ಕರ್ನಾಟಕ ಪ್ರಾಂತ ರೈತ ಸಂಘ ಸಿಐಟಿಯು, ಗ್ರಾಮ ಪಂಚಾಯತಿ ನೌಕರ ಸಂಘ, ಅಂಗನವಾಡಿ, ಬಿಸಿಯೂಟ, ಕರ್ನಾಟಕ ದಲಿತ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಸಭೆಯಲ್ಲಿ ಈ ಕುರಿತಂತೆ ನಿರ್ಣಯ ಸ್ವೀಕರಿಸಲಾಗಿದೆ. ಕಾರ್ಮಿಕ ಮುಖಂಡ ಅಣ್ಣಾರಾಯ ಈಳಿಗೇರ ಅಧ್ಯಕ್ಷತೆಯಲ್ಲಿ ಜರುಗಿದ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಂತದಲ್ಲಿ ಮಾತನಾಡಿದ ಅಣ್ಣಾರಾಯ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಲಿಲ್ಲ.
Advertisement
ದೇಶದ ಜನರಿಗೆ ಅಚ್ಛೇ ದಿನ್ ಆಗಮಿಸಲಿವೆ ಎಂಬ ಭರವಸೆ ಭ್ರಮನಿರಸನ ಸೃಷ್ಟಿಸಿದೆ. ವಿದೇಶದಲ್ಲಿರುದ ಲಕ್ಷಾಂತರ ಕೋಟಿ ರೂ. ಕಪ್ಪು ಹಣ ಭಾರತಕ್ಕೆ ತಂದು, ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವ ಭರವಸೆ ಈಡೇರಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಗೊಳ್ಳಲಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕಬೆಲೆ ಘೋಷಣೆ ಆಗಿಲ್ಲ. ಅವರ ಸಂಕಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ. ನೀರಾವರಿ ಯೋಜನೆಗಳು ಅನುಷ್ಠಾನಗೊಳಿಸಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಕಾರಣವಾಗಿರುವ ಗುತ್ತಿಗೆ ಪದ್ಧತಿ ರದ್ದತಿ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ಹಂತದಲ್ಲಿ ಹೋರಾಟ ನಡೆಸಲಾಗುತ್ತಿದೆ. ಇದಕ್ಕಾಗಿ ಆ.9ರಂದು ಜೈಲ ಬರೋ ಮತ್ತು ಆ.14ರಂದು ಕರಾಳ ದಿನಾಚರಣೆ ಹಮ್ಮಿಕೊಳ್ಳಲು ನಿರ್ಧರಿಸಲಾಗುತ್ತಿದೆ ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಸುರೇಖಾ ರಜಪೂತ, ಭಾರತಿ ವಾಲಿ, ಲಕ್ಷ್ಮಣ ಹಂದ್ರಾಳ, ಸುನಂದಾ ನಾಯಕ, ಸುಮಂಗಲಾ ಆನಂದಶೆಟ್ಟಿ, ಶೈಲಜಾ ಮುಲ್ಲಾ, ಅಶ್ವಿನಿ ತಳವಾರ, ಮಾದೇವಿ ಗುಗ್ಗರಿ, ಪಂಚಾಯತಿ ನೌಕರರ ರಾಜ್ಯದ ಸದಸ್ಯ ವಿಠ್ಠಲ ಹೊನಮೋರೆ, ಸಂಗು ನಾಲ್ಕಮಾನ, ಸೋಮಲಿಂಗ ತೋಂಟಾಪುರ, ಎನ್.ಕೆ.ಗುಡಿಮನಿ, ರಂಗಪ್ಪ ದಳವಾಯಿ, ಎಂ.ಕೆ. ಚಳ್ಳಗಿ, ದೇವದಾಸಿ ಸಂಘದ ರೇಣುಕಾ ಯಂಟಮಾನ, ಪರಶುರಾಮ ಮಂಟೂರ, ಸಿದ್ಧರಾಮ ಬಂಗಾರಿ, ಭೀಮರಾಯ ಪೂಜೇರಿ ಇತರರು ಉಪಸ್ಥಿತರಿದ್ದರು.