Advertisement

ಬಾಕಿ ವೇತನ ಪಾವತಿಗೆ ಕಾರ್ಮಿಕರ ಆಗ್ರಹ 

04:02 PM Jul 26, 2018 | Team Udayavani |

ಹುಬ್ಬಳ್ಳಿ: ಪೌರ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಬೇಕೆಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಪಾಲಿಕೆ ಆವರಣದಲ್ಲಿ ಬುಧವಾರ ಧರಣಿ ನಡೆಸಲಾಯಿತು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೂನ್‌ 20ರೊಳಗೆ 3 ತಿಂಗಳ ಬಾಕಿ ವೇತನ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಆಯುಕ್ತರು ವೇತನ ನೀಡಿಲ್ಲ. ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಬೇಕೆಂದು ಉಚ್ಚ ನ್ಯಾಯಾಲಯ ಆದೇಶಿಸಿದ್ದರೂ ವೇತನ ನೀಡುತ್ತಿಲ್ಲ ಎಂದು ಆರೋಪಿಸಿದರು. 

Advertisement

ನಕಲಿ ಕಾರ್ಮಿಕರ ಹಾವಳಿಯನ್ನು ತಡೆಗಟ್ಟಲು ಪಾಲಿಕೆ ಅಧಿಕಾರಿಗಳು ವಿಫ‌ಲಗೊಂಡಿದ್ದಾರೆ. ನಕಲಿ ಕಾರ್ಮಿಕರು ಬಯೋಮೆಟ್ರಿಕ್‌ ಹಾಜರಿ ಹಾಕುವುದನ್ನು ಪ್ರಶ್ನಿಸಿದ್ದಕ್ಕೆ ಗುತ್ತಿಗೆ ಪೌರ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತದೆ. 26 ಗುತ್ತಿಗೆ ಪೌರ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆ. ಪೌರ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಕೂಡಲೇ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಲಾಯಿತು. ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಂಪುರ, ಕಸ್ತೂರೆವ್ವ ಬೆಳಗುಂದಿ, ನಾಗಮ್ಮ ಗೊಲ್ಲರ, ಕನಕಪ್ಪ ಕೊಟಬಾಗಿ, ಸೋಮು ಮೊರಬದ, ಪರಶುರಾಮ ಕಡಕೋಳ, ಶರಣಪ್ಪ ಅಮರಾವತಿ ಮೊದಲಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next