳೂ¤ರು ಗ್ರಾ.ಪಂ.ನ ಕೊಠಾರಿಬೆಟ್ಟು, ಕೋಂಬೆ, ಹೊಗೆ ಬೆಳಾರ, ಸುಳ್ಳಿ, ಮುಲ್ಕಿ, ಕೆಂಜೂರಿನ ಪೂಜಾರಿಬೆಟ್ಟು, ಅಮುಜಿಯಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಪ್ರಸ್ತುತ ವರ್ಷ ಕಾಯಿನಾಡಿಗೆ ಪೈಪ್ ಲೈನ್ ಆಗಿದೆ. ಹೊಸ ಟ್ಯಾಂಕ್ ಆಗಲಿದೆ. ಕೆಂಜೂರಿನ ಜಾಂಗಾಲ್‌ನಲ್ಲಿ ಟ್ಯಾಂಕ್, ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕೂರು ಗ್ರಾಮದ ಕಜೆR, ಮಿಯಾರು, ಕೋಡ್‌ಜಡ್ಡು, ಮರಿಯಣ್ಣಮಕ್ಕಿ, ಮಾರಾಳಿ, ಚಂದಾಳಕಟ್ಟೆಯಲ್ಲಿ ಸಮಸ್ಯೆ ತಲೆದೋರಿತ್ತು. ಈ ಬಾರಿ ಕೋಡ್‌ಜಡ್ಡು, ತೊಟ್ಲಕಲ್ಲಿನಲ್ಲಿ ಹೊಸ ಬಾವಿಯ ಪ್ರಸ್ತಾವನೆ ಇಡಲಾಗಿದೆ. ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ. ಶೀಘ್ರ ಪರಿಹಾರದ ಭರವಸೆ
ಸೀತಾನದಿಯಿಂದ ಜಾರ್ಜೆಡ್ಡಿಗೆ ನೀರನ್ನು ತರುವ ಶಾಶ್ವತ ಯೋಜನೆ ಪ್ರಗತಿಯಲ್ಲಿದೆ. ವಿದ್ಯುತ್‌ತ್ಛಕ್ತಿ ಕೆಲಸ ನಡೆಯುತ್ತಿದೆ. ಈಗಿರುವ ಪೈಪ್‌ಲೈನ್‌ನಲ್ಲಿ ಎ.15ರ ಒಳಗೆ ಕುಡಿಯುವ ನೀರು ಪೂರೈಸುವ ಭರವಸೆ ಇದೆ. ಜೂನ್ ತಿಂಗಳ ಒಳಗೆ ಟ್ಯಾಂಕ್ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ.
-ಹರೀಶ್ ಶೆಟ್ಟಿ
ಅಧ್ಯಕ್ಷರು, ಚೇರ್ಕಾಡಿ ಗ್ರಾ.ಪಂ. ಪ್ರಸ್ತಾವನೆ ಇದೆ
ಹೆರಂಜೆ ಕಿಂಡಿ ಅಣೆಕಟ್ಟು ಬಳಿಯ ಬಾವಿಯಲ್ಲಿ ಹೇರಳ ನೀರಿದ್ದರೂ ಬೇಸಗೆಯಲ್ಲಿ ಉಪ್ಪಿನ ಅಂಶದಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಮಾರಿಕಟ್ಟೆಯಲ್ಲಿ ಹೊಸ ಬೋರ್‌ವೆಲ್ ಹಾಗೂ ಪೈಪ್‌ಲೈನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಮೀರಾ ಆರ್.
ಪಿಡಿಒ ಚಾಂತಾರು