Advertisement

ಮಜೂರಿ ಹೆಚ್ಚಳಕ್ಕಾಗಿ ಆಗ್ರಹಿಸಿ ನೇಕಾರರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

05:58 PM Feb 03, 2022 | Team Udayavani |

ರಬಕವಿ-ಬನಹಟ್ಟಿ : ಕಳೆದ ಹಲವಾರು ದಿನಗಳಿಂದ ಮಜೂರಿ ಹೆಚ್ಚಳಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಜೋಡಣಿದಾರ ನೇಕಾರರು ಗುರುವಾರ ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ನೂರಾರೂ ನೇಕಾರರು ಘೋಷಣೆ ಕೂಗುತ್ತಾ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಕಳೆದ ಎಂಟು ದಿನಗಳಿಂದ ಮಗ್ಗಗಳನ್ನು ಬಂದ್ ಮಾಡಿಕೊಂಡಿದ್ದರಿಂದ ನೇಕಾರರ ಆರ್ಥಿಕ ಪರಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅದು ಇನಷ್ಟು ಹದಗೆಡುವ ಮುಂಚೆ ತಾವು ಮಧ್ಯ ಪ್ರವೇಶಿಸಿ ರಬಕವಿಯಲ್ಲಿ ಹೆಚ್ಚಳವಾದಂತೆ ಇಲ್ಲಿ ಬನಹಟ್ಟಿಯಲ್ಲಿಯೂ ಹೆಚ್ಚಳ ಮಾಡಬೇಕೆಂದು ಮಾಲಿಕರಲ್ಲಿ ತಿಳಿಸಬೇಕು ಇಲ್ಲವಾದಲ್ಲಿ ನಮ್ಮ ಕುಟುಂಬಗಳು ಬೀದಿಗೆ ಬಿದ್ದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಕಾರಣ ಈ ಕೂಡಲೇ ಜೋಡಣಿದಾರ ನೇಕಾರರ ಮಜೂರಿ ಹೆಚ್ಚಳ ಬಿಕ್ಕಟ್ಟನ್ನು ಬಗೆಹರಿಸಲು ಮಧ್ಯ ಪ್ರವೇಶಿಸಬೇಕು ಎಂದು ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮುಖಂಡರು ಮನವಿ ಅರ್ಪಿಸಿದರು.

ಈ ವೇಳೆ ವಿಷಯ ಅರಿತ ಶಾಸಕ ಸಿದ್ದು ಸವದಿ ಸ್ಥಳಕ್ಕೆ ಆಗಮಿಸಿ ನಾಳೆ ಶುಕ್ರವಾರ ಮುಂಜಾನೆ ೮ ಗಂಟೆಗೆ ಮಾಲೀಕರ ಮುಖಂಡರನ್ನು ಕರೆಯಿಸಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡುವ ಬರವಸೆ ನೀಡಿದರು.

ಸಂದರ್ಭದಲ್ಲಿ ಕುಬೇರ ಸಾರವಾಡ, ಶಿವಲಿಂಗ ಟಿರಕಿ, ಪರಮಾನಂದ ಬಾವಿಕಟ್ಟಿ, ಸುರೇಶ ಮಠದ, ಆನಂದ ಜಗದಾಳ, ಸಂಗಪ್ಪ ಉದಗಟ್ಟಿ, ಸಂತೋಷ ಮಾಚಕನೂರ ಸೇರಿದಂತೆ ನೂರಾರೂ ಜೋಡಣಿದಾರ ನೇಕಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next