Advertisement

ಸೇವಾಭಾವದಿಂದ ಕಾರ್ಯನಿರ್ವಹಿಸಿ

03:29 PM Jan 21, 2021 | Team Udayavani |

ಕಲಘಟಗಿ: ಹಿರಿಯರ ಸೇವಾ ಕೈಂಕರ್ಯದ ಫಲವಾಗಿ ದೊರಕಿರುವ ಸರಕಾರಿ ನೌಕರಿಯನ್ನು ಸುವ್ಯವಸ್ಥಿತವಾಗಿ ಸೇವಾ ಮನೋಭಾವದಿಂದ ನಿರ್ವಹಿಸಿದಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಆರೋಪ ಬಾರದಂತೆ ತಡೆಯಲು ಸಾಧ್ಯವೆಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು. ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಅನಿರೀಕ್ಷಿತ ಭೇಟಿ ನೀಡಿ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಹಾಗೂ ಚಲನವಲನ ಪುಸ್ತಕದ ಪರಿಶೀಲನೆ ನಡೆಸಿ ಮಾತನಾಡಿದರು.

Advertisement

ತಾಲೂಕಿನ ವಿವಿಧ ಕಚೇರಿಗಳಲ್ಲಿನ ಹೆಚ್ಚಿನ ಸಂಖ್ಯೆಯ ನೌಕರರು ನಿಗದಿತ ಸಮಯಕ್ಕೆ ಕಚೇರಿಗೆ ಬಾರದೇ ಸಾರ್ವಜನಿಕರ ದೂರು ದುಮ್ಮಾನಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದರ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಅನೇಕರು ಸೇವಾ ಸಮಯದಲ್ಲಿ ತಮ್ಮ ಸ್ಥಾನದಲ್ಲಿರದೇ ಸಾರ್ವಜನಿಕರಿಗೆ ಸಮರ್ಪಕವಾಗಿ ಸೇವೆ ಒದಗಿಸುತ್ತಿಲ್ಲ ಎಂಬ ಆಪಾದನೆಗಳೂ ಕೇಳಿ ಬರುತ್ತಲಿದೆ. ಕಂದಾಯ ಇಲಾಖೆ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಏಜಂಟರ ಹಾವಳಿ, ಭ್ರಷ್ಟಚಾರ, ನೌಕರರ ಅನ  ಧಿಕೃತ ಗೈರುಗಳ ಕುರಿತು ಆರೋಪಗಳು ಕೇಳಿ ಬರುತ್ತಿದ್ದು, ತಾವು ಈ ಕುರಿತು ಈಗಾಗಲೇ ಸಭೆ ನಡೆಸುವ ಮೂಲಕ ಎಚ್ಚರಿಕೆಯನ್ನೂ ನೀಡಲಾಗಿದೆ. ಹೀಗಿದ್ದಾಗ್ಯೂ ಎಚ್ಚೆತ್ತುಕೊಳ್ಳದೇ ಇದೇ ಪ್ರವೃತ್ತಿ ಮುಂದುವರಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಲಿಖೀತ ನಿರ್ದೇಶನ ನೀಡಬೇಕಾದೀತೆಂದು ಹೇಳಿದರು.

ಇದನ್ನೂ ಓದಿ:ನಾಳೆ ಕಲಬುರಗಿಯಲ್ಲಿ ಶಿವಾಚಾರ್ಯರ ಸಮಾವೇಶ

ಪ್ರತಿಯೊಬ್ಬರೂ ಸೇವಾ ಮನೋಭಾವ ರೂಢಿಸಿಕೊಳ್ಳುವಂತೆ ಸೂಚಿಸಿದರಲ್ಲದೇ ತಪ್ಪೆಸಗುವವರ ಮೇಲೆ ಕ್ರಮ ಜರುಗಿಸಿ ಮಾಹಿತಿ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. ತಪ್ಪಿತಸ್ಥ ಹಲವರಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್‌ ನೀಡಲಾಗಿದ್ದು, ಮುಂದಿನ ಕ್ರಮಕ್ಕೆ ಹಿರಿಯ ಅಧಿ ಕಾರಿಗಳ ಮಾರ್ಗದರ್ಶನ ಪಡೆಯಲಾಗುವುದೆಂದು ತಹಸೀಲ್ದಾರ್‌ ಅಶೋಕ ಶಿಗ್ಗಾವಿ ತಿಳಿಸಿದರು. ಶಿರಸ್ತೇದಾರರಾದ ಬಸವರಾಜ ಅಂಗಡಿ, ಸುರೇಶ ಅಡವಿ, ಬಸವರಾಜ ತಾಮರೆ ಸೇರಿದಂತೆ ಬಹುತೇಕ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next